ನವೆಂಬರ್ ತಿಂಗಳಲ್ಲಿ ಗುರು ಬದಲಾವಣೆ : ನಿಮ್ಮ ರಾಶಿಯ ಮೇಲೆ ಬೀರಬಹುದಾದ ಪರಿಣಾಮವೇನು ಗೊತ್ತಾ…?

2019 ನವೆಂಬರ್ 4 ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಗುರು ಗ್ರಹ ಜ್ಯೇಷ್ಠ ನಕ್ಷತ್ರ 4ನೇ ಪಾದ ವೃಷ್ಚಿಕ ರಾಶಿಯಿಂdದ ಮುಂದೆ ಹೋಗಿ ಮೂಲ ನಕ್ಷತ್ರ 1 ನೇ ಪಾದ ಧನು ರಾಶಿಗೆ ಪ್ರವೇಶ ಮಾಡುತ್ತಾನೆ.

ಗುರು ಗ್ರಹದ ಈ ಸಂಚಾರದಿಂದಾಗಿ ದ್ವಾದಶ ರಾಶಿಯ ಗುರು ಬಲದ ವಿಚಾರದಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ. ಈ ಕಾರಣ ಯಾವ ಯಾವ ರಾಶಿಗೆ ಗುರು ಬಲ ಬರಲಿದೆ ಮತ್ತು ಯಾವ ಯಾವ ರಾಶಿಗಳಿಗೆ ಗುರು ಬಲ ಮುಗಿಯಲಿದೆ ಅನ್ನುವುದನ್ನು ಖ್ಯಾತ ಜ್ಯೋತಿಷಿಗಳಾದ ವಿಠ್ಠಲ ಭಟ್ ಕೆಕ್ಕಾರು ವಿವರಿಸಿದ್ದಾರೆ.

ಗುರು ಬಲ ಪಡೆಯುವ ರಾಶಿಗಳು :  ಮೇಷ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿ
ಗುರು ಬಲ ಕಳೆದುಕೊಳ್ಳುವ ರಾಶಿಗಳು : ವೃಷಭ ರಾಶಿ, ಕರ್ಕಾಟಕ ರಾಶಿ, ತುಲಾ ರಾಶಿ, ಮಕರ ರಾಶಿ
ಗುರು ಸಂಚಾರದಿಂದಾಗಿ ಗುರು ಬಲದಲ್ಲಿ ಯಾವುದೇ ವ್ಯತ್ಯಾಸ ಕಾಣದ ರಾಶಿಗಳು:  ಕನ್ಯಾ ರಾಶಿ, ಧನು ರಾಶಿ

( ಒಟ್ಟು ನಾಲ್ಕು ಭಾಗದಲ್ಲಿ ಈ ಸರಣಿ ಲೇಖನ ಮಾಲೆ ಪ್ರಕಟವಾಗಲಿದ್ದು, ನಿಮಗೆ ಯಾವುದಾದರೂ ಸಂಶಯಗಳಿದ್ದಲ್ಲಿ ಜ್ಯೋತಿಷಿ ವಿಠ್ಠಲ ಭಟ್ ಕೆಕ್ಕಾರು ಅವರನ್ನು 9845682380 ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.)

ಗುರು ಬದಲಾವಣೆಯಿಂದ ಮೊದಲ ಮೂರು ರಾಶಿಗಳ ಮೇಲಾಗುವ ಲಾಭ ನಷ್ಟದ ವಿವರ ಇಲ್ಲಿದೆ.

ಮೇಷ : ಈ ರಾಶಿಯವರಿಗೆ ಸಂತಸದ ಸುದ್ದಿ. ನಿಮಗೆ ಗುರು ಬಲ ಪ್ರಾರಂಭವಾಗುತ್ತಿದೆ. ಅನಾರೋಗ್ಯ ಹಾಗೂ ನಾನಾ ವಿಧದ ಇತರೆ ಬಾಧೆಗಳನ್ನು ಕಷ್ಟಗಳನ್ನು ಅಷ್ಟಮದ ಗುರುವಿನಿಂದಾಗಿ ಹಿಂದಿನ ವರ್ಷದಿಂದ ಈಗಿನ ತನಕ ಒಂದು ವರ್ಷ ಕಾಲ ಅನುಭವಿಸಿದ ನಿಮಗೆ ಈಗ ಗುರು ಬಲ ಪ್ರಾರಂಭವಾಗಿ ನಿಮ್ಮಲ್ಲಿ ಸಹ ಶಕ್ತಿ ಚೈತನ್ಯ ತುಂಬುತ್ತದೆ, ಅಷ್ಟೇ ಅಲ್ಲ ಅವಿವಾಹಿತರಿಗೆ ವಿವಾಹ ಭಾಗ್ಯ ಸಂತಾನ ಇಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಸಹ ದೊರೆಯಲಿದೆ.

ಇನ್ನು ಸ್ತ್ರೀಯರು ಹೆಚ್ಚು ಅವಮಾನಗಳನ್ನು ಹಾಗು ಪುರುಷರು ಹೆಚ್ಚು ಆರೋಗ್ಯ ಬಾಧೆಗಳನ್ನು ಈ ತನಕ ಅನುಭವಿಸಿದ್ದೀರಿ. ಇನ್ನು ಆರೋಗ್ಯ ಸುಧಾರಿಸುತ್ತಾ ಬರುತ್ತದೆ ಹಾಗು ಕ್ರಮೇಣ ನಿಮಗೆ ಆಗುತ್ತಿದ್ದ ಅವಮಾನಗಳೂ ಸಹ ಕಡಿಮೆ ಆಗುತ್ತ ಬರುತ್ತದೆ. ಇಲ್ಲಿಯ ತನಕ ಪರಿಸ್ಥಿತಿಯನ್ನು ನೋಡಿ ಮಾತನಾಡುತಿದ್ದ ನೀವು ಈಗ ಇನ್ನು ಹೆಚ್ಚು ಸತ್ಯ ಹೇಳಲು ಆರಂಭಿಸುತ್ತೀರಿ.

ನಮ್ಮೊಂದಿಗೆ ಎನೂ ಮುಚ್ಚು ಮರೆ ಇಲ್ಲದೆ ಮಾತನಾಡುವವರನ್ನು ಇಷ್ಟ ಪಡುತ್ತೀರಿ. ಇನ್ನು ನಿಮಗೆ ಸ್ವಲ್ಪ ಜವಾಬ್ಧಾರಿ ಹೆಚ್ಚಾಗುತ್ತಿದೆ ಅನಿಸುತ್ತದೆ. ನಿಮ್ಮ ದುಡಿಮೆಯ ಆವಶ್ಯಕತೆ ನಿಮ್ಮ ಕುಟುಂಬಕ್ಕೆ ಎಷ್ಟರ ಮಟ್ಟಿಗೆ ಇದೆ ಎಂದು ಅರಿಯುತ್ತೀರಿ. ಇದೇ ವಿಚಾರ ಹೆಚ್ಚು ಮಾಡುತ್ತ ಕೆಲವರು ಮಾಡುತ್ತಿರುವ ಉದ್ಯೋಗದಲ್ಲಿ ಸಂಪಾದನೆ ಸಾಲದೇ ಆ ಕೆಲಸ ಬಿಟ್ಟು ವ್ಯಾಪಾರ ಮಾಡುವ ಆಲೋಚನೆಗಳನ್ನು ಸಹ ಮಾಡುತ್ತಾರೆ. ನಿಮ್ಮ ಮಕ್ಕಳ ವಿಚಾರದಲ್ಲಿ ಹೆಚ್ಚು ಚಿಂತೆ ಮಾಡುತ್ತ ಇರುತ್ತೀರಿ ಅವರ ಭವಿಷ್ಯ ರೂಪಿಸುವತ್ತ ನಿಮ್ಮ ಗಮನ ಹೆಚ್ಚಾಗುತ್ತದೆ.

ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ ಮಂತ್ರಿ ಆಗುವ ಸಂಭವ ಹೆಚ್ಚು ಇರುತ್ತದೆ. ಅತಿ ಕಡಿಮೆ ಪ್ರಯತ್ನ ಅಥವಾ ಪ್ರಯತ್ನವೇ ಇಲ್ಲದೇ ಪ್ರಖ್ಯಾತರಾಗುತ್ತೀರಿ. ಒಳ್ಳೆಯ ಹೆಸರು ಬರುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಇದ್ದು ಔಷಧ ಇಷ್ಟು ದಿನ ಕೆಲಸ ಮಾಡುತ್ತ ಇರಲಿಲ್ಲ ಎಂದಾದಲ್ಲಿ ಇನ್ನು ಉತ್ತಮ ವೈದ್ಯರು ವೈದ್ಯ ಪಧ್ದತಿ ಲಭಿಸಿ ಶೀಘ್ರ ಗುಣ ಮುಖರಾಗುತ್ತೀರಿ.

ವೃಷಭ : ನಿಮ್ಮ ರಾಶಿಯಿಂದ ಗುರು ಎಂಟನೇಯ ರಾಶಿಗೆ ಪ್ರವೇಶ ಆಗುತ್ತಿರುವುದರಿಂದ ನೀವು ಹಲವಾರು ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರ ಬೇಕಾಗುತ್ತದೆ ಕಾರಣ ನಿಮಗೆ ಗುರುಬಲ ಇನ್ನು ಇರೋದಿಲ್ಲ.

ಒಂದು ವರ್ಷದಿಂದ ಸಪ್ತಮದಲ್ಲಿ ಗುರು ಇದ್ದು ಪೂರ್ಣ ಗುರುಬಲ ಲಭಿಸಿ ಎಲ್ಲ ವಿಧದ ಸಮಸ್ಯೆಗಳಿಂದ ನಿರಾಯಾಸವಾಗಿ ಪಾರಾಗುತ್ತಿದ್ದ ನಿಮಗೆ ಇನ್ನು ಸಧ್ಯ ಒಂದು ವರ್ಷ ಕಾಲ ಆ ಸೌಭಾಗ್ಯ ಇಲ್ಲ. ಇಂಥಾ ಸಂದರ್ಭದಲ್ಲಿ ನೀವು ಬಹಳ ಪ್ರಮುಖವಾಗಿ ಗಮನ ಹರಿಸಬೇಕಾಗಿ ಇರುವುದು ನಿಮ್ಮ ಆರೋಗ್ಯದ ವಿಚಾರದಲ್ಲಿ. ಅದರಲ್ಲಿಯೂ ಸಹ ಅಸಿಡಿಟಿ ಗ್ಯಾಸ್ಟ್ರಿಕ್ ಅಜೀರ್ಣ ಮುಂತಾದ ಸಮಸ್ಯೆ ಇದ್ದಲ್ಲಿ ನಿಮ್ಮ ಆಹಾರ ಪದ್ದತಿ ಸರಿ ಮಾಡಿಕೊಳ್ಳಿ ಇನ್ನು ಒಂದು ವರ್ಷ ಕಾಲ ನೀವು ಆರೋಗ್ಯವನ್ನು ಬಹಳ ಜೋಪಾನವಾಗಿ ನೋಡಿಕೊಳ್ಳ ಬೇಕು.

ಹೊಸದಾಗಿ ವ್ಯಾಪಾರ ಪ್ರಾರಂಭಿಸುವ ಆಲೊಚನೆಗಳು ಇರುವವರು ಒಮ್ಮೆ ನಿಮ್ಮ ಜಾತಕ ಪರಿಶೀಲನೆ ಮಾಡಿಸಿ, ಅಷ್ಟೇ ಅಲ್ಲದೆ ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಬುದ್ದಿ ತಕ್ಷಣ ಬಿಡಬೇಕು. ನಿಮಗೆ ರೂಢಿ ಇಲ್ಲದ ಹವಾಮಾನ ಇರುವ ಸ್ಥಳಗಳಿಗೆ ಭೇಟಿ ಕೊಡಬೇಡಿ. ಅತೀ ಅನಿವಾರ್ಯ ಇಲ್ಲದಿರೆ ದೂರ ಪ್ರಯಾಣಗಳನ್ನು ವರ್ಜಿಸುವುದು ಉತ್ತಮ.

ಸಾಲ ಕೊಡಲು ಅಥವಾ ಕೊಡಿಸಲು ಹೋಗ ಬೇಡಿ ಕಾರಣ ಕೈಯಲ್ಲಿ ಈ ಹಿಂದಿನಂತೆ ಹೆಚ್ಚು ದುಡ್ದು ಓಡಾಡುವುದಿಲ್ಲ. ಕೆಲವರಿಗೆ ಅವರಿಗೆ ಇಷ್ಟ ಇಲ್ಲದ ಕಾರ್ಯವನ್ನು ಒತ್ತಾಯ ಮಾಡಿ ಅನಿವಾರ್ಯತೆ ಸೃಷ್ಟಿಸಿ ಮಾಡಿಸಲಾಗುತ್ತದೆ. ಇಲ್ಲಿ ಶುಭ ಫಲವನ್ನು ಸಹ ನೋಡುವುದಾದಲ್ಲಿ ನಿಮಗೆ ಅಪಮೃತ್ಯು ಭಯ ಇರುವುದಿಲ್ಲ. ಪ್ರಾಣಾಂತಿಕ ಅಥವಾ ಮಾರಣಾಂತಿಕ ಇದ್ದರೂ ಪ್ರಾಣಕ್ಕೆ ಕುತ್ತಿಲ್ಲ.

ಎಷ್ಟೇ ಕಷ್ಟವಾದರೂ ಸಹ ಸಧ್ಯ ಇರುವ ಕೆಲಸ ಬಿಟ್ಟು ಹೊಸ ಉದ್ಯೋಗ ಹುಡುಕುವ ಸಾಹಸ ಮಾಡಬೇಡಿ. ಕೆಲ ಅಪವಾದಗಳು ನಿಮ್ಮ ಮೇಲೆ ಬಂದು ನಿಮ್ಮ ಮಾನಸಿಕ ಸ್ಥೈರ್ಯ ಕುಗ್ಗಬಹುದು ಹಾಗಾಗದಂತೆ ನಿಮಗೆ ನೀವೇ ಧೈರ್ಯ ತುಂಬಿಕೊಳ್ಳಬೇಕು ಕಾರಣ ಹಿರಿಯರು ನಿಮಗೆ ಇನ್ನು ದುರ್ಲಭರು. ಚಿಂತೆ ಅಲ್ಲದಿದ್ದರೂ ಚಿಂತನೆ ಮಾಡುವ ವಿಚಾರ ಎಂದರೆ ನಿಮ್ಮವರೇ ನಿಮಗೆ ಶತ್ರುಗಳು ಆಗುತ್ತಾರೆ ಎನ್ನುವುದು ಅವರಿಂದ ಎಚ್ಚರ.

ಮಿಥುನ :  ಪರಿಸ್ಥಿತಿಗಳನ್ನು ಉತ್ತಮ ದೃಷ್ಟಿಕೋಣದಲ್ಲಿ ನೋಡಬೇಕು ಹಾಗೆ ಯೋಚಿಸಿ ನೋಡುವುದಾದಲ್ಲಿ ನೀವು ಅದೃಷ್ಟವಂತರು ಎಂದು ಹೇಳಬಹುದು ಕಾರಣ ಇಷ್ಟು ದಿನ ನೀವು ಅನುಭವಿಸಿದ ಕಷ್ಟಗಳು ಎದುರಿಸಿದ ಪರೀಕ್ಷೆಗಳನ್ನು ಹಾಗೆ ಇದ್ದವು ಆದರೆ ಇನ್ನು ಪರಿಸ್ಥಿತಿ ಅಷ್ಟು ವಿಕೋಪ ಇರುವುದಿಲ್ಲ. ಆದರೆ ಒಂದು ವಿಚಾರ ಈ ಅದೃಷ್ಟ ನಿಮ್ಮ ಅನುಭವಕ್ಕೆ ಬೇಗ ಬರುವುದಿಲ್ಲ ಕ್ರಮೇಣ ಎರಡು ಮೂರು ತಿಂಗಳು ಕಳೆದಂತೆಲ್ಲಾ ಅರಿವಿಗೆ ಬರುತ್ತದೆ. ಇಷ್ಟೆಲ್ಲಾ ಹೇಳಲು ಮೂಲ ಕಾರಣ ನಿಮಗೆ ಗುರು ಬಲ ಆರಂಭವಾಗುತ್ತಿದೆ.

ಇಷ್ಟು ದಿನ ಷಷ್ಠದಲ್ಲಿ ಗುರು ಹಾಗೂ ಸಪ್ತಮದಲ್ಲಿ ಶನಿ ಇದ್ದ ಕಾರಣ ಸಮಸ್ಯೆಗಳು ತುಸು ಹೆಚ್ಚು ಇದ್ದವು ಈಗ ಶನಿ ಅಲ್ಲಿಯೇ ಸಪ್ತಮದಲ್ಲಿ ಇದ್ದರೂ ಸಹ ಗುರು ಸಹ ಸಪ್ತಮಕ್ಕೆ ಬಂದು ಪೂರ್ಣ ಗುರು ಬಲ ನೀಡಲಿದ್ದಾನೆ. ಉದ್ಯೋಗ ಇನ್ನೂ ಖಾಯಂ ಆಗಿಲ್ಲ ಎಂದು ಅಥವಾ ನಿಮಗೆ ಅವಶ್ಯ ಇರುವ ಜಾಗಕ್ಕೆ ನಿಮಗೆ ವರ್ಗಾವಣೆ ದೊರೆತಿಲ್ಲ ಎಂದು ಚಿಂತಿಸುತ್ತಿದ್ದಲ್ಲಿ ಈ ಸಪ್ತಮಕ್ಕೆ ಗುರು ನಿಮಗೆ ಗಮನಾರ್ಹ ಬದಲಾವಣೆ ತರುತ್ತಾನೆ ಉದಾಹರಣೆಗೆ ಉದ್ಯೋಗ ಖಾಯಂ ಆಗದೆ ಖಾಸಗಿಯಾಗಿ ಸೇವೆ ಸಲ್ಲಿಸುತ್ತಾ ಇದ್ದಲ್ಲಿ ಸರಕಾರಿ ಉದ್ಯೋಗಿ ಆಗಲು ಎಲ್ಲಾ ಅರ್ಹತೆ ಇದ್ದಲ್ಲಿ ನಿಮ್ಮ ಪ್ರಯತ್ನ ಸಾಫಲ್ಯತೆ ಕಾಣುತ್ತದೆ.

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಆಲೋಚನೆ ಇರುವವರು ಪ್ರಯತ್ನಿಸಿ ಆಗುತ್ತದೆ. ಇನ್ನು ಅವಿವಾಹಿತರಿಗೆ ವಿವಾಹ ಸಂಬಂಧಗಳು ಹೆಚ್ಚು ಬರುತ್ತವೆ ಇನ್ನು ಮದುವೆ ಆಗುವುದು ಅಸಾಧ್ಯ ಎಂದು ಆಸೆ ಬಿಟ್ಟು ಇರುವವರಿಗೆ ಸಹ ಒಂದು ಕೊನೇಯ ಅವಕಾಶ ಇನ್ನೂ ಇದೆ ಎಂದು ಅನಿಸಬಹುದು ಹಾಗು ಈಗಾಗಲೆ ಮದುವೆ ಆಗಿದ್ದು ಬಾಳ ಸಂಗಾತಿಯೊಂದಿಗೆ ಮನಸ್ತಾಪಗಳು ಜಗಳಗಳು ಆಗಿ ಬೇರ್ಪಡುವ ಪರಿಸ್ಥಿತಿ ಇದ್ದವರು ಸಹ ಆ ಎಲ್ಲ ವಿಧದ ಅಪಾರ್ಥಗಳನ್ನು ದೂರ ಮಾಡಿಕೊಂಡು ಹಿರಿಯರ ಗುರು ಸಮಾನರ ಮಧ್ಯವಸ್ತಿಕೆಯಲ್ಲಿ ಸಂಧಾನಗಳು ನೆಡೆದು ಮತ್ತೆ ಬಾಳ ಸಂಗಾತಿಯೊಂದಿಗೆ ಕೂಡಿ ಬಾಳುವ ಅವಕಾಶಗಳು ಬರುತ್ತವೆ. ನ್ಯಾಯಾಧೀಶ ಹಾಗೂ ವಕೀಲ ವೃತ್ತಿಯಲ್ಲಿ ಇರುವವರಿಗೆ ಉತ್ತಮ.

ಜ್ಯೋತಿಷಿ ವಿಠ್ಠಲ ಭಟ್ ಕೆಕ್ಕಾರು ಅವರ ಸಂಪರ್ಕ ಸಂಖ್ಯೆ : 9845682380

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191008175208″); document.getElementById(“div_6020191008175208”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: