ಮಜಾ ಟಾಕೀಸ್’ ಪ್ರಿಯರಿಗೆ ಶಾಕ್..!

ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಶೋಗಳು ಇತ್ತೀಚಿನ ದಿನಗಳಲ್ಲಿ ಕಾಮದ ಶೋಗಳಾಗುತ್ತಿದೆ. ಡಬಲ್ ಮೀನಿಂಗ್ ಗಳೇ ಹಾಸ್ಯದ ಸರಕುಗಳಾಗುತ್ತಿದೆ. ಕುಟುಂಬದ ಮಂದಿಯೆಲ್ಲಾ ಜೊತೆಯಲ್ಲಿ ಕೂತು ನಗುವ ಪರಿಸ್ಥಿತಿ ಈಗಿಲ್ಲ. ಮಕ್ಕಳ ಜೊತೆಗಂತು ಕಾಮಿಡಿ ಶೋಗಳನ್ನು ನೋಡಲು ಮುಜುಗರವಾಗುತ್ತದೆ.

ಆದರೆ ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಮಜಾ ಟಾಕೀಸ್ ಮಾತ್ರ ಇದಕ್ಕಿಂತ ಭಿನ್ನವಾಗಿತ್ತು. ಕುಟುಂಬ ಸದಸ್ಯರ ಜೊತೆಗೆ ಕೂತು ನಗುವ ಅವಕಾಶ ಇಲ್ಲಿತ್ತು. ಮಾತ್ರವಲ್ಲದೆ ಜನ ಸಾಮಾನ್ಯರ ಪ್ರತಿಭೆಗಳಿಗೂ ಇಲ್ಲಿ ಅವಕಾಶವಿತ್ತು. ಚಂದನವನದ ಚಿತ್ರಗಳಿಗೆ ಉಚಿತ ಪ್ರಚಾರದ ವ್ಯವಸ್ಥೆಯೂ ಇತ್ತು.

ಹೀಗಾಗಿಯೇ ಮಜಾ ಟಾಕೀಸ್ ಕಾರ್ಯಕ್ರಮ ಸೂಪರ್ ಹಿಟ್ ಆಗಿತ್ತು. ಸೃಜನ್ ಲೋಕೇಶ್ ಗೆ ಟಾಕಿಂಗ್ ಸ್ಟಾರ್ ಅನ್ನುವ ಪಟ್ಟವೂ ಸಿಕ್ಕಿತ್ತು. ಆದರೆ ಇದೀಗ ಮಜಾ ಟಾಕೀಸ್ ಕಾರ್ಯಕ್ರಮದ ಲಕ್ಷಾಂತರ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ಸೃಜನ್ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದ ಸೃಜನ್ 2015ರಲ್ಲಿ ಮಜಾ ಟಾಕೀಸ್ ಪ್ರಾರಂಭಿಸಿದ್ದರು. ಆ ವೇಳೆ ಕೇವಲ16 ವಾರಗಳ ಕಾಲ ಮಾತ್ರ ಎಂದು ವಾಹಿನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ TRP ಪಟ್ಟಿಯಲ್ಲಿ ಮಜಾ ಟಾಕೀಸ್ ಒಳ್ಳೆಯ ಅಂಕಗಳನ್ನು ಗಳಿಸಲಾರಂಭಿಸಿದ ಕಾರಣ, ಒಪ್ಪಂದವನ್ನು ಮತ್ತೊಂದಿಷ್ಟು ಅವಧಿಗೆ ಮುಂದುವರಿಸಲಾಯಿತು. ಹೀಗಾಗಿ 500 ಸಂಚಿಕೆಗಳನ್ನು ಮುಗಿಸುವಂತಾಯ್ತು.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190917163110″); document.getElementById(“div_6020190917163110”).appendChild(scpt);

ಈಗ ‘ಮಜಾ ಟಾಕೀಸ್’ ಮುಕ್ತಾಯ ಹಂತಕ್ಕೆ ಬಂದಿದೆ. ವಾರದ ಹಿಂದೆ ತಂಡ ಕೊನೆಯ ‘ಮಜಾ ಟಾಕೀಸ್’ ಎಪಿಸೋಡ್‌ಗಳನ್ನು ಮುಗಿಸಿದೆ. ಈ ಎಪಿಸೋಡ್‌ಗಳು ಇನ್ನು ಕೆಲ ವಾರಗಳ ಕಾಲ ಪ್ರಸಾರಗೊಳ್ಳಲಿದೆ. “ಈ ಐದು ವರ್ಷಗಳ ಕಾಲದ ಈ ಪಯಣವನ್ನು ಈಗ ಮುಗಿಸುವ ಸಮಯ” ಎಂದಿದ್ದಾರೆ ಸೃಜನ್.

ಹಾಗಾದರೆ ಮಜಾ ಟಾಕೀಸ್ ನಿಲ್ಲಲು ಕಾರಣವೇನು ಅನ್ನುವುದನ್ನು ನೋಡುವುದಾದರೆ ಹಲವು ಕಾರಣಗಳಿದೆ. ಮಜಾ ಟಾಕೀಸ್ ರೇಟಿಂಗ್ ಹಿಂದಿನಂತಿಲ್ಲ. ಜೊತೆಗೆ ಸೃಜನ್ ಪ್ರೊಡಕ್ಷನ್ ಹೌಸ್ ಕರ್ಲಸ್ ವಾಹಿನಿಗಾಗಿ ಇವಳು ಸುಜಾತ ಅನ್ನುವ ಧಾರವಾಹಿಯನ್ನು ನಿರ್ಮಿಸುತ್ತಿದೆ. ಮತ್ತೊಂದು ಕಡೆ ಸೃಜನ್ ಸಿನಿಮಾ ರಂಗದ ಕಡೆ ಮುಖ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಸೃಜನ್ ಅವರಿಗೆ ಝೀ ಕನ್ನಡ ವಾಹಿನಿಯಿಂದಲೂ ದೊಡ್ಡದೊಂದು ಆಫರ್ ಬಂದಿದ್ದು ಎಲ್ಲವನ್ನೂ ನಿಭಾಯಿಸುವುದು ಕಷ್ಟ ಅನ್ನುವ ಕಾರಣಕ್ಕಾಗಿ ಮಜಾ ಟಾಕೀಸ್ ಗೆ ಬ್ರೇಕ್ ಹಾಕಲಾಗುತ್ತಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: