Advertisements

10 ವರ್ಷದಲ್ಲಿ ಪಂಪ್ ವೆಲ್ ಫ್ಲೈ ಓವರ್ ಕಟ್ಟಲಾಗದವರಿಗೆ ರಾಜ್ಯಾಧ್ಯಕ್ಷ ಸ್ಥಾನ

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ರಚನೆಯಾದ ದಿನವೇ ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದೆ. 

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್‌ ಕುಮಾರ್‌, ಕಟೀಲ್‌, ಸುನಿಲ್‌ ಕುಮಾರ್‌, ಸಿಟಿ ರವಿ, ಅರವಿಂದ ಲಿಂಬಾವಳಿ, ಜಗದೀಶ್‌ ಶೆಟ್ಟರ್‌, ಕೆಎಸ್‌ ಈಶ್ವರಪ್ಪ, ಆರ್‌. ಅಶೋಕ್‌ ಸೇರಿದಂತೆ ಹಲವು ನಾಯಕರ ಹೆಸರು ಕೇಳಿಬಂದಿತ್ತು. 

ಆದರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್‌ ಕುಮಾರ್ ಕಟೀಲ್‌ಗೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಲಭಿಸಿದೆ.  ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸದಾನಂದಗೌಡರು ಕೂಡಾ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು.

ಯಡಿಯೂರಪ್ಪ ತಮ್ಮಿಂದ ತೆರವಾಗುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಬಯಸಿದ್ದರು. ಆದರೆ ಈ ವಿಷಯದಲ್ಲಿ ರಾಜೀ ಮಾಡಿಕೊಳ್ಳಲು ಹೈಕಮಾಂಡ್ ಸಿದ್ದವಿರಲಿಲ್ಲ.

ಪಕ್ಷದಲ್ಲಿ ಏಕಚಕ್ರಾಧಿಪತ್ಯ ಇರಬಾರದು ಅನ್ನುವ ಕಾರಣಕ್ಕೆ ಅಧಿಕಾರ ಹಂಚಿಕೆ ಮಾಡಲು ಮುಂದಾಗಿರುವ ಹೈಕಮಾಂಡ್  ನಳಿನ್ ಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದೆ.

ಈ ನಡುವೆ ನಳಿನ್ ನೇಮಕದ ನಡುವೆ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌  ಹೆಸರು ಕೇಳಿ ಬಂದಿದ್ದು, ಸಂತೋಷ್ ಅವರೇ ನಳಿನ್ ಅವರ ಹೆಸರನ್ನು ಮುಂಚೂಣಿಗೆ ತಂದಿದ್ದಾರೆ ಎನ್ನಲಾಗಿದೆ.

ನಳಿನ್ ಕುಮಾರ್ ಕಟೀಲ್ ಉತ್ತಮ ಸಂಸದ ಅನ್ನುವ ಹೆಸರನ್ನು ಪಡೆದಿದ್ದಾರೆ. ಆದರೆ ಕ್ಷೇತ್ರದಲ್ಲಿ ಗೆಲುವಿಗೆ ಕಾರಣವಾಗಿದ್ದು ಮೋದಿ ಅಲೆ ಅನ್ನುವುದನ್ನು ಬಿಜೆಪಿ ಕಾರ್ಯಕರ್ತರೇ ಹೇಳುತ್ತಾರೆ.

ಮಂಗಳೂರು ಪಂಪವೆಲ್ ಬಳಿಯ ಪ್ಲೈ ಓವರ್ ಅನ್ನು 10 ವರ್ಷಗಳಲ್ಲಿ ಪೂರ್ಣಗೊಳಿಸಲಾಗದವರು ಬಿಜೆಪಿಯನ್ನು ಕಟ್ಟುತ್ತಾರೆಯೇ ಅನ್ನುವ ಟ್ರೋಲ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾಗಿದೆ.

Advertisements

Leave a Reply

%d bloggers like this: