ಯುಟಿ ಖಾದರ್ ಕ್ಷೇತ್ರದಲ್ಲಿ ಏನಾಗುತ್ತಿದೆ : ಕೈಗೆ ಗನ್ ಎತ್ತಿಕೊಂಡ ಕರಾವಳಿ ಕಾಂಗ್ರೆಸ್ ನಾಯಕ…!

ಶಾಸಕ ಯುಟಿ ಖಾದರ್ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ಮುಕ್ಕಚ್ಚೇರಿಯಲ್ಲಿ ಭಾನುವಾರ ತಡರಾತ್ರಿ ನಡೆದ ದುಂಡಿನ ದಾಳಿಗೆ ಸಂಬಂಧಿಸಿದಂತೆ 13 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ರಾಜ್ಯ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಹಾಗೂ ಕಿಲೇರಿಯಾ ನಗರದ ನಿವಾಸಿಗಳಾದ ಇನ್ನೊಂಗು ಗುಂಪಿನ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಯುವ ಕಾಂಗ್ರೆಸ್ ನಾಯಕ ಗುಂಡಿನ ದಾಳಿ ನಡೆಸಿದ್ದ.

ಈ ಪ್ರಕರಣದಲ್ಲಿ ಮೊಹಮ್ಮದ್ ಅರ್ಷದ್ ನಿಜಾಮುದ್ದೀನ್, ನಿಜಾಮುದ್ದೀನ್, ತೌಫೀಕ್ ಶೇಖ್, ಫಹಾದ್, ಮತ್ತು ಅಫ್ವಾನ್, ಮೊಹಮ್ಮದ್, ಮೊಹಮ್ಮದ್ ವಾಸಿಂ, ಅಬ್ದುಲ್ ರಹಮತ್ ಉಲ್ಲಾ, ಹರ್ಷದ್, ಮುಜಾಮಿಲ್, ರೈಫಾನ್ ಮತ್ತು ಮೊಬಮ್ಮದ್ ಸಿಯಾಬ್ ಎಂಬವರನ್ನು ಬಂಧಿಸಲಾಗಿದೆ.

ಸುಹೈಲ್ ಕಂದಕ್ ಮತ್ತು ಬಶೀರ್  ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಸುಹೈಲ್ ಕಂದಕ್ ಆರು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ಇರ್ಷಾದ್ ಎಂಬಾತನ ಬಲಗಾಲಿನ ಮಂಡಿ ಚಿಪ್ಪಿನ ಕೆಳ ಭಾಗಕ್ಕೆ ನುಗ್ಗಿದೆ. ಆತನನ್ನು ಯೇನಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಕ್ಷದೊಳಗಿನ ಕಿತ್ತಾಟವೇ ಘಟನೆಗೆ ಕಾರಣ ಎನ್ನಲಾಗಿದೆ. ಅರ್ಷದ್ ಎಂಬಾತ ಸುಹೈಲ್ ಕಂದಕ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಸುಹೈಲ್ ಫೋಟೋವನ್ನು ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿಕೊಂಡು ಆತನ ಪರವಾಗಿ ಬರೆದುಕೊಳ್ಳುತ್ತಿದ್ದ.

ಇದರಿಂದ ರೊಚ್ಚಿಗೆದ್ದಿದ್ದ ಸಲ್ಮಾನ್ ಎಂಬ ಕಾರ್ಯಕರ್ತ ಸುಹೈಲ್ ಗೆ ಪ್ರಚಾರ ಯಾಕೆ ಕೊಡಬೇಕು ಎಂದು ತಗಾದೆ ಎತ್ತಿದ್ದ. ಇದೇ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಗುಂಡು ಹಾರಿಸುವ ತನಕ ಹೋಗಿದೆ.

ಘಟನೆ ಕುರಿತಂತೆ ಮಾತನಾಡಿರುವ ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷ,  ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಹಾಗೂ ಸ್ಥಳದಲ್ಲಿ ಬಳಕೆಯಾದ ಗುಂಡು ಹಾಗೂ ಎರಡು ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಜೊತೆಗೆ ಎರಡು ಗುಂಪುಗಳಲ್ಲಿ ಕಾಣಿಸಿಕೊಂಡ ಸದಸ್ಯರ ಅಪರಾಧ ಹಿನ್ನಲೆ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ತಿಳಿಸಿದ್ದಾರೆ.

ಆದರೆ ಘಟನೆ ಕುರಿತಂತೆ ಕಾಂಗ್ರೆಸ್ ನಾಯಕರು ಸೈಲೆಂಟ್ ಆಗಿದ್ದಾರೆ. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೊಬ್ಬ ಅಪರಾಧ ಕೃತ್ಯ ಎಸಗಿದ್ದಾನೆ. ಆತನನ್ನು ಪಕ್ಷದಿಂದ ಕಿತ್ತು ಹಾಕುವುದಕ್ಕೆ ಅದ್ಯಾಕೆ ಹಿಂದೆ ಮುಂದೆ ನೋಡುತ್ತಿದ್ದಾರೋ ಗೊತ್ತಿಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: