Advertisements

ಯಡಿಯೂರಪ್ಪ ಬಂದ್ರೆ 5 ಸಾವಿರ ಜನ ಕಟೀಲ್ ಬಂದ್ರೆ 5 ಜನ ಅಂದವನಿಗೆ ಪಕ್ಷದಿಂದಲೇ ಗೇಟ್ ಪಾಸ್

ಕರ್ನಾಟಕ ಬಿಜೆಪಿಗೆ ಇದೀಗ ಸಂಕಷ್ಟದ ದಿನಗಳು ಬಂದಿರುವ ಲಕ್ಷಣ ಗೋಚರಿಸುತ್ತಿದೆ. ಒಂದು ಕಡೆ ಇಡೀ ಕರ್ನಾಟಕ 25 ಸಂಸದರ ವಿರುದ್ಧ ತಿರುಗಿ ಬಿದ್ದಿದೆ. ನೆರೆ ಪರಿಹಾರಕ್ಕೆ ಹಣ ಕೊಡಿಸಿಲ್ಲ ಅನ್ನುವ ಕಾರಣಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಮತ್ತೊಂದು ಯಡಿಯೂರಪ್ಪ ಅವರು ಹೊಗಳಿ, ನಳಿನ್ ಕುಮಾರ್ ಕಟೀಲ್ ಅವರನ್ನು ತೆಗಳಿದ ಕಾರ್ಯಕರ್ತನಿಗೆ ಪಕ್ಷದಿಂದಲೇ ಗೇಟ್ ಪಾಸ್ ನೀಡಲಾಗಿದೆ.

ತುಮಕೂರು ಕೊರಟಗೆರೆ ತಾಲೂಕಿನ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶಿವರುದ್ರಯ್ಯ ಕೆ. ಎಂಬುವರು ಸಾಮಾಜಿಕ ಜಾಲತಾಣದಲ್ಲಿ ನಳಿನ್‌ ಕುಮಾರ್‌ ಕಟೀಲ್‌ ತೆಗಳಿ ವಿಡಿಯೋ ಹಾಕಿದ್ದರು

ವಿಡಿಯೋ ತುಣುಕಿನಲ್ಲಿ”ಯಡಿಯೂರಪ್ಪ ಮಾಸ್‌ ಲೀಡರ್‌, ಅವರಂತೆ ಜನ ಸಂಘಟನೆ ಮಾಡೋರು ರಾಜ್ಯದಲ್ಲಿ ಯಾರೂ ಇಲ್ಲ. ಯಡಿಯೂರಪ್ಪ ಒಂದು ಗ್ರಾಮಕ್ಕೆ ಹೋದರೂ 5 ಸಾವಿರ ಜನ ಕಾರ್ಯಕರ್ತರು ಸೇರುತ್ತಾರೆ. ಆದರೆ ನಳಿನ್‌ ಕುಮಾರ್‌ ಕಟೀಲ್‌ ಬಂದರೆ 5 ಜನರೂ ಸೇರುವುದಿಲ್ಲ. ಯಡಿಯೂರಪ್ಪರಿಗೆ ನೆಮ್ಮದಿಯಿಂದ ಆಡಳಿತ ನಡೆಸಲು ಬಿಡುತ್ತಿಲ್ಲ,” ಎಂಬುದಾಗಿ ಶಿವರುದ್ರಯ್ಯ ಹೇಳಿದ್ದರು.

ಇದು ವೈರಲ್ ಆಗುತ್ತಿದ್ದಂತೆ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಬಿ. ಜ್ಯೋತಿ ಗಣೇಶ್‌, ಶಿವರುದ್ರಯ್ಯ ಅವರನ್ನು ಉಚ್ಛಾಟಿಸಿ ಆದೇಶ ಹೊರಡಿಸಿದ್ದಾರೆ.

Advertisements

Leave a Reply

%d bloggers like this: