Advertisements

ಜೈಪಾಲ್‌ ರೆಡ್ಡಿ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ರಮೇಶ್‌ ಕುಮಾರ್‌, ಸಿದ್ದರಾಮಯ್ಯ

ಭಾನುವಾರ ಬೆಳಗ್ಗೆ ನಿಧನರಾಗಿದ್ದ ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ವಿಧಾನಸಭಾ ಮಾಜಿ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಅಜಾದ್ ಸೇರಿದಂತೆ ಹಲವು ಹಿರಿಯ ನಾಯಕರು ಪಾಲ್ಗೊಂಡು ಅಂತಿಮ‌ ನಮನ ಸಲ್ಲಿಸಿದರು.

ವಿಶೇಷವಾಗಿ ಸಿದ್ಧರಾಮಯ್ಯ ಹಾಗೂ ರಮೇಶ್ ಕುಮಾರ್ ಅವರು ಜೈಪಾಲ್ ರೆಡ್ಡಿ ಪಾರ್ಥಿವ ಶರೀರಕ್ಕೆ ಹೆಗಲು ನೀಡುವ ಮೂಲಕ ತಮ್ಮ ಆಪ್ತ ಮಿತ್ರನಿಗೆ ಅಂತಿಮ ನಮನ ಸಲ್ಲಿಸಿದರು.

ನಂತರ ಪ್ರತಿಕ್ರಿಯೆ ನೀಡಿದ ಕೆ.ಆರ್‌. ರಮೇಶ್ ಕುಮಾರ್‌, ಮನೆಯಲ್ಲಿರುವ ಹಿರಿಯ ತಲೆಯೊಂದು ನಾವು ಕಳೆದುಕೊಂಡಿದ್ದೇವೆ. ಜೈಪಾಲ್‌ ರೆಡ್ಡಿ ಅವರು ರಾಜಕೀಯದಲ್ಲಿ ನನಗೆ ಗುರು ಸಮಾನರಾಗಿದ್ದರು. ಮಾರ್ಗದರ್ಶನ ನೀಡಿ, ತಪ್ಪುಗಳನ್ನ ತೀಡಿ ತಿದ್ದಿದ್ದರು ಎಂದರು.

ಜೈಪಾಲ್‌ ರೆಡ್ಡಿ ನಿಜಕ್ಕೂ ಮಹಾನುಭಾವರು. ಸ್ವಾರ್ಥಕ್ಕಾಗಿ ಎಂದಿಗೂ ರಾಜಕೀಯಕ್ಕೆ ಬರಲಿಲ್ಲ. ಮೌಲ್ಯಗಳಿಗಾಗಿ ರಾಜಕೀಯ ರಂಗಕ್ಕೆ ಧುಮುಕಿದರು. ಮೌಲ್ಯಯುತ ರಾಜಕಾರಣವನ್ನೇ ಮಾಡಿಕೊಂಡು ಬಂದಿದ್ದರು. ಸ್ವಾರ್ಥಕ್ಕಾಗಿ ಎಂದಿಗೂ ಪಕ್ಷ ಸೇರಲಿಲ್ಲ ಎಂದು ಕೆಆರ್‌ ರಮೇಶ್‌ಕುಮಾರ್‌ ದುಃಖತಪ್ತರಾಗಿ ನುಡಿದರು.

ಜೈಪಾಲ್‌ ರೆಡ್ಡಿ ಪುತ್ರ ಅರವಿಂದ್‌ ರೆಡ್ಡಿ ಅಗ್ನಿಸ್ಪರ್ಶ ಮಾಡಿದರು. ಅಂತ್ಯಕ್ರಿಯೆ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಹುಸೇನ್ ಸಾಗರ್ ತಟದಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಸಮಾಧಿ ಪಕ್ಕದಲ್ಲಿ ಹಿಂದು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಇದಕ್ಕೂ ಮುನ್ನ ಗಾಂಧಿ ಭವನದಲ್ಲಿ ಪಾರ್ಥಿವ ಶರೀರಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಅಂತಿಮ ನಮನ ಸಲ್ಲಿಸಿದರು.

Advertisements

Leave a Reply

%d bloggers like this: