Advertisements

IMA ತನಿಖೆ ದಿಲ್ಲಿಗೆ ಶಿಫ್ಟ್ : ರಾಜಕಾರಣಿಗಳಿಗೆ ಶುರುವಾಯ್ತು ನಡುಕ

ಬಹುಕೋಟಿ ಮೊತ್ತದ ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಇಡಿ ದಿಲ್ಲಿಗೆ ಸ್ಥಳಾಂತರ ಮಾಡಿದೆ. ಈಗಾಗಲೇ ಚಿದರಂಬರಂ ಮತ್ತು ಡಿಕೆಶಿ ಪ್ರಕರಣದ ವಿಚಾರಣೆಯನ್ನು ದಿಲ್ಲಿಯಲ್ಲೇ ನಡೆಸುತ್ತಿರುವ ಇಡಿ ಐಎಂಎ ಪ್ರಕರಣವನ್ನೂ ಕೂಡಾ ದೆಹಲಿಯಲ್ಲೇ ನಡೆಸಲು ಮುಂದಾಗಿದೆ.

ಇದು ಪ್ರಕರಣದಲ್ಲಿ ಥಳುಕು ಹಾಕಿಕೊಂಡಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸಿದೆ. ಈಗಾಗಲೇ ಆರ್ ವಿ ದೇಶಪಾಂಡೆ, ರೋಷನ್ ಬೇಗೆ, ಜಮೀರ್ ಅಹ್ಮದ್ ಸೇರಿದಂತೆ ಅನೇಕ ರಾಜಕಾರಣಿಗಳ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ದೇಎಶ ವ್ಯಾಪ್ತಿ ತನಿಖೆ ನಡೆಸುವ ಅಧಿಕಾರವಿದೆ. ಹೀಗಾಗಿ ಐಎಂಎ ದೊಡ್ಡ ಮಟ್ಟದ ವಂಚನೆ ಪ್ರಕರಣವಾಗಿರುವ ಕಾರಣ ದೆಹಲಿಯಲ್ಲೇ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ.

Advertisements

Leave a Reply

%d bloggers like this: