Advertisements

ಹೋಗಲೋ ಸಿದ್ದರಾಮಯ್ಯ…. ಟಗರಿನ ಎದುರು ಮುನಿಯಪ್ಪ ಅವಾಜ್

ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಇದೀಗ ಉಪ ಚುನಾವಣೆಗೆ ಸಿದ್ಧವಾಗುತ್ತಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ಅನೇಕ ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿತ್ತು. ಜೊತೆಗೆ ಕಾಂಗ್ರೆಸ್ ನಾಯಕರ ಜೊತೆಗಿನ ಮುಸುಕಿನ ಗುದ್ದಾಟವೂ ಸೋಲಿಗೆ ಕಾರಣವಾಗಿತ್ತು.

ಹೀಗಾಗಿ ಅನೇಕ ನಾಯಕರು ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಈ ಆಕ್ರೋಶ ಇಂದು ಕಾಂಗ್ರೆಸ್ ಸಭೆಯಲ್ಲಿ ಸ್ಫೋಟಗೊಂಡಿದೆ.

ಉಪಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಲುವಾಗಿ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ನೇತೃತ್ವದಲ್ಲಿ ಇಂದು ನಾಯಕರ ಸಭೆಯನ್ನು ಕರೆಯಲಾಗಿತ್ತು.

ಸಭೆ ಪ್ರಾರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದ ಮಾಜಿ ಸಂಸದ ಮುನಿಯಪ್ಪ ತಮ್ಮ ಸೋಲಿನ ಆಕ್ರೋಶವನ್ನು ಹೊರ ಹಾಕಿದರು.  

ತನ್ನ ಸೋಲಿಗೆ ಕಾರಣವಾಗಿರುವ ರಮೇಶ್ ಕುಮಾರ್ ಅವರನ್ನು ಜೊತೆಗೆ ಕಟ್ಟಿಕೊಂಡು ಸಿದ್ದರಾಮಯ್ಯ. ಓಡಾಡುತ್ತಿದ್ದಾರೆ ಅನ್ನುವುದೇ  ಮುನಿಯಪ್ಪ ಆಕ್ರೋಶಕ್ಕೆ ಕಾರಣವಾಗಿತ್ತು.

ಸಭೆ ಪ್ರಾರಂಭವಾಗುತ್ತಿದ್ದಂತೆ ಮಾತನಾಡಿದ ಮುನಿಯಪ್ಪ ಕಳ್ಳರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುವ ನಿನ್ಯಾವ ಸೀಮೆ ನಾಯಕ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ,  ಏ ಮುನಿಯಪ್ಪ ನೀನು ಸರಿಯಾಗಿ ಮಾತನಾಡು

ಮುನಿಯಪ್ಪ :  ಹೋಗಲೋ ನೀನು ಯಾವನ್ನೋ ಹೇಳೋಕೆ

ಸಿದ್ದರಾಮಯ್ಯ : ಏ ಮುನಿಯಪ್ಪ ನಿನ್ನ ಕಥೆ ಗೊತ್ತು.. ಗೆಲ್ಲೋಕೆ ಆಗಲಿಲ್ಲ ಮಾತನಾಡುತ್ತೀಯಾ

ಮುನಿಯಪ್ಪ :  ನನ್ನ ಸೋಲಿಸಿದ್ದು ನೀನೇ ಕಳ್ಳಾಟ ಆಡುತ್ತೀಯಾ

ಸಿದ್ದರಾಮಯ್ಯ : ಏ ಮುನಿಯಪ್ಪ ಇದೆಲ್ಲಾ ಬಿಟ್ಟು ಬಿಡು

ಮುನಿಯಪ್ಪ : ಕಳ್ಳರನ್ನ ಪಕ್ಕದಲ್ಲಿ ಕೂರಿಸಿಕೊಳ್ಳುವ ನೀನ್ಯಾವ ಸೀಮೆ ನಾಯಕ, ನಿನಗೆ ಮರ್ಯಾದೆ ಕೊಡಬೇಕಾ..?

ಹೀಗೆ ಮಾತಿನ ಸಮರ ಮುಂದುವರಿಯುತ್ತಿದ್ದಂತೆ ಇಬ್ಬರು ನಾಯಕು ಎದ್ದು ನಿಂತು ಕಿತ್ತಾಟ ಪ್ರಾರಂಭಿಸಿದರು. ಈ ವೇಳೆ ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ಕೂಡಾ ವಾಗ್ದಾಳಿ ನಡೆಸಿದರು.

ಇದರಿಂದ ಕೆರಳಿದ ಸಿದ್ದರಾಮಯ್ಯ ಸಭೆಯಿಂದ ಹೊರ ನಡೆಯಲು ಮುಂದಾದರು. ಆಗ ಸಮಾಧಾನ ಪಡಿಸಿದ ವೇಣುಗೋಪಾಲ್ ನಾಯಕರ ಕೋಪ ಶಮನಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದರು.

ಒಟ್ಟಿನಲ್ಲಿ ನಾಯಕರ ಕಿತ್ತಾಟ ನೋಡಿದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಉಪ ಚುನಾವಣೆಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ನಾಯಕರೇ ಸೋಲಿಸದರೆ ಅಚ್ಚರಿ ಇಲ್ಲ.

Advertisements

Leave a Reply

%d bloggers like this: