ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ : ಕೈ ದಳಕ್ಕೆ ಶಾಕ್ : ಬಿಜೆಪಿಗೆ ಬಿಗ್ ರಿಲೀಫ್

ಕರ್ನಾಟಕದಲ್ಲಿ ನಿಗದಿಯಾಗಿದ್ದ 15 ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆ ಕೊಟ್ಟಿದೆ.

ಅನರ್ಹ ಶಾಸಕರ ಮೇಲ್ಮನವಿ ಅರ್ಜಿ ಕುರಿತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿದೆ. ಜೊತೆಗೆ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 22ಕ್ಕೆ ಮುಂದೂಡಿದೆ.

ಅನರ್ಹ ಪ್ರಕರಣ ಇತ್ಯರ್ಥಗೊಂಡ ಬಳಿಕ ಚುನಾವಣೆ ಕುರಿತಂತೆ ತೀರ್ಮಾನಿಸುವಂತೆ ಸುಪ್ರೀಂಕೋರ್ಟ್ ಆಯೋಗಕ್ಕೆ ಸೂಚಿಸಿದೆ.

ರಾಜ್ಯದ 17 ಶಾಸಕರು ತಮ್ಮನ್ನು ಅನರ್ಹಗೊಳಿಸಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಕೃಷ್ಣ ಮುರಳಿ, ಸಂಜಯ್ ಖನ್ನಾ ಅವರ ನ್ಯಾಯಪೀಠ ನಡೆಸಿತ್ತು.

ಸುಪ್ರೀಂಕೋರ್ಟ್ ಈ ಮಧ್ಯಂತರ ಆದೇಶ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಶಾಕ್ ಕೊಟ್ಟಿದೆ. ಮೈತ್ರಿ ಸರ್ಕಾರ ಉರುಳಲು ಕಾರಣವಾದವರನ್ನು ಮಣಿಸಬೇಕು ಅನ್ನುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಈ ನಡುವೆ ಬಿಜೆಪಿಗಿದು ಬಿಗ್ ರಿಲೀಫ್ ಆಗಿದ್ದು, ವಲಸೆ ಮಂದಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಪಕ್ಷದಲ್ಲಿ ಉಂಟಾಗಿದ್ದ ಬಂಡಾಯ ಶಮನಕ್ಕೆ ಒಂದಿಷ್ಟು ಕಾಲವಕಾಶ ಸಿಕ್ಕ ಹಾಗಾಯ್ತು. ಅಕ್ಟೋಬರ್ 22ರ ತನಕ ಸಮಯವಿರುವುದರಿಂದ ಮನವೊಲಿಕೆ ಮಾಡುವ ಪ್ರಯತ್ನ ಮುಂದುವರಿಯಲಿದೆ.

ಮತ್ತೊಂದು ಕಡೆ ಅನರ್ಹ ಶಾಸಕರು ಎಲ್ಲಿ ಎಡವಟ್ಟು ಆಗಿ ಬಿಡುತ್ತದೋ ಅನ್ನುವ ಭಯದಿಂದ ಬಿಜೆಪಿ ನಾಯಕರನ್ನು ಕಾಡುತ್ತಿದ್ದರು. ಇದೀಗ ಅದು ಕೂಡಾ ತಪ್ಪಿದಂತಾಗಿದೆ.

ಆದರೆ ಅನರ್ಹಗೊಂಡವರಿಗೆ ಈ ತೀರ್ಪು ಕಹಿ ಮತ್ತು ಸಿಹಿಯ ಮಿಶ್ರಣ. ಅವರಿಗಿದು ಹಾಫ್ ರಿಲೀಫ್ ಅಷ್ಟೇ. ನ್ಯಾಯಾಲಯ ಚುನಾವಣೆಯನ್ನು ಮುಂದೂಡುವಂತೆ ಹೇಳಿದೆ ಹೊರತು, ಅನರ್ಹತೆಯನ್ನು ರದ್ದುಗೊಳಿಸಿಲ್ಲ. ಹೀಗಾಗಿ ಅವರು ಅನರ್ಹ ಶಾಸಕರಾಗಿಯೇ ಮುಂದುವರಿಯಲಿದ್ದಾರೆ.

ಒಂದು ವೇಳೆ ಸ್ಪೀಕರ್ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ಕೊಟ್ಟಿದ್ದರೆ ಅವರು ಸಂಪುಟ ಸೇರಬಹುದಾಗಿತ್ತು, ಲಾಭದಾಯಕ ಹುದ್ದೆ ಪಡೆಯಬಹುದಾಗಿತ್ತು.

ಚುನಾವಣೆ ಮುಂದೂಡಿಕೆಯಾಗಿವುದರಿಂದ ಎಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಳ್ಳುತ್ತೇವೋ ಅನ್ನುವ ಭೀತಿಯಿಂದ ಅನರ್ಹರು ಪಾರಾಗಿದ್ದಾರೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190926095224″); document.getElementById(“div_6020190926095224”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: