Advertisements

ಪ್ಯಾರಾಸಿಟಮಲ್ ನುಂಗಿದ್ರೆ ಡೆಂಘೀ ವಾಸಿಯಾಗುತ್ತೆ..ಇದು ಉತ್ತರಾಖಂಡ ಮುಖ್ಯಮಂತ್ರಿಯ ಸಲಹೆ

ಡೆಂಘೀ ಜ್ವರ ಬಂದ್ರೆ ಏನಾಗುತ್ತದೆ ಅನ್ನುವುದು ಅನುಭವಿಸಿದವನಿಗೆ ಗೊತ್ತು. ಆದರೆ ಉತ್ತರಖಂಡ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಪ್ರಕಾರ ಡೆಂಘೀ ದೊಡ್ಡ ಕಾಯಿಲೆಯೇ ಅಲ್ವಂತೆ.

ಉತ್ತರಖಂಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್,  650ಎಂಜಿ ಪ್ಯಾರಾಸಿಟಮಲ್ ಮಾತ್ರೆ ನುಂಗಿ ಒಂದಿಷ್ಟು ವಿಶ್ರಾಂತಿ ಪಡೆದರೆ ಆ ಜ್ವರ ಗುಣಮುಖವಾಗುತ್ತದೆ ಅಂದಿದ್ದಾರೆ.

ದುರಂತ ಅಂದರೆ ಉತ್ತರಾಖಂಡದಲ್ಲಿ 48 ಸಾವಿರ ಮಂದಿ ಡೆಂಘೀ ಪೀಡಿತರಾಗಿದ್ದಾರೆ ಅನ್ನುವ ಆತಂಕಕಾರಿ ವರದಿ ಹೊರಬಿದ್ದಿರುವ ಬೆನ್ನಲ್ಲೇ 500ಎಂಜಿ ಪ್ಯಾರಾಸಿಟಮಲ್ ಬದಲು 650ಎಂಜಿಯ ಪ್ಯಾರಾಸಿಟಮಲ್ ತಿನ್ನಿ ಅನ್ನುವ ಸಲಹೆ ರಾಜ್ಯದ ಮುಖ್ಯಮಂತ್ರಿಯಿಂದ ಹೊರಬಿದ್ದಿದೆ.

ಇದೊಂದು ಎಡವಟ್ಟು ಹೇಳಿಕೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಪ್ಯಾರಾಸಿಟಮಲ್ ಮಾತ್ರೆ ಜ್ವರ ಏರಿಕೆ ಹಾಗೂ ಮೈಕೆ ನೋವುಗಳನ್ನು ತಾತ್ಕಾಲಿಕವಾಗಿ ತಡೆಯಬಲ್ಲುದು. ಈ ಮಾತ್ರೆ ತಿಂದರೆ ಡೆಂಘೀ ಜ್ವರದಿಂದ ಗುಣಮುಖರಾಗಲು ಸಾಧ್ಯವಿಲ್ಲ. ಅದಕ್ಕೆ ವೈದ್ಯರು ಹೇಳುವ ಅನೇಕ ಚಿಕಿತ್ಸಾ ಕ್ರಮಗಳನ್ನು ಅನುಸರಿಲೇಬೇಕು.

Advertisements

Leave a Reply

%d bloggers like this: