Advertisements

ಕಡಲ ಮಕ್ಕಳಿಗೆ ಭರ್ಜರಿ ಗಿಫ್ಟ್ ಕೊಟ್ಟ ಯಡಿಯೂರಪ್ಪ ….

ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿರುವ ನೂತನ ಸಿಎಂ ಯಡಿಯೂರಪ್ಪ ಮೂರೇ ದಿನಗಳಲ್ಲಿ ಮತ್ತೊಂದು ಮಹತ್ವದ ಯೋಜನೆ ಘೋಷಿಸಿದ್ದಾರೆ.

ಈ ಬಾರಿ ಕರಾವಳಿ ಭಾಗಕ್ಕೆ ಬಂಪರ್ ಕೊಡುಗೆ ಕೊಟ್ಟಿರುವ ಅವರು ಮೀನುಗಾರರ ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳಲ್ಲಿನ 50 ಸಾವಿರ ರೂಪಾಯಿವರೆಗಿನ ಸಾಲಮನ್ನಾ ಮಾಡಿದ್ದಾರೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.

ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ ಒಟ್ಟು 60 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದ್ದು, ಸುಮಾರು 23,507 ಮೀನುಗಾರರು ಸಾಲಮನ್ನಾ ಪ್ರಯೋಜನ ಪಡೆಯಲಿದ್ದಾರೆ.

2017-18, 2018-19 ನೇ ಸಾಲಿನ ಅಂದರೆ ಎರಡು ವರ್ಷಗಳ ಹಿಂದಿನಿಂದ ಈ ವರೆಗೆ ಮಾಡಿದ 50 ಸಾವಿರ ರೂ.ಗಳ ವರಿಗಿನ ಸಾಲ ಮನ್ನಾವಾಗಲಿದೆ.

Advertisements

Leave a Reply

%d bloggers like this: