Advertisements

ಬಿಗ್​ಬಾಸ್​ ಸ್ಪರ್ಧಿ ಜಯಶ್ರೀಗೆ ಲೈಂಗಿಕ ಕಿರುಕುಳ : ನಡುರಾತ್ರಿಯಲ್ಲಿ ಬೀದಿಗೆ ತಳ್ಳಿದ ಸೋದರ ಮಾವ…?

ಬಿಗ್ ಬಾಸ್ ಕನ್ನಡ ಸೀಸನ್ 3ರ ಸ್ಪರ್ಧಿ, ನಟಿ ಜಯಶ್ರೀ ಮತ್ತು ಅವರ ತಾಯಿಯನ್ನು ಸೋದರ ಮಾವ ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈವೆಂಟ್ ಆರ್ಗನೈಸರ್ ಆಗಿರುವ ಜಯಶ್ರೀ ಮೇಲೆ ಸೋದರ ಮಾವ ಗಿರೀಶ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಾಗಿ ದೂರು ನೀಡಲಾಗಿದೆ. ನಡುರಾತ್ರಿ ಅನ್ನೋದನ್ನೂ ಲೆಕ್ಕಿಸದೆ ಮನೆಯಿಂದ ಹೊರ ಹಾಕಿದ್ದಾನೆ ಎಂದು ಆರೋಪಿಸಿರುವ ಜಯಶ್ರೀ ಲೈಂಗಿಕ ಕಿರುಕುಳ ಸೇರಿ ದೂರು ದಾಖಲಿಸಿದ್ದಾರೆ.

ಸದ್ಯ ಅಶೋಕನಗರದಲ್ಲಿರುವ ಅಜ್ಜಿಯ ಮನೆಯಲ್ಲಿ ಜಯಶ್ರೀ ಆಶ್ರಯ ಪಡೆದಿದ್ದು, ಮಾವ ಗಿರೀಶ್ ವಿರುದ್ದ ದೂರು ದಾಖಲಿಸಿಕೊಂಡಿರುವ ಚನ್ನಮ್ಮನಕೆರೆ ಅಚ್ಚುಕಟ್ಟು ಠಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಗಿರೀಶ್ ಹಾಗೂ ಜಯಶ್ರೀಗೆ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇಬ್ಬರ ವಿಚಾರಣೆ ಬಳಿಕ ಎಫ್ ಐ ಆರ್ ದಾಖಲಿಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ.

ಆಸ್ತಿ ವಿವಾದ ಮತ್ತು ಖಾಸಗಿ ಕಾರಣಗಳೇ ಈ ಜಗಳಕ್ಕೆ ಕಾರಣ ಎನ್ನಲಾಗಿದ್ದು, ಸೆಪ್ಟೆಂಬರ್ 10ರ ನಡುರಾತ್ರಿ ಈ ಘಟನೆ ನಡೆದಿದೆ.

ಬಿಗ್ ಬಾಸ್​ ಸ್ಪರ್ಧಿಯಾಗಿದ್ದ ಜಯಶ್ರೀ ನಟನೆ ಕಡೆಗೆ ಗಮನಹರಿಸಿದ್ದರು. ಖಾಸಗಿ ಕಂಪೆನಿಯಲ್ಲಿ ಹೆಚ್​ಆರ್ ಆಗಿದ್ದ ಅವರು ಕೊನೆಗೆ ಮಾಡೆಲಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ತಮ್ಮ ಮೇಲಾದ ಕಿರುಕುಳದ ಬಗ್ಗೆ ಹೇಳಿಕೊಂಡಿರುವ ಅವರು, ನನ್ನ ಮಾವ ನನ್ನ ಬಟ್ಟೆಯ ಬಗ್ಗೆಯೆಲ್ಲ ಮಾತನಾಡುತ್ತಿದ್ದರು. ನನ್ನ ಜೊತೆ ಸೈಕೋ ರೀತಿ ವರ್ತಿಸುತ್ತಿದ್ದರು. ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದರು. ಆತನ ಶೂ ತೆಗೆದು ಅನೇಕ ಬಾರಿ ನನ್ನ ಬಾಯಿಗೆ ಹಾಕಿದ್ದಾನೆ. ಆತನೊಬ್ಬ ದೊಡ್ಡ ಹುಚ್ಚ ಎಂದು ಹೇಳಿದ್ದಾರೆ.

ಈ ನಡುವೆ ನಟಿ ಜಯಶ್ರೀಗೆ ಕಿರುಕುಳ ನೀಡಿರುವ ಆರೋಪವನ್ನು ತಳ್ಳಿಹಾಕಿರುವ ಮಾವ ಗಿರೀಶ್, ಆಕೆಗೆ ಸ್ವಾತಂತ್ರ ನೀಡುತ್ತಿಲ್ಲ ಎಂದು ಆಕೆ ಈ ಆರೋಪ ಮಾಡಿದ್ದಾಳೆ. ಸುಮಾರು ದಿನಗಳಿಂದ ನಮ್ಮ ಮನೆಯಲ್ಲೇ ಇದ್ದ ಜಯಶ್ರೀ ಯಾವಾಗ ಅಂದ್ರೆ ಅವಾಗ ಹೊರಗಡೆ ಹೋಗುತ್ತಿದ್ದಳು. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದಾಳೆ.

ಜಯಶ್ರೀಗೆ ಕೊಡಬೇಕಾದ ಆಸ್ತಿ ಎಲ್ಲವನ್ನೂ ಕೊಟ್ಟಿದ್ದೇವೆ. ಆಕೆ ಬಿಗ್​ಬಾಸ್​ಗೆ ಹೋಗುವಾಗಲೂ ನಾನೇ ಸಹಾಯ ಮಾಡಿದ್ದೆ. ನಮ್ಮ ನಡುವೆ ಆಸ್ತಿ ವಿಚಾರಕ್ಕೆ ಯಾವುದೇ ಜಗಳ-ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisements

Leave a Reply

%d bloggers like this: