ಶೇಮ್..ಶೇಮ್ ಪಿಡಿಓ : ಕ್ಯಾಟ್ ಫಿಶ್ ಹೊಂಡ ಮುಚ್ಚಿಸಲು ರವಿ ಡಿ. ಚನ್ನಣ್ಣನವರ್ ಬರಬೇಕಾಯ್ತು

ರೌಡಿಗಳನ್ನು ಮಟ್ಟಹಾಕಲು ಓಣಿ-ಓಣಿಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಖಡಕ್ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆಯಾಗಿ ಹೊಲಗಳಲ್ಲಿ ಫೀಲ್ಡ್ ಗೆ ಇಳಿದಿದ್ದಾರೆ.

ನಿಷೇಧಿತ ಕ್ಯಾಟ್ ಫಿಶ್ ಹೊಂಡಗಳ ತೆರವು ಕಾಯಾ೯ಚರಣೆ ಪ್ರಾರಂಭಿಸಿರುವ ಅವರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಂದಗುಡಿ ಹೋಬಳಿಯ ,ಬೈಲನರಸಾಪುರ, ಬಂಡಹಳ್ಳಿ , ಎನ್. ಹೊಸಹಳ್ಳಿ ಹಾಗೂ ಗೆದ್ದಲಹಳ್ಳಿಪುರ ಗ್ರಾಮಗಳಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್ ಫಿಶ್ ಹೊಂಡಗಳ ಬಗ್ಗೆ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿ, 30ಕ್ಕೂ ಹೆಚ್ಚು ಕ್ಯಾಟ್ ಫಿಶ್ ಹೊಂಡಗಳನ್ನು ಜೆಸಿಬಿ ಮೂಲಕ ಮುಚ್ಚಿಸಿದ್ದಾರೆ.

ಈ ಮೀನು ತಿಂದರೆ ಕ್ಯಾನ್ಸರ್ ಗ್ಯಾರಂಟಿ…!

ಜಿಲ್ಲಾ ಮೀನುಗಾರಿಕಾ ಇಲಾಖೆ ಮತ್ತು ತಹಶಿಲ್ದಾರರವರ ಜಂಟಿ ಸಹಯೋಗದಲ್ಲಿ ನಂದಗುಡಿ ಠಾಣೆ ಸರಹದ್ದಿನ ತೀರ್ಥಹಳ್ಳಿ,ಇಂಡಿಗನಾಳ ಮತ್ತು ಬೈಲನರಸಾಪುರದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳುವಂತೆ ನಂದಗುಡಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದುರಂತ ಅಂದರೆ ಕ್ಯಾಟ್ ಫಿಶ್ ಕೇಂದ್ರಗಳು ಆಯಾ ಪಿಡಿಓ ಗಳ ಗಮನಕ್ಕೆ ಖಂಡಿತಾ ಬಂದಿರುತ್ತದೆ ಮತ್ತು ಬರಲೇಬೇಕು ಕೂಡಾ. ಗ್ರಾಮದ ಆಗು ಹೋಗುಗಳಿಗೆ ಪಿಡಿಓಗಳೇ ಹೊಣೆಗಾರರಾಗಿದ್ದು, ತಕ್ಷಣ ತಮ್ಮ ಮೇಲಾಧಿಕಾರಿಗಳಿಗೆ ಈ ಸಂಬಂಧ ಅವರು ತಿಳಿಸಬೇಕಾಗಿತ್ತು. ಪಿಡಿಓಗಳಿಗೆ ಗೊತ್ತಾಗಿಲ್ಲ ಸರಿ, ಕಂದಾಯ ಇಲಾಖೆಯಡಿ ಕೆಲಸ ಮಾಡುವ ಗ್ರಾಮಕರಣಿಕರು ಏನು ಮಾಡುತ್ತಿದ್ದರು. ಅವರಿಗಾದರೂ ಗೊತ್ತಾಗಬೇಕಿತ್ತು ತಾನೇ.

ಹೋಗ್ಲಿ ತಹಶೀಲ್ದಾರ್ ಅವರಿಗಾದ್ರು ಗೊತ್ತಾಗಬೇಕಿತ್ತು ತಾನೇ. ಈ ಭಾಗದಲ್ಲಿ ಕ್ಯಾಟ್ ಫಿಶ್ ಕೇಂದ್ರಗಳು ಕಾರ್ಯಾಚರಿಸುತ್ತಿದೆ ಎಂದು ಮಾಧ್ಯಮಗಳು ಹಲವು ಸಲ ಸುದ್ದಿ ಮಾಡಿವೆ. ಇದಾದ ಬಳಿಕ ತಹಶೀಲ್ದಾರ್ ಪಿಡಿಓ, ಗ್ರಾಮಕರಣಿಕರಿಗೊಂದು ಸುತ್ತೋಲೆ ಹೊರಡಿಸಿ, ನಿಮ್ಮ ವ್ಯಾಪ್ತಿಯಲ್ಲಿ ಕ್ಯಾಟ್ ಫಿಶ್ ಹೊಂಡಗಳು ಇರಲೇಬಾರದು ಎಂದು ಹೇಳಿದ್ದರೆ, ರವಿ ಡಿ. ಚನ್ನಣ್ಣನವರ್ ಬರುವ ಅಗತ್ಯವೇ ಇರಲಿಲ್ಲ.

ಪೊಲೀಸರು ಕಾನೂನು ಸುವ್ಯವಸ್ಥೆ ಪಾಲಕರು ಅನ್ನುವುದನ್ನು ಕಂದಾಯ ಇಲಾಖೆ ಅಧಿಕಾರಿಗಳು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಜನರ ಆರೋಗ್ಯದೊಂದಿಗೆ ಇಷ್ಟು ದಿನ ಚೆಲ್ಲಾಟವಾಡಿದ ಅಧಿಕಾರಿಗಳಿಗೊಂದು ಧಿಕ್ಕಾರ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190817214047″); document.getElementById(“div_6020190817214047”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: