Advertisements

ಫೋನ್ ಕದ್ದಾಲಿಕೆ ಪ್ರಕರಣ : ಅಲೋಕ್ ಕುಮಾರ್ ನಿವಾಸಕ್ಕೆ ಸಿಬಿಐ ದಾಳಿ

ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ.

ಈಗಾಗಲೇ ಫೋನ್ ಕದ್ದಾಲಿಕೆಯಲ್ಲಿ ಪಾಲು ಪಡೆದಿರುವ ಇನ್ಸ್ ಪೆಕ್ಟರ್ ಗಳನ್ನು ವಿಚಾರಣೆಗೆ ಒಳಪಡಿಸಿರುವ ಸಿಬಿಐ ತಂಡ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಈ ನಡುವೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಪಾತ್ರದ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ನಿರ್ಧರಿಸಿದೆ.

ಈ ಸಂಬಂಧ ಇಂದು ಮುಂಜಾನೆ ಅಲೋಕ್ ಕುಮರ್ ನಿವಾಸಕ್ಕೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

20ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿರುವುದನ್ನು ನೋಡಿದರೆ ಪ್ರಕರಣ ತುಂಬಾ ಗಂಭೀರವಾಗಿರುವಂತೆ ಕಾಣಿಸುತ್ತಿದೆ.

ಈ ನಡುವೆ ಅವೋಕ್ ಕುಮಾರ್ ನಿವಾಸದಲ್ಲೇ ಫೋನ್ ಟ್ಯಾಪಿಂಗ್ ನಡೆದಿತ್ತು ಅನ್ನುವ ಮಾತುಗಳು ಕೂಡಾ ಕೇಳಿ ಬಂದಿದೆ. ಆದರೆ ಈ ಬಗ್ಗೆ ಸಿಬಿಐ ಏನೂ ಹೇಳಿಲ್ಲ.

Advertisements

Leave a Reply

%d bloggers like this: