ನ4ರ ಮಧ್ಯರಾತ್ರಿ ಗುರು ಬದಲಾವಣೆ :ತುಲಾ ರಾಶಿಯವರಿಗೆ ಚಿಂತೆ : ವೃಶ್ಚಿಕದವರಿಗೆ ನೆಮ್ಮದಿ : ಧನು ರಾಶಿಯವಿರಿಗೆ ನಿಟ್ಟುಸಿರು

2019 ನವೆಂಬರ್ 4 ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಗುರು ಗ್ರಹ ಜ್ಯೇಷ್ಠ ನಕ್ಷತ್ರ 4ನೇ ಪಾದ ವೃಷ್ಚಿಕ ರಾಶಿಯಿಂದ ಮುಂದೆ ಹೋಗಿ ಮೂಲ ನಕ್ಷತ್ರ 1 ನೇ ಪಾದ ಧನು ರಾಶಿಗೆ ಪ್ರವೇಶ ಮಾಡುತ್ತಾನೆ.

ಗುರು ಗ್ರಹದ ಈ ಸಂಚಾರದಿಂದಾಗಿ ದ್ವಾದಶ ರಾಶಿಯ ಗುರು ಬಲದ ವಿಚಾರದಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ. ಈ ಕಾರಣ ತುಲಾ, ವೃಶ್ಚಿಕ, ಧನು ರಾಶಿಗಳ ಪೈಕಿ ಯಾವ ರಾಶಿಗೆ ಗುರು ಬಲ ಬರಲಿದೆ ಮತ್ತು ಯಾವ ರಾಶಿಗೆ ಗುರು ಬಲ ಮುಗಿಯಲಿದೆ ಅನ್ನುವುದನ್ನು ಖ್ಯಾತ ಜ್ಯೋತಿಷಿಗಳಾದ ವಿಠ್ಠಲ ಭಟ್ ಕೆಕ್ಕಾರು ವಿವರಿಸಿದ್ದಾರೆ.

 ( ನಿಮಗೆ ಯಾವುದಾದರೂ ಸಂಶಯಗಳಿದ್ದಲ್ಲಿ ಜ್ಯೋತಿಷಿ ವಿಠ್ಠಲ ಭಟ್ ಕೆಕ್ಕಾರು ಅವರನ್ನು 9845682380 ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.)

ತುಲಾ : ಈ ಗುರು ಸಂಚಾರ ನಿಮಗೆ ವಿಶೇಷ ಹಾಗೂ ವಿಚಿತ್ರ ಮಿಶ್ರ ಫಲಗಳನ್ನು ಹೇಳ ಬೇಕಾಗುತ್ತದೆ ಕಾರಣ ಈ ಗುರು ಸಂಚಾರ ಒಂದು ದೃಷ್ಟಿಯಿಂದ ನಿಮಗೆ ಸಮಸ್ಯೆಗಳಿಗೆ ಕಾರಣ ಆದರೆ ಇನ್ನೊಂದೆಡೆ ನಿಮಗೆ ಮಧ್ಯಮದ ಫಲಗಳನ್ನು ನೀಡುತ್ತದೆ.

ನೀವು ಬಹಳ ಮುಖ್ಯವಾಗಿ ಅರ್ಥ ಮಾಡಿಕೊಳ್ಳ ಬೇಕಾದ ವಿಚಾರ ಅಂದರೆ ಇನ್ನೊಂದು ವರ್ಷ ಕಾಲ ನಿಮಗೆ ದುಡ್ಡು ಹಣ ಐಶ್ವರ್ಯ ಬಂದರೆ ಉತ್ತಮ ಹೆಸರು ಕೀರ್ತಿ ಬರುವುದಿಲ್ಲ ಇನ್ನು ಹೆಸರು ಕೀರ್ತಿ ಬೇಕು ಎಂದಾದಲ್ಲಿ ಕೈಯಲ್ಲಿ ಹಣ ಇರುವುದಿಲ್ಲ ಆದರೆ ಎನಾದರೂ ಆಗಲಿ ಸಾಲ ಮಾತ್ರ ಯಾರಿಗೂ ಕೊಡಲು ಅಥವಾ ಕೊಡಿಸಲು ಹೋಗದಿರಿ ಕಾರಣ ಇಷ್ಟು ದಿನ ದ್ವಿತೀಯದ ಗುರು ಬಲದಿಂದಾಗಿ ನೀವು ಕಷ್ಟಗಳು ನಿಮಗೆ ಕಣ್ಣಿಗೆ ಕಂಡರೂ ಸಹ ಹೆಚ್ಚು ಅನುಭವಕ್ಕೆ ಬರುತ್ತಿರಲಿಲ್ಲ ಆದರೆ ಈಗ ಇನ್ನು ಮುಂದೆ ಹಾಗಲ್ಲ ಗುರು ನಿಮಗೆ ದ್ವಿತೀಯ ಸ್ಥಾನದಿಂದ ತೃತೀಯ ಸ್ಥಾನಕ್ಕೆ ಹೋಗುತ್ತಿರುವುದರಿಂದ ನಿಮಗೆ ಗುರುಬಲ ಮುಕ್ತಾಯ ಆಯಿತು ನಿಮ್ಮನ್ನು ಕಾಪಾಡುವ ಶಕ್ತಿಯೊಂದು ಕಡಿಮೆ ಆಗುತ್ತದೆ ಅದಕ್ಕೆ ಸಮಸ್ಯೆ.

ಇನ್ನು ಮಧ್ಯಮ ಯಾಕೆ ಅಂದರೆ ತೃತೀಯ ಸ್ಥಾನದಿಂದ ಗುರುಬಲ ಇಲ್ಲದಿದ್ದರೂ ಸಹ ಆ ಸ್ಥಾನ ಅಷ್ಟು ಕೆಟ್ಟ ಫಲ ಕೊಡುವ ಸ್ಥಾನ ಅಲ್ಲ. ನೀವು ಸ್ವಲ್ಪ ಹೆಚ್ಚಿಗೆ ಜಿಪುಣರಾಗುತ್ತೀರಿ ಹೇಗೆ ಎಲ್ಲಿ ಹೇಗೆ ದುಡ್ಡು ಉಳಿಸುವುದು ಎಂದು ಸದಾ ಕಾಲ ನಿಮ್ಮ ತಲೆಯಲ್ಲಿ ಓಡಲು ಪ್ರಾರಂಭ ಆಗುತ್ತದೆ. ನೀವು ಬರಹಗಾರರು ಲೇಖಕರು ಆಗಿದ್ದಲ್ಲಿ ನಿಮಗೆ ಉತ್ತಮ ಅವಕಾಶಗಳು ಲಭಿಸುತ್ತವೆ. ದೇವರ ಮೇಲಿನ ನಿಮ್ಮ ಭಕ್ತಿ ಶ್ರದ್ದೆ ವೃದ್ದಿಸುತ್ತವೆ ಆದರೆ ಸ್ನೇಹಿತರೊಂದಿಗೆ ಪರಿಚಯಸ್ಥರೊಂದಿಗೆ ವಿತಂಡವಾದ ಮಾಡಲು ಹೆಚ್ಚು ಪ್ರಾರಂಭ ಮಾಡುತ್ತೀರಿ. ನಿಮಗೆ ಗೊತ್ತಿಲ್ಲದ ವಿದ್ಯೆ ನಿಮಗೆ ಬಹಳ ಗೊತ್ತಿದೆ ಎಂದು ಇತರರನ್ನು ನಂಬಿಸಲು ಸಹ ಹೋಗುತ್ತೀರಿ. . ಭೂಮಿಗೆ ಸಂಬಂಧಿಸಿದಂತೆ ನಿಮಗೆ ಉತ್ತಮ ಪ್ರತಿಫಲ ಲಭಿಸುತ್ತದೆ ಭೂಮಿ ಖರೀದಿಸುವ ಆಸೆ ಇರುವವರಿಗೆ ಆಸೆ ಇರುವವರಿಗೆ ಅದು ನೆರವೇರಬಹುದು.

ವೃಶ್ಚಿಕ :  ನಿಮ್ಮ ಪಾಲಿಗೆ ಸಂತಸದ ವಿಚಾರ ನಿಮಗೆ ಗುರುಬಲ ಪ್ರಾರಂಭ ಆಗುತ್ತದೆ. ರಾಜಕೀಯದಲ್ಲಿ ಇದ್ದು ಅಧಿಕಾರಕ್ಕಾಗಿ ಪ್ರಯತ್ನ ಮಾಡುತ್ತ ಇದ್ದಲ್ಲಿ ಅಧಿಕಾರ ಪ್ರಾಪ್ತಿ ಆಗುತ್ತದೆ ಆದರೆ ಅದಕ್ಕೆ ನೀವು ಇನ್ನೂ ಮೂರ್ನಾಲ್ಕು ತಿಂಗಳುಗಳು ಕಾಯಬೇಕು. ಈ ಹಿಂದಿಗಿಂತ ಸ್ವಲ್ಪ ದಾನ ಧರ್ಮ ಹೆಚ್ಚು ಮಾಡುತ್ತೀರಿ.

ಶಿಕ್ಷಣದ ವಿಚಾರದಲ್ಲಿ ಉತ್ತಮವಾಗಿ ಇರುತ್ತದೆ ಈ ವರ್ಷ ಅಥವಾ ಮುಂದಿನ ವರ್ಷ ಒಳಗೆ ಶಿಕ್ಷಣ ಮುಗಿಸಲು ಪ್ರಯತ್ನ ಮಾಡಿದರೆ ನಿರ್ವಿಘ್ನವಾಗಿ ಆಗಬಹುದು ಹಾಗೂ ಅರೋಗ್ಯ ಬಾಧೆ ಅಥವಾ ಚರ್ಮ ವ್ಯಾಧಿ ಇದ್ದವರಿಗೆ ಅದು ಕಡಿಮೆ ಆಗುವ ಸಮಯ ಔಷಧ ಕೆಲಸ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಬಹಳ ದಿನಗಳ ಕನಸು ನೀವು ಆರ್ಥಿಕವಾಗಿ ಸಧೃಡ ಆಗಬೇಕು ಎನ್ನುವುದು ಆ ನಿಮ್ಮ ಕನಸು ನನಸಾಗುವ ಸಮಯ ಇದು. ನಿಮ್ಮಿಂದ ಉತ್ತಮ ದೈವೀ ಕಾರ್ಯಗಳು ಪೂಜೆ ಪುನಸ್ಕಾರಗಳು ಇತ್ಯಾದಿ ಹೆಚ್ಚು ನೆರವೇರುತ್ತವೆ. ವ್ಯಾಪಾರಿಗಳಿಗೆ ಬ್ಯಾಂಕ್ ಉದ್ಯೋಗಿಗಳಿಗೆ ನ್ಯಾಯವಾದಿಗಳಿಗೆ ಎಲ್ಲರಿಗೂ ಅತ್ಯುತ್ತಮ.

ವ್ಯಾಪಾರಿಗಳು ಅತೀ ಹೆಚ್ಚಿನ ಲಾಭವನ್ನು ಕಾಣಬಹುದು. ನಿಮ್ಮ ಬುದ್ದಿ ಅತ್ಯಂತ ಚುರುಕಾಗಿ ಓಡುತ್ತದೆ. ಸಂತಾನ ಭಾಗ್ಯ ಇಲ್ಲದೇ ಸಂಕಟ ದುಃಖ ಅನುಭವಿಸುತ್ತಿರುವವರು ತಕ್ಕ ಪರಿಹಾರಗಳನ್ನು ಮಾಡಿಕೊಂಡು ಸಂತಾನಕ್ಕಾಗಿ ಪ್ರಯತ್ನಿಸಿದಲ್ಲಿ ಯಶಸ್ಸು ಲಭಿಸುವುದು. ಈ ಹಿಂದೆ ಯಾರಿಗಾದರೂ ದುಡ್ಡು ಕೊಟ್ಟು ಸಿಕ್ಕಿ ಹಾಕಿಕೊಂಡಿದ್ದಲ್ಲಿ ಆ ದುಡ್ದು ಮರಳಿ ಬಾರದೆ ಪರದಾಟ ಪಡುತ್ತಿದ್ದರೆ ಆ ಹಣ ಮರಳಿ ಬರುವ ಸಮಯ ಆದರೆ ತಾನಾಗಿಯೇ ಅದು ಬರುವುದಿಲ್ಲ ನಿಮ್ಮ ಪ್ರಯತ್ನ ಹೆಚ್ಚು ಬೇಕು.

 ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿದ್ದಲ್ಲಿ ನಿಮಗೆ ಜಯ ಸಿಗುತ್ತದೆ ಆದರೆ ಅದು ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಆಗಿದ್ದು ಅದನ್ನು ಮರಳಿ ಪಡೆಯಲು ಆಗಿದ್ದಲ್ಲಿ ಆ ಆಸ್ತಿಗಳು ಮಾತ್ರ ಸಿಗದು. . ಅವಿವಾಹಿತರು ಇದ್ದಲ್ಲಿ ವಿವಾಹಕ್ಕಾಗಿ ಪ್ರಯತ್ನ ಹೆಚ್ಚು ಮಾಡಿ ಯಶಸ್ಸು ಸಿಗುವ ಸಾಧ್ಯತೆಗಳು ಇವೆ.

ಧನು : ನೀವು ಒಂದು ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯ ಎಂದು ಹೇಳಬಹುದು ಕಾರಣ ಇಷ್ಟು ದಿನ ನೀವು ವ್ಯಯದಲ್ಲಿ ಗುರು ಹಾಗೂ ಜನ್ಮ ಶನಿ ಪ್ರಭಾವವನ್ನು ಅನುಭವಿಸಿದವರು ಈಗ ಈ ಎರಡರಲ್ಲಿ ಒಂದು ಸಮಸ್ಯೆಯಿಂದ ಹೊರಬರುತ್ತೀರಿ. ಜನ್ಮ ಶನಿಯ [ಸಾಡೆ ಸಾತ್] ಪ್ರಭಾವ ಹಾಗೆಯೇ ಇದ್ದರೂ ಹಾಗೂ ಗುರು ಬಲ ಇನ್ನೂ ಬರದೇ ಇದ್ದರೂ ಸಹ ಈ ಹಿಂದೆ ಇದ್ದಷ್ಟು ಕಷ್ಟ ಇರೋದಿಲ್ಲ.

ಎಲ್ಲೆಡೆ ನಿರಾಕರಣೆ ಹಾಗು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಇಷ್ಟು ದಿನ ನೀವು ಕಷ್ಟ ಪಟ್ಟಿದಿರಿ ಆದರೆ ಇನ್ನು ಆ ಪ್ರಮಾಣದ ಕಷ್ಟಗಳು ಇರುವುದಿಲ್ಲ ಅಂದರೆ ನಿಮಗೆ ಕಷ್ಟಗಳೇ ಬರುವುದಿಲ್ಲ ಎಂದಲ್ಲ ಆದರೆ ಈ ಹಿಂದಿನ ಪ್ರಮಾಣ ಅಥವಾ ಆ ವಿಧಾನ ಇರುವುದಿಲ್ಲ.ನೀವು ಸೇನೆ ಅಥವಾ ಆರಕ್ಷಕ ವೃತ್ತಿಯಲ್ಲಿ ಇದ್ದಲ್ಲಿ ಅಥವಾ ಸರಕಾರಿ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಇದ್ದಲ್ಲಿ ಮಾತ್ರ ತೊಂದರೆ ಕಷ್ಟಗಳು ಕಡಿಮೆ ಆಗದು ವೃದ್ದಿಸುತ್ತವೆ ಆದರೆ ವೈದ್ಯ ವೃತ್ತಿಯಲ್ಲಿ ಇರುವವರಿಗೆ ಮಾತ್ರ ಪ್ರಖ್ಯಾತಿ ಸಿಗುವ ಸಾಧ್ಯತೆಗಳು ಹೆಚ್ಚು ಇವೆ.

ಇನ್ನು ನಿಮಗೆ ಪ್ರಾರಂಭ ಆದರೆ ಆರೋಗ್ಯ ಬಾಧೆಗಳು ಪ್ರಾರಂಭ ಆಗಬೇಕು ಅಷ್ಟೆ. ಅದರಲ್ಲಿಯೂ ಸಹ ಮುಖ್ಯವಾಗಿ ಚರ್ಮ ವ್ಯಾಧಿಗಳು ಇದ್ದಕ್ಕಿದ್ದಂತೆ ಪ್ರಾರಂಭ ಆದಲ್ಲಿ ಆಶ್ಚರ್ಯ ಪಡಬೇಕಿಲ್ಲ. ಈ ವ್ಯಾಧಿಗಳು ಆಯುರ್ವೇದ ಬಳಕೆಯಿಂದ ಹಾಗೂ ದೇವತಾರಾಧನೆಯಿಂದ ಶೀಘ್ರ ಗುಣಮುಖ ಆಗುತ್ತವೆ. ನಿರುದ್ಯೋಗಿಗಳಿಗೆ ಅವರು ಬಯಸಿದ ದೊಡ್ಡ ಪ್ರಮಾಮಣದ ಉದ್ಯೋಗ ಅಲ್ಲದಿದ್ದರೂ ಸಹ ಖಾಲಿ ಕುಳಿತುಕೊಳ್ಳದಂತೆ ಒಂದು ಚಿಕ್ಕ ಉದ್ಯೋಗ ಮಾತ್ರ ಲಭಿಸುತ್ತದೆ.

ಕವಿಗಳು ಲೇಖಕರು ಬರಗಾರರನ್ನು ಗುರುತಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಶರೀರದಲ್ಲಿ ಪಿತ್ಥ ವಿಕಾರ ಆಗುವ ಸಾಧ್ಯತೆಗಳು ಇದೆ. ನೀವು ಯಾರಿಗೂ ತಿಳಿಯದಂತೆ ಕದ್ದೂ ಮುಚ್ಚಿ ಮಾಡುತ್ತಿದ್ದ ವ್ಯವಹಾರಗಳನ್ನು ಈ ತಕ್ಷಣದಿಂದಲೇ ನಿಲ್ಲಿಸದಿದ್ದರೆ ಸಿಕ್ಕಿಬಿದ್ದು ಅವಮಾನ ಅನುಭವಿಸುವ ಸಾಧ್ಯತೆಗಳು ಹೆಚ್ಚು ಎಚ್ಚರ. ನಿಮಗೆ ವಿನೋದದ ಸ್ವಭಾವ ಹೆಚ್ಚುತ್ತದೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191008175208″); document.getElementById(“div_6020191008175208”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: