Advertisements

ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೂ ಮದುವೆಯಾಗಬಹುದು…!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಗೆ 13 ಸಾವಿರ ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದ್ದು, ಇದರ ಭಾಗವಾಗಿ ಸಂಗೀತ ಕಾರ್ಯಕ್ರಮ, ಮದುವೆ, ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸುವ ಸ್ಥಳವನ್ನೂ ಕೂಡಾ ನಿರ್ಮಿಸಲಾಗುತ್ತಿದೆ.

ವಿಮಾನ ನಿಲ್ದಾಣದ ಆವರಣದಲ್ಲಿಯೇ ಸುಮಾರು 6.3 ಎಕರೆ ಪ್ರದೇಶದಲ್ಲಿ ಸುಮಾರು 9 ಸಾವಿರ ಜನರು ಸೇರಬಹುದಾದ ಹಾಲ್ ನಿರ್ಮಾಣವಾಗಲಿದೆ.

ವಿಮಾನ ನಿಲ್ದಾಣದ ವಿಸ್ತರಣೆಯಲ್ಲಿ ಹೊಸ ಟರ್ಮಿನಲ್, ರಸ್ತೆ ಅಗಲೀಕರಣ , ಮೆಟ್ರೋ ಸೌಕರ್ಯ, ಕಾರ್ಗೋ ಹಾಗೂ ಬಹುಮಾದರಿ ಸಾರಿಗೆ ಕೇಂದ್ರ ವ್ಯವಸ್ಥೆ ಕೂಡಾ ಸೇರಿದೆ.

ಮಲ್ಪಿ ಪರ್ಪಸ್ ಹಾಲ್ ನಿರ್ಮಾಣದಿಂದ ದೊಡ್ಡ ಮೊತ್ತದ ಆದಾಯ ನಿರೀಕ್ಷಿಸಲಾಗುತ್ತಿದೆ.

Advertisements

Leave a Reply

%d bloggers like this: