ಪ್ರವಾಹಕ್ಕಿಲ್ಲ ಪರಿಹಾರ : ಮೋದಿ ವಿರುದ್ಧ ಕಟ್ಟೆಯೊಡೆದ ಆಕ್ರೋಶ : ಬಿಜೆಪಿ ಸಂಸದರು ನರ ಸತ್ತ ನಾಮಾರ್ಧರು…..

ನರೇಂದ್ರ ಮೋದಿ ಪ್ರಧಾನಿಯಾಗಬೇಕು ಅನ್ನುವ ಒಂದೇ ಕಾರಣಕ್ಕೆ ಕನ್ನಡಿಗರು 25 ಮಂದಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿದರು.

ಚಿಂತಕ ಚಕ್ರವರ್ತಿ ಸೂಲಿಬೆಲೆ ಹಳ್ಳಿ ಹಳ್ಳಿ ತಿರುಗಿ ಮೋದಿಗಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಪರೋಕ್ಷ ಸಂದೇಶ ಸಾರಿದರು. ಅಯ್ಯೋ ಸಾರ್ ನಮ್ಮ ಅಭ್ಯರ್ಥಿಗಳೇ ಸರಿ ಇಲ್ಲ ಅಂದ್ರೆ, ಅವೆಲ್ಲವನ್ನೂ ಮೋದಿ ಸರಿಪಡಿಸ್ತಾರೆ ಅಂದ್ರು. ಹೌದಲ್ವ ಎಂದು ಜನ ಕಮಲ ಚಿಹ್ನೆಗೆ ಮತ ಕೊಟ್ಟರು.

ಆದರೆ ಆಗಿದ್ದು ಬೇರೆ ರಾಜ್ಯದ ಸಂಸದರು ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಕರ್ನಾಟಕ ರಾಜ್ಯದ ಅನೇಕ ಭಾಗಗಳು ನೆರೆಯಿಂದ ತತ್ತರಿಸಿ ಹೋಯ್ತು. ಮೋದಿಯ ಹೆಸರಿನಲ್ಲಿ ಗೆದ್ದ ಮಂದಿ ದಿವ್ಯ ಮೌನಕ್ಕೆ ಶರಣಾಗಿದ್ದರು. ಇದೀಗ ಜನರ ಸಹನೆ ಕಟ್ಟೆಯೊಡೆಯುತ್ತಿದ್ದಂತೆ ಸುಳ್ಳುಗಳ ಸರಮಾಲೆ ಪೋಣಿಸಲಾರಂಭಿಸಿದ್ದಾರೆ. ಇಂದು ಪರಿಹಾರ ಬರುತ್ತದೆ ನಾಳೆ ಬರುತ್ತದೆ ಅನ್ನುತ್ತಿದ್ದಾರೆ ಸಂಸದರು.

ನರೇಂದ್ರ ಮೋದಿಯವರ ನಿರ್ಲಕ್ಷ್ಯ ಧೋರಣೆಯಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ ನಾಯಕರು ಕೂಡಾ ಮೋದಿಯ ವಿರುದ್ಧ ಟೀಕಾ ಪ್ರಹಾರ ಪ್ರಾರಂಭಿಸಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿರುವ ಮಾಜಿ ಸಚಿವ ಶಿವರಾಜ್ ತಂಗಡಗಿ ಕರ್ನಾಟಕ ಸಂಸದರು ನರ ಸತ್ತ ನಾಮಾರ್ಧರು ಎಂದು ಕಟು ಶಬ್ಧಗಳಲ್ಲಿ ವಾಗ್ಧಾಳಿ ನಡೆಸಿದ್ದಾರೆ.

ನೆರೆ ಸಂತ್ರಸ್ಥರಿಗೆ ಪರಿಹಾರ ತರಲಾಗದ ಸಂಸದರು ಇದ್ದರೆಷ್ಟು ಬಿಟ್ಟರೆಷ್ಟು. ಅಕ್ಟೋಬರ್ 15ರ ಒಳಗೆ ಕರ್ನಾಟಕಕ್ಕೆ ಪರಿಹಾರ ಬಿಡುಗಡೆಯಾಗದಿದ್ದರೆ ಎಲ್ಲಾ ಸಂಸದರಿಗೆ ಸೀರೆ, ಬಳೆ, ಕುಂಕುಮ ಕಳುಹಿಸಿತ್ತೇವೆ. ಅದನ್ನು ಉಟ್ಟುಕೊಂಡು ಮೋದಿ ಮುಂದೆ ನಿಂತುಕೊಳ್ಳಲಿ ಎಂದು ತಂಗಡಿಗಿ ಆಕ್ರೋಶ ಹೊರ ಹಾಕಿದ್ದಾರೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191002160652″); document.getElementById(“div_6020191002160652”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: