ತನ್ನದೇ ಕಾಫಿ ಶಾಪ್ ನಲ್ಲಿ ಕಾಸು ಕೊಟ್ಟು ಕಾಫಿ ಕುಡಿಯುತ್ತಿದ್ದ ಸಿದ್ದಾರ್ಥ್….!

ಎಸ್.ಎಂ. ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ, ಉದ್ಯಮಿ ಹೀಗೆ ಅನೇಕ ಬಿರುದುಗಳಿದ್ದರೂ ಸಿದ್ದಾರ್ಥ್ ಮಾತ್ರ ಸಾಮಾನ್ಯರಂತೆ ಬದುಕಲು ಬಯಸಿದ್ದರು. ಅವರಿಗೆ ಎಲ್ಲಾ ಪಕ್ಷದ ರಾಜಕೀಯ ನಾಯಕರ ಒಡನಾಟವಿತ್ತು, ಆದರೆ ರಾಜಕೀಯ ಬಗ್ಗೆ ಒಲವಿರಲಿಲ್ಲ. ಮಾಧ್ಯಮ ಕ್ಷೇತ್ರದಲ್ಲಿ ನೂರಾರು ಸ್ನೇಹಿತರಿದ್ದರು ಆದರೆ ಪ್ರಚಾರದ ಹುಚ್ಚಿರಲಿಲ್ಲ. ಅವರಿಗೆ ಇದದ್ದು ವ್ಯವಹಾರ ಪ್ರೀತಿ.

ಹಾಗಂತ ಅವರು ಯಾರೋ ಕಟ್ಟಿದ ವ್ಯವಹಾರ ಲೋಕದಲ್ಲಿ ಪಟ್ಟಾಭಿಷೇಕ ಮಾಡಿಸಿಕೊಂಡವರಲ್ಲ. ಬದಲಿಗೆ ತಾನೇ ತಳಮಟ್ಟದಿಂದ ಕಟ್ಟಿದ ವ್ಯವಹಾರ ಲೋಕವನ್ನು ಆಳಿದ ದೊರೆ.

ಸಿದ್ದಾರ್ಥ್ ಅವರ ಸರಳತೆ ಎಷ್ಟಿತ್ತು ಅನ್ನುವ ಕುರಿತಂತೆ ಮಾಧ್ಯಮ ಲೋಕದ ಹಿರಿಯರು ಸಾವಿರ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಆ ಪೈಕಿ ಪತ್ರಕರ್ತ ಡಿಪಿ ಸತೀಶ್ ಸಿದ್ದಾರ್ಥ್ ಕುರಿತಂತೆ ಲೇಖನವೊಂದನ್ನು ಬರೆದಿದ್ದಾರೆ. ಅದರ ಸಂಕ್ಷಿಪ್ತ ರೂಪ ಇಲ್ಲಿದೆ.

“ 2012ರ ಡಿಸೆಂಬರ್ ತಿಂಗಳು. ದೆಹಲಿಯಲ್ಲಿ ಹಿತವಾದ ಚಳಿಯ ವಾತಾವರಣ. ಬೆಂಗಳೂರಿಗೆ ಆಗಮಿಸುವ ಸಲುವಾಗಿ ಮುಂಜಾನೆ 6.15ರ ವಿಮಾನ ಹಿಡಿಯಲು 4.30ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಡಿಪಿ ಸತೀಶ್ ಆಗಮಿಸಿದ್ದರು.

ವಿಮಾನಕ್ಕೆ ಇನ್ನೂ ಸಮಯವಿದೆ. ಬೆಂಗಳೂರು ತಲುಪುವ ತನಕ ಹೊಟ್ಟೆಯ ಬೇಡಿಕೆಯನ್ನು ಪೂರೈಸದಿದ್ದರೆ ತಪ್ಪಾಗುತ್ತದೆ ಎಂದು ದಕ್ಷಿಣ ಭಾರತದ ಉಪಹಾರ ಮಂದಿರ ಮುಂದಿದ್ದ ದೊಡ್ಡ ಕ್ಯೂ ಒಂದನ್ನು ಸೇರಿಕೊಂಡರು.
ಆ ಕ್ಷಣದಲ್ಲಿ ಸತೀಶ್ ಅವರ ಭುಜ ತಟ್ಟಿದ ಅನುಭವ ಹಿಂತಿರುಗಿ ನೋಡಿದರೆ ಕಾಫಿ ಲೋಕದ ದೊರೆ ವಿ.ಜಿ ಸಿದ್ಧಾರ್ಥ.

ಬಳಿಕ ಇಬ್ಬರು ಮಾತುಕತೆಗಳು ಕನ್ನಡದಲ್ಲಿ ಸಾಗಿತು. ದೆಹಲಿ ಬಂದ ಕಾರಣ ಎಲ್ಲ ವಿಚಾರಗಳ ವಿನಿಮಯವಾಯ್ತು.

ಅಷ್ಟು ಹೊತ್ತಿಗೆ ಅವರಿಬ್ಬರೂ ಬೆಂಗಳೂರಿಗೆ ಪ್ರಯಾಣಿಸಬೇಕಾಗಿದ್ದ ವಿಮಾನ ಎರಡು ಗಂಟೆ ತಡವಾಗಲಿದೆ ಅನ್ನುವ ಸುದ್ದಿ ಬಂತು.ಹೀಗಾಗಿ ಇಬ್ಬರಿಗೂ ಸಮಯವನ್ನು ಕೊಲ್ಲುವ ಅನಿವಾರ್ಯತೆ ಇತ್ತು.

ಈ ವೇಳೆ ವಿಮಾನ ನಿಲ್ದಾಣದ lounge ನಲ್ಲಿ ಉಳಿದುಕೊಳ್ಳುವುದು ನನಗೆ ಇಷ್ಟವಿಲ್ಲ.ಏನಿದ್ದರೂ ಎಕಾನಮಿ ಕ್ಲಾಸ್ ಪ್ರಯಾಣಿಕರೊಂದಿಗೆ ಕುಳಿತುಕೊಳ್ಳವುದು ಖುಷಿ ಕೊಡುತ್ತದೆ ಅನ್ನುವ ವಿಚಾರವನ್ನು ಸಿದ್ದಾರ್ಥ್ ಸತೀಶ್ ಅವರೊಂದಿಗೆ ಹಂಚಿಕೊಂಡರು. ಇದು ಸಿದ್ದಾರ್ಥ್ ಸರಳತೆಗೆ ಸಾಕ್ಷಿ.

ಇದೇ ವೇಳೆ ಹೇಗಿದ್ದರೂ ಸಮಯ ಕಳೆಯಬೇಕಲ್ಲ ಎಂದು ಅದೇ ಟರ್ಮಿನಲ್‌ನಲ್ಲಿದ್ದ ಕೆಫೆ ಕಾಫಿ ಡೇಗೆ ಸರದಿಯಲ್ಲೇ ಸಾಗಿದ ಸಿದ್ದಾರ್ಥ್ ಹಣ ಕೊಟ್ಟು ಎರಡು ಕಪ್ Cappuccino ಖರೀದಿಸಿದರು. ಕಾಫಿ ಡೇ ಸಿಬ್ಬಂದಿಗೆ ತಾವು ಹಣ ಪಡೆದಿದ್ದು ನಮ್ಮ ಸಂಸ್ಥೆಯ ಸ್ಥಾಪಕರಿಂದ, ನಮ್ಮ ಸಂಸ್ಥೆಯ ಬಾಸ್ ಗೆ ಕಾಫಿ ಕೊಟ್ಟಿದ್ದೇವೆ ಅನ್ನುವ ಅರಿವು ಕೂಡಾ ಇರಲಿಲ್ಲ.

ಯಾಕೆಂದರೆ ಸಿದ್ದಾರ್ಥ್ ತಮ್ಮನ್ನು ಯಾರೆಂದು ಪರಿಚಯಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಅವರದ್ದೇ ಆದ ಲೋಕ, ಹೀಗಾಗಿ ಪ್ರಚಾರ, ತಾನೊಬ್ಬ ಬಾಸ್ ಅನ್ನುವುದನ್ನು ತೋರಿಸಿಕೊಳ್ಳುವುದು ಇಷ್ಟವಿರಲಿಲ್ಲ. ಈ ಕಾರಣದಿಂದ ಅವರು ಸತೀಶ್ ಅವರೊಂದಿಗೆ ಕಾಫಿ ಕುಡಿಯುವ ಸಲುವಾಗಿ ಕಾಸು ಕೊಟ್ಟೇ ವ್ಯಾಪಾರ ಮಾಡಿದ್ದರು. ಇದು ಸಿದ್ದಾರ್ಥ್ ಅವರ ವ್ಯವಹಾರ ಮತ್ತು ಸರಳತೆಗೆ ಸಾಕ್ಷಿ.

ಈ ರೀತಿ ಸತೀಶ್ ತಮ್ಮ ಬರಹವನ್ನು ಮುಂದುವರಿಸುತ್ತಾರೆ. ಪೂರ್ತಿ ಬರಹ ಓದಲು ಈ ಲಿಂಕ್ ಕ್ಲಿಕ್ ಮಾಡಬಹುದಾಗಿದೆ.

ಇಲ್ಲಿ ಸತೀಶ್ ಅವರ ಬರಹ ಕೇವಲ ಒಂದು ಉದಾಹರಣೆಯಷ್ಟೇ. ಹೀಗೆ ತಮ್ಮದೇ ಕಾಫಿ ಶಾಪ್ ಗಳಿಗೆ ಭೇಟಿ ಕೊಟ್ಟಿದ್ದ ಸಿದ್ದಾರ್ಥ್ ಅನೇಕ ಬಾರಿ ಕಾಸು ಕೊಟ್ಟೇ ಗ್ರಾಹಕನಂತೆ ಕೂತು ಬಂದಿದ್ದಾರೆ. ಅವರೆಂದಿಗೂ outlet ವಿಚಾರದಲ್ಲಿ ತಲೆ ಹಾಕಿದವರಲ್ಲ. ಅದನ್ನು ನೋಡಿಕೊಳ್ಳಲು ಅದರದ್ದೇ ಆದ ಜನರಿದ್ದಾರೆ ಅನ್ನುವುದು ಅವರ ಮಾತಾಗಿತ್ತು.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”69″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6920190731121801″); document.getElementById(“div_6920190731121801”).appendChild(scpt);

ಇನ್ನೂ ಒಂದು ವೇಳೆ outlet ಸಿಬ್ಬಂದಿ ತಮ್ಮನ್ನು ಗುರುತು ಹಿಡಿದರೂ, ತಾನೊಬ್ಬ ಬಾಸ್ ಅನ್ನುವ ಭಯ ಭಕ್ತಿ ತೋರುವುದನ್ನು ಅವರು ಇಷ್ಟ ಪಡುತ್ತಿರಲಿಲ್ಲ. ಗ್ರಾಹಕನಂತೆ ಹೋದವರು ಗ್ರಾಹಕನಂತೆ ಎದ್ದು ಬರುತ್ತಿದ್ದರು. ಅಲ್ಲೇನಾದರೂ ಸಮಸ್ಯೆ ಅನ್ನುವುದು ಕಂಡು ಬಂದರೆ ಸಂಬಂಧಪಟ್ಟವರ ಗಮನಕ್ಕೆ ತಂದು ಕೆಲಸ ಮಾಡಿಸುತ್ತಿದ್ದರು.

ಸರಳತೆ ಮತ್ತು ವಿನಮ್ರತೆಯು ಸಿದ್ಧಾರ್ಥ ಅವರ ಟ್ರೇಡ್‌ಮಾರ್ಕ್‌ಗಳಾಗಿದ್ದರೆ, ಅವರ ವ್ಯವಹಾರದಲ್ಲಿದ್ದ ಶಿಸ್ತು ಅವರನ್ನು ಕಾಫಿ ಲೋಕದ ದೊರೆಯನ್ನಾಗಿಸಿತ್ತು.

ಇಷ್ಟೆಲ್ಲಾ ಒಳ್ಳೆಯ ವ್ಯಕ್ತಿತ್ವದ ಸಿದ್ದಾರ್ಥ್ ಕೇವಲ ತೆರಿಗೆ ಅನ್ನುವ ಭೂತಕ್ಕೆ ಹೆದರಿದ್ರ, ಖಂಡಿತಾ ಸಾಧ್ಯವಿಲ್ಲ. ಅವರ ಸಾವಿನ ಹಿಂದೆ ನಿಗೂಢವಾದ ಕಾರಣವೊಂದಿದೆ ಅನ್ನುವುದರಲ್ಲಿ ಸಂಶಯವೇ ಇಲ್ಲ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190731121801″); document.getElementById(“div_6020190731121801”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: