ವಿದೇಶದಲ್ಲಿ ಅಕ್ರಮ ಆಸ್ತಿ ಆರೋಪ : ಜಿಯೋ ಒಡೆಯನ ಕುಟುಂಬಕ್ಕೆ ಐಟಿ ನೊಟೀಸ್

ಮೋದಿ ಪ್ರಧಾನಿಯಾದ ನಂತರ ಪ್ರತಿಪಕ್ಷಗಳನ್ನು ಗುರಿಯಾಗಿರಿಸಿಕೊಂಡು ಕೇಂದ್ರದ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ ಅನ್ನುವ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಅಂಬಾನಿ, ಅದಾನಿ ವ್ಯವಹಾರದ ಬಗ್ಗೆ ಐಟಿ, ಇಡಿ ಮೌನ ವಹಿಸಿರುವುದ್ಯಾಕೆ, ಅವರು ಅಕ್ರಮ ಎಸಗಿಲ್ಲವೇ, ಅವರ ಎಲ್ಲಾ ವ್ಯವಹಾರಗಳು ಪಾರದರ್ಶಕವೇ ಅನ್ನುವ ಪ್ರಶ್ನೆ ಕೇಳಲಾಗಿತ್ತು.

ಇದೀಗ ಅಂಬಾನಿ ಕುಟುಂಬ ಸದಸ್ಯರಿಗೆ ಐಟಿ ಇಲಾಖೆ ನೊಟೀಸ್ ಕೊಟ್ಟಿರುವ ವಿಷಯ ಬಹಿರಂಗಗೊಂಡಿದೆ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ ಮಾರ್ಚ್ ತಿಂಗಳಲ್ಲೇ ಈ ನೊಟೀಸ್ ಅನ್ನು ನೀಡಲಾಗಿದ್ದು, ಅಂಬಾನಿ ಪತ್ನಿ ನೀತಾ ಅಂಬಾನಿ ಹಾಗೂ ಅವರ ಮಕ್ಕಳಿಂದ ವಿವರಣೆ ಬಯಸಲಾಗಿದೆ.

ಐಟಿ ಇಲಾಖೆಯ ಮುಂಬೈ ವಿಭಾಗಕ್ಕೆ ಕಪ್ಪು ಹಣದ ಮಾಹಿತಿ ಲಭ್ಯವಾದ ಬಳಿಕ, 2015ರ ಕಪ್ಪು ಹಣ ಕಾಯ್ದೆಯಡಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಹಾಗೂ ಅವರ ಮೂವರು ಮಕ್ಕಳಿಗೆ ನೊಟೀಸ್ ಕಳುಹಿಸಲಾಗಿದ್ದು, ಇವರೆಲ್ಲರ ಹೆಸರಿನಲ್ಲಿ ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿ ಬಂದಿದೆ.

ಕೇಂದ್ರ ಸರ್ಕಾರಕ್ಕೆ ಜಿನೆವಾದ HSBC ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ 700 ಮಂದಿಯ ಪಟ್ಟಿ ಲಭ್ಯವಾಗಿತ್ತು. ಇದಾದ ಬಳಿಕ ಆದಾಯ ತೆರಿಗೆ ಈ ಸಂಬಂಧ ತನಿಖೆ ಆರಂಭಿಸಿತ್ತು. HSBC ಬ್ಯಾಂಕ್ ನಲ್ಲಿರುವ 14 ಖಾತೆಗಳಲ್ಲಿರುವ 601 ಮಿಲಿಯನ್ ಡಾಲರ್ ಹಣ ರಿಲಾಯನ್ಸ್ ಗ್ರೂಪ್ ನ ಆಫ್ ಶೋರ್ ಹೋಲ್ಡಿಂಗ್ಸ್ ನದ್ದಾಗಿದೆ ಎನ್ನಲಾಗಿದೆ.

ನೋಟೀಸ್ ನಲ್ಲಿ ಅಂಬಾನಿ ಕುಟುಂಬ ತಮ್ಮ ಆದಾಯದ ಬಗ್ಗೆ ಸೂಕ್ತ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಆದರೆ ಐಟಿ ನೊಟೀಸ್ ಕುರಿತಂತೆ ರಿಲಾಯನ್ಸ್ ಸಮೂಹ ಸಂಸ್ಥೆಯ ವಕ್ತಾರರು ನಿರಾಕರಿಸಿದ್ದು, ಯಾವುದೇ ನೊಟೀಸ್ ನಮಗೆ ಬಂದಿಲ್ಲ ಅಂದಿದ್ದಾರೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190916205639″); document.getElementById(“div_6020190916205639”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: