ಕಾರಿಗೆ ಬೆಂಕಿ : ಬೆಂಗಳೂರಿನ ಒಂದೇ ಕುಟುಂಬದ ಐವರ ಸಜೀವ ದಹನ

ತಿರುಪತಿ ವೆಂಕಟೇಶ್ವರನ ದರ್ಶನ ಮುಗಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ ಕಾರೊಂದು ಪಲ್ಟಿಯಾಗಿ ಬೆಂಕಿ ಹತ್ತಿಕೊಂಡು ಒಂದೇ ಕುಟುಂಬ ಐವರು ಸಜೀವ ದಹನವಾಗಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಅಂಧ್ರ ಪ್ರದೇಶದ  ಚಿತ್ತೂರು ಜಿಲ್ಲೆಯ  ಪಲಮನೇರು ಮಂಡಲಂನ ಗಂಗಾವರಂ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ.

ಚಾಹ್ನವಿ, ಕಲಾ, ಪವನ್, ರಾಮ್ ಹಾಗೂ ಸಾಯಿ ಅಶ್ರಿತ ಮೃತರಾಗಿದ್ದು, ಕಾರಿನಲ್ಲಿದ್ದ ವಿಷ್ಣು ಎಂಬವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಮೊದಲು ಹಳ್ಳವೊಂದಕ್ಕೆ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಡೋರ್ ಗಳು ಲಾಕ್ ಆಗಿದ್ದ ಕಾರಣ ಹೊರ ಬರಲು ಸಾಧ್ಯವಾಗಲಿಲ್ಲ.

ಹೆದ್ದಾರಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಅಕ್ಕ ಪಕ್ಕದಲ್ಲಿ ಯಾವುದೇ ಮನೆಗಳು ಇಲ್ಲದ ಕಾರಣದಿಂದ ಇವರ ರಕ್ಷಣೆಗೆ ಯಾರು ಬರಲಿಲ್ಲ. ಇದೇ ವೇಳೆ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನ ಚಾಲಕರು ರಕ್ಷಣೆ ಮುಂದಾದರೂ ಬೆಂಕಿಯ ಅಬ್ಬರದಿಂದ ರಕ್ಷಣೆ ಸಾಧ್ಯವಾಗಲಿಲ್ಲ.

ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಆದರೆ ಅಷ್ಟು ಹೊತ್ತಿಗೆ ವಿಧಿ ತನ್ನ ಆಟವನ್ನು ತೋರಿಸಿಯಾಗಿತ್ತು.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190914113628″); document.getElementById(“div_6020190914113628”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: