Advertisements

ದಂಡ ಹಾಕಲ್ಲ ಸಂಪರ್ಕಕ್ಕೆ ಬಾ… ವಿಕ್ರಮ್’ಗೆ ನಾಗ್ಪುರ ಪೊಲೀಸ್ ಮನವಿ

ಕಳೆದ ಶನಿವಾರ ಚಂದ್ರನ ದಕ್ಷಿಣ ಕಕ್ಷೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿದ್ದ ವಿಕ್ರಮ್ ಲ್ಯಾಂಡರ್, ಲ್ಯಾಂಡಿಂಗ್‍ಗೆ ಕೆಲವು ನಿಮಿಷ ಬಾಕಿಯಿದ್ದಾಗ ತನ್ನ ಕಕ್ಷೆಯನ್ನು ಬದಲಿಸಿ ಇಸ್ರೋದಿಂದ ಸಂಪರ್ಕವನ್ನು ಕಳೆದುಕೊಂಡಿತ್ತು. ಇದಕ್ಕೆ ಸಂಬಧಿಸಿದಂತೆ ನಾಗ್ಪುರ ಪೊಲೀಸ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ಬಳಿಕ ಮತ್ತೆ ಲ್ಯಾಂಡರ್ ಪತ್ತೆಯಾಗಿರುವುದನ್ನು ಇಸ್ರೋ ಘೋಷಣೆ ಮಾಡಿದ ಬೆನ್ನಲ್ಲೇ ನಾಗ್ಪುರ ಪೊಲೀಸರು ಬಹಳ ಸೃಜನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಪ್ರಸಕ್ತ ಕೇಂದ್ರ ಸರ್ಕಾರ ಜಾರಿಗೆ ಮಾಡಿರುವ ಮೋಟಾರು ವಾಹನ ಕಾಯಿದೆಗೆ ಲಿಂಕ್ ಮಾಡಿರುವ ಟ್ವೀಟ್ ಸಾಕಷ್ಟು ನೆಟ್ಟಿಗರ ಮನಗೆದ್ದಿದ್ದು, ತಮ್ಮದೇ ರೀತಿಯಲ್ಲಿ ನಾಗ್ಪುರ ಪೊಲೀಸರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟಾರು ವಾಹನ ಕಾಯಿದೆಗೆ ಚಂದ್ರಯಾನ-2 ಅನ್ನು ಲಿಂಕ್ ಮಾಡಿ ನಾಗ್ಪುರ ಪೊಲೀಸರು ಮಾಡಿರುವ ಟ್ವೀಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

“ಪ್ರೀತಿಯ ವಿಕ್ರಮ್ ದಯವಿಟ್ಟು ಪ್ರತಿಕ್ರಿಯೆ ನೀಡು, ಸಂಪರ್ಕ ಕಡಿದುಕೊಂಡಿದ್ದಕ್ಕೆ ನಾವು ನಿನಗೆ ದಂಡ ವಿಧಿಸುವುದಿಲ್ಲ” ಎಂದು ಟ್ವೀಟ್ ಮಾಡಿ #VikramLanderFound #ISROSpotsVikram ಹೆಸರಿಗೆ ನಾಗ್ಪುರ ಪೊಲೀಸರು ಟ್ಯಾಗ್ ಮಾಡಿದ್ದಾರೆ.

Advertisements

Leave a Reply

%d bloggers like this: