Advertisements

ಗೆಳೆಯರ ಜೊತೆ ಸೆಕ್ಸ್ ವಿಡಿಯೋ ಹಂಚಿಕೊಂಡ ಬಾಯ್ ಫ್ರೆಂಡ್ ಮರ್ಮಾಂಗಕ್ಕೆ ಕತ್ತರಿ

ತನ್ನ ಜೊತೆಗೆ ನಡೆಸಿದ ಸೆಕ್ಸ್ ವಿಡಿಯೋವನ್ನು ಗೆಳೆಯರ ಜೊತೆ ಹಂಚಿಕೊಂಡ ಪ್ರಿಯಕರನ ಮರ್ಮಾಂಗವನ್ನು ಯುವತಿಯೊಬ್ಬಳು ಕತ್ತರಿಸಿದ್ದ ಘಟನೆ ಅರ್ಜೆಂಟೀನಾದ ಕಾರ್ಡೊಬಾ ದಲ್ಲಿ ನಡೆದಿದೆ.

Buy Western Wear for Womens Under Rs.499

2017ರ ನವೆಂಬರ್​ 25ರಂದು 28 ವರ್ಷದ ಬ್ರೆಂಡಾ ಬಾರ್ಟಿನಿ ಎಂಬ ಯುವತಿ ತನ್ನ ಪ್ರಿಯತಮನ ಮರ್ಮಾಂಗವನ್ನು ಕತ್ತರಿಸಿದ್ದಳು. ಬಳಿಕ ಪ್ರಕರಣ  ಕಾರ್ಡೊಬಾ ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ ನಂತರ ಕೋರ್ಟ್ ಇದೀಗ ಅಪರಾಧಿಗೆ ಬರೊಬ್ಬರಿ 13 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬಾರ್ಟಿನಿ ತನ್ನ ಪ್ರಿಯತಮ ಸೆರಿಗೋ ಫರ್ನಾಂಡೀಸ್​(45) ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ, ಆತನ ಮುಖವನ್ನು ವೆಲ್ವೆಟ್​ ಬಟ್ಟೆಯಿಂದ ಮುಚ್ಚಿ, ಗುಪ್ತಾಂಗವನ್ನು ಕತ್ತರಿಸಿದ್ದಳು.

ಈ ಬಗ್ಗೆ ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿದ ಬಾರ್ಟಿನಿ ನಾನು ಅತನೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋಗಳು, ಫೋಟೋಗಳನ್ನು ಸ್ನೇಹಿತರಿಗೆ ಶೇರ್​ ಮಾಡಿದ್ದ. ಅಲ್ಲದೆ, ನಾಲ್ಕು ಜನ ಪುರುಷರು, ನಾಲ್ವರು ಮಹಿಳೆಯರ ಎದುರು ವಿಡಿಯೋವನ್ನು ತೋರಿಸಿ ವಿಕೃತಿ ಮೆರೆದಿದ್ದ. ಇದರಿಂದಾಗಿ ನನ್ನ ಜೀವನ ಹಾಳಾಗಿತ್ತು. ಕೆಲಸಕ್ಕೂ ಕುತ್ತು ಬಂದಿತ್ತು. ಹಾಗಾಗಿ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದೆ. , ಆತನನ್ನು ಕೊಲ್ಲುವುದು ನನ್ನ ಉದ್ದೇಶ ಆಗಿರಲಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾಳೆ.

Advertisements

Leave a Reply

%d bloggers like this: