ಮೋದಿ ಹೆಸರಿಲ್ಲದಿದ್ದರೆ ನಳಿನ್, ಸದಾನಂದ, ಜೋಷಿ ಹೀಗೆ 25 ಸೀಟು ಎಲ್ಲಿ ಬರುತ್ತಿತ್ತು….?

ಅವತ್ತು ಮೋದಿ ಮತ್ತೊಮ್ಮೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಲಾರಂಭಿಸಿದಾಗ ಜನ ಕೇಳಿದ್ದು ಒಂದೇ ಪ್ರಶ್ನೆ. ನಮ್ಮೂರಿನ ಬಿಜೆಪಿ ಸಂಸದರು ಕೈ ಸಿಗುತ್ತಿಲ್ಲ ಅವರನ್ನು ಗೆಲ್ಲಿಸಿ ಮಾಡುವುದೇನು ಎಂದು. ಆಗ ಸೂಲಿಬೆಲೆ ಹೇಳಿದ್ದು ಮೋದಿಗಾಗಿ ಅವರ ಗೆಲ್ಲಲೇಬೇಕು ಎಂದು.

ಆದರೆ ಈಗ ಅದೇ ಮೋದಿಗಾಗಿ ಗೆದ್ದವರು ಸೂಲಿಬೆಲೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪ್ರತಾಪ್ ಸಿಂಹ ಅವರು ಒಂದು ಹೆಜ್ಜೆ ಮುಂದೆ ಹೋಗಿ ಒಂದು ಕಾಲ ಆತ್ಮೀಯನನ್ನು ಸಿಕ್ಕಾಪಟ್ಟೆ ಟೀಕಿಸಿದ್ದಾರೆ.

ಆದರೆ ಪ್ರತಾಪ್ ಸಿಂಹ ಹೇಳಿರುವ ಮಾತುಗಳನ್ನು ಕೇಳಿದರೆ ಏನು ಹೇಳಬೇಕು ಅನ್ನುವುದೇ ಗೊತ್ತಾಗುತ್ತಿಲ್ಲ.ಓ ಮೋದಿ ರಾಷ್ಟ್ರ ರಾಜಕಾರಣಕ್ಕೆ ಬರುವ ಮುನ್ನ ನಳಿನ್ ಕುಮಾರ್ ಕಟೀಲ್, ಸದಾನಂದಗೌಡ, ಜೋಷಿ ರಮೇಶ್ ಜಿಗಜಿಣಗಿ ಗೆದ್ದಿಲ್ವ ಅಂದಿದ್ದಾರೆ.

ಹೌದು ಅನೇಕ ಸಂಸದರು ನರೇಂದ್ರ ಮೋದಿಯವರು ರಾಷ್ಟ್ರ ರಾಜಕಾರಣಕ್ಕೆ ಬರುವ ಮುನ್ನ ಗೆದ್ದಿದ್ದರು. ಆದರೆ ಈ ಬಾರಿ ಅವರ ಗೆಲುವಿಗೆ ಮೋದಿ ಹೆಸರು ಕಾರಣವಾಗಿತ್ತು ಅನ್ನುವುದರಲ್ಲಿ ಸಂಶಯವೇ ಇಲ್ಲ.

ಈ ಬಾರಿ ಅದ್ಯಾವ ಬಿಜೆಪಿ ಅಭ್ಯರ್ಥಿ ತನ್ನ ಸಾಧನೆಯನ್ನು ಮುಂದಿಟ್ಟುಕೊಂಡು ಮತದಾರರ ಬಳಿ ಹೋಗಿದ್ದಾರೆ.ಸರ್ಜಿಕಲ್ ಸ್ಟ್ರೈಕ್, ಗ್ಯಾಸ್ ಕನೆಕ್ಷನ್, ಹೀಗೆ ಮೋದಿಯವರ ಅನೇಕ ಸಾಧನಗಳೇ ಬಿಜೆಪಿ ಅಭ್ಯರ್ಥಿಗಳ ಅಸ್ತ್ರವಾಗಿತ್ತು. ಮೋದಿಯವರ ಸಾಧನೆ ಸಂಸದರಿಗೆ ಶ್ರೀರಕ್ಷೆಯಾಗಿತ್ತು ಅನ್ನುವುದು ಸುಳ್ಳಲ್ಲ.

ಮೋದಿಗಾಗಿ ನಮ್ಮನ್ನು ಗೆಲ್ಲಿಸಿ ಎಂದು ಬಿಜೆಪಿ ಅಭ್ಯರ್ಥಿಗಳು ಮತಯಾಚಿಸಿರುವುದನ್ನು ಜನ ಮರೆತಿಲ್ಲ. ಇದೇ ಸದಾನಂದಗೌಡರು ಲೋಕಸಬೆ ಚುನಾವಣೆ ಸಂದರ್ಭದಲ್ಲಿ ಮತ ಕೇಳಿದ ಬಗೆ ಹೇಗಿತ್ತು ಅನ್ನುವುದನ್ನು ಈ ಇಮೇಜ್ ಗಳಲ್ಲಿ ನೋಡಿ. ಸದಾನಂದಗೌಡರ ಸಾಮಾಜಿಕ ಜಾಲತಾಣ ಖಾತೆಯಿಂದ ಇದನ್ನು ಪಡೆಯಲಾಗಿದೆ.

ಅದ್ಯಾವ ಬಿಜೆಪಿ ಸಂಸದರು ಜನತೆಗೆ ಹಂಚಿದ್ದ ಕರಪತ್ರಗಳನ್ನು ತೆಗೆದುನೋಡಿ. ದೇಶಕ್ಕಾಗಿ ಬಿಜೆಪಿ ಅಭ್ಯರ್ಥಿಗಳು ಮತ ಕೇಳಿದ್ದಾರೆಯೇ ಹೊರತು ಕ್ಷೇತ್ರದ ಬಗ್ಗೆ ಚಕಾರವೆತ್ತಿರಲಿಲ್ಲ. ಬಲಿಷ್ಟ ಭಾರತದ ನಿರ್ಮಾಣಕ್ಕಾಗಿ ಮತ ಕೇಳಿದ್ದರೇ ಹೊರತು ಕ್ಷೇತ್ರಕ್ಕೆ ಆ ಯೋಜನೆ ತರುತ್ತೇವೆ ಈ ಯೋಜನೆ ತರುತ್ತೇವೆ ಎಂದು ಹೇಳಿರಲಿಲ್ಲ.

ಈಗ ನೋಡಿದ್ರೆ ಮೋದಿ ಹೆಸರೊಂದೇ ಗೆಲುವಿಗೆ ಕಾರಣವಲ್ಲ ಅನ್ನುವಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ವೈ ಮನಸ್ಸು ಮರೆತು ಜೊತೆಯಾಗಿ ಹೋರಾಟ ನಡೆಸಿದ್ರೆ ಹಲವು ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಸುಲಭವಿರಲಿಲ್ಲ ಅನ್ನುವುದು ಯಾರೊಬ್ಬರೂ ಮರೆಯುವ ಹಾಗಿಲ್ಲ.

ಆದರೆ ಈಗ ನೆರೆ ಪರಿಹಾರಕ್ಕೆ ದುಡ್ಡು ಕೊಡಿಸಿ ಸ್ವಾಮಿ ಅಂದ್ರೆ ಇದೇ ಸಂಸದರಿಗೆ ಕೆಂಡದಂತ ಕೋಪ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191003202937″); document.getElementById(“div_6020191003202937”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: