Advertisements

ಹೂಸು ವಾಸನೆ ತಾಳಲಾರದೆ ಸದನ ಕಲಾಪವನ್ನೇ ಮುಂದೂಡಿದ ಸ್ಪೀಕರ್

ಹೂಸು ವಾಸನೆ ತಾಳಲಾರದೆ ಸಂಸತ್ತಿನ ಕಲಾಪವನ್ನೇ ಮುಂದೂಡಿದ ವಿಚಿತ್ರ ಪ್ರಸಂಗ ಕಿನ್ಯಾದಲ್ಲಿ ನಡೆದಿದೆ.

 ಬುಧವಾರ ಕೀನ್ಯಾದ ಹೇಮಾ ಬೇ ಕೌಂಟಿ ಅಸೆಂಬ್ಲಿಯಲ್ಲಿ ಕಲಾಪ ನಡೆದಿತ್ತು. ಈ ವೇಳೆ ಸದಸ್ಯರೊಬ್ಬರು ಹೂಸು ಬಿಟ್ಟಿದ್ದರಿಂದ, ಅಸೆಂಬ್ಲಿ ಹಾಲ್ ದುರ್ವಾಸನೆಯಿಂದ ಕೂಡಿತ್ತು. ಗಟಾರ ತೆರೆದಂತ ಅನುಭವ ಪಡೆದ ಸದಸ್ಯರು ಹಾಗೂ ಸಿಬ್ಬಂದಿ ಪರದಾಡಿದರು.

ಕೆಟ್ಟ ವಾಸನೆ ಸ್ಪೀಕರ್ ಎಡ್ವಿನ್ ಕಾಕಾಚ್ ಅವರ ಮೂಗಿಗೂ ತಟ್ಟಿತು. ಈ ವೇಳೆ ಅಸಮಾಧಾನ ಹೊರ ಹಾಕಿದ ಸ್ಪೀಕರ್ ನಮ್ಮ ಸದಸ್ಯದಲ್ಲಿ ಒಬ್ಬರು ಹೂಸು ಬಿಟ್ಟಿದ್ದಾರೆ. ಅವರು ಯಾರೆಂದು ನನಗೆ ಗೊತ್ತಿದೆ ಅಂದರು.

ಈ ವೇಲೆ ಎಂದು ನಿಂತ ಸದಸ್ಯರೊಬ್ಬರು ನಾನು ಹೂಸು ಬಿಟ್ಟಿಲ್ಲ. ಸಹೋದ್ಯೋಗಿಗಳ ಮುಂದೆ ಅಂತಹ ಕೆಟ್ಟ ಕೆಲಸ ಮಾಡುವವನಲ್ಲ, ನನ್ನ ಅನುಮಾನಿಸಬೇಡಿ, ಅವಮಾನಮಾಡಬೇಡಿ ಅಂದರು. ಅವರೇನೋ ಸ್ಪಷ್ಟನೆ ಕೊಟ್ಟರು ಆದರೆ ವಾಸನೆ ಹೋಗಬೇಕಲ್ವ.

ಈ ವೇಲೆ ಸಿಬ್ಬಂದಿಯನ್ನು ಕರೆದ ಸ್ಪೀಕರ್ ಏರ್ ಫ್ರೆಶನರ್ ಹೊಡೆಯಿರಿ. ಕಚೇರಿಯಲ್ಲಿ ಯಾವ ಒಳ್ಳೆಯ ಪ್ಲೇವರ್ ಇದೆಯೋ ಅದು. ವೆನಿಲ್ಲಾ ಅಥವಾ ಸ್ಟ್ರಾಬೆರಿ ಆದರೆ ಒಳ್ಳೆಯದು ಎಂದು ಸೂಚಿಸಿ ಕಲಾಪವನ್ನು ಕೆಲ ಹೊತ್ತು ಮುಂದೂಡಿದರಂತೆ.

ಸಿಬ್ಬಂದಿ ಏರ್ ಪ್ರೆಶ್ ಹೊಡೆದ 10 ನಿಮಿಷಗಳ ಬಳಿಕ ಮತ್ತೆ ಕಲಾಪ ಮುಂದುವರಿಯಿತು ಎಂದು ಅಂತರ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Advertisements

Leave a Reply

%d bloggers like this: