Advertisements

ಪೂರ್ಣಾವಧಿ ಮುಖ್ಯಮಂತ್ರಿ ಕಷ್ಟ – ನಾನಾ ರೀತಿಯ ಸಂಕಷ್ಟ : ಪ್ರಮಾಣ ವಚನದ ಬಗ್ಗೆ ಅಪಸ್ವರ

ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಉಳಿದಿರುವ ಅವಧಿ ಪೂರ್ಣಗೊಳಿಸಲಿ ಅನ್ನುವ ಬಿಜೆಪಿ ಕಾರ್ಯಕರ್ತರ ಬಯಕೆ. ಆದರೆ ರಾಜಕೀಯ ವಿರೋಧಿಗಳು ಅವರನ್ನು ಅಧಿಕಾರಿದಿಂದ ಕೆಳಗಿಳಿಸುವ ಕುರಿತಂತೆ ಲೆಕ್ಕಚಾರ ಪ್ರಾರಂಭಿಸಿದ್ದಾರೆ. ಇದಕ್ಕಾಗಿ ರಣತಂತ್ರಗಳು ಕೂಡಾ ರೂಪಿತವಾಗುತ್ತಿದೆ.

Buy Smart Watches starting from Rs.1299

ಈ ನಡುವೆ ಅಭಿವೃದ್ಧಿ ಕುರಿತಂತೆ ಲೆಕ್ಕಚಾರ ನಡೆಯಬೇಕಾದ ಜಾಗದಲ್ಲಿ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಘಳಿಗೆ ಕುರಿತಂತೆ ಚರ್ಚೆ ಪ್ರಾರಂಭವಾಗಿದೆ. ಅವರು ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತವೇ ಅವರಿಗೆ ಸಂಕಷ್ಟ ತಂದೊಡ್ಡಲಿದೆ ಅನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.

ಜ್ಯೋತಿಷಿ ಕಬಿಯಾಡಿ ಜಯರಾಮ ಆಚಾರ್ಯ ಬೆನ್ನಲ್ಲೇ  YSK Guruji ಅನ್ನುವವರು ಇದೀಗ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿರುವ ಮುಹೂರ್ತದ ಬಗ್ಗೆ ಫೇಸ್ ಬುಕ್ ಗ್ರೂಫ್ ಒಂದರಲ್ಲಿ ತಮ್ಮ ಅಭಿಪ್ರಾಯ ನಮೂದಿಸಿದ್ದಾರೆ.

ಮುಂಜಾನೆಗೊಂದು ಬೆಸ್ಟ್ ಕಾಫಿ ಸವಿಯೋದು ಹೇಗೆ….?

“ 26.7.2019, ಶುಕ್ರವಾರ, ಬೆಂಗಳೂರು,ಸಂಜೆ 6.34 ಗಂಟೆ- ಲೆಡ್ಜರ್ಗೆ ಸಹಿ ಮಾಡಿದ ಮೇಲೆ ಮಾತ್ರ ಅಧಿಕೃತವಾಗಿ ಮುಖ್ಯಮಂತ್ರಿ! ಹಾಗಾಗಿ ಈ ಸಮಯ ಮಕರ ಲಗ್ನ 6 ಡಿಗ್ರಿ ಲಗ್ನಾಧಿಪತಿ ಶನಿ ವ್ಯಯದಲ್ಲಿ ವಿಘ್ನಕಾರಕ ಕೇತುವಿನೊಡನೆ! ಹೆಜ್ಜೆ ಹೆಜ್ಜೆಗೂ ವಿಘ್ನ, ಆತಂಕ, ನ್ಯಾಯಾಲಯ ಸಂಘರ್ಷ, ಅಡ್ಡಗಾಲು ಹಾಕುವ ಶತ್ರುಗಳು!

ಸಪ್ತಮ, ಮಾರಕ ಸ್ಥಾನದಲ್ಲಿ, ಪರಮ ಶತ್ರುವಾದ ಅಷ್ಟಮಾಧಿಪತಿ ರವಿ, ನೀಚ ಕುಜ( ಸುಖ ಹಾಗೂ ಲಾಭ+ ಬಾಧಕಾಧಿಪತಿ), ಬುಧ ಹಾಗೂ ಶುಕ್ರರು! ಸ್ವಪಕ್ಷೀಯರೇ ವಿರೋಧಿಗಳೊಂದಿಗೆ ಶಾಮೀಲಾಗಿ ಅಪಾರವಾಗಿ ಬಾಧೆ ನೀಡುತ್ತಾರೆ! 

PayTm ಮಾಲ್ ಬಗ್ಗೆ ನಿಮಗೆಷ್ಟು ಗೊತ್ತು…?

ದೈವಾನುಗ್ರಹಕಾರಕ ಗುರು ವಕ್ರನಾಗಿ 11 ರಲ್ಲಿ , ಲಾಭ ಮತ್ತು ಬಾಧೆ ನೀಡುತ್ತಾನೆ! ಸ್ವಜಾತೀಯ ಗುರುಗಳು, ಸ್ವಾಮೀಜಿಗಳು, ಮಠಾಧೀಶರಿಂದ ಬೆಂಬಲ, ಶ್ರೀರಕ್ಷೆ ಸಿಕ್ಕರೂ ಅನ್ಯ ಜಾತಿಯ ಗುರು ಜನರಿಂದ ಅಪಾರ ವಿರೋಧವುಂಟಾಗುತ್ತದೆ. ಹಣಕಾಸಿನ ಪರಿಸ್ಥಿತಿ ಹದಗೆಡುತ್ತದೆ. ವಿದ್ಯಾ ಕ್ಷೇತ್ರ ಹಾಗೂ ಧಾರ್ಮಿಕ ವಿಷಯಗಳಲ್ಲಿ ತೊಂದರೆಗಳುಂಟಾಗುತ್ತವೆ.

ಶತ್ರು ಸ್ಥಾನದಲ್ಲಿ ಉಚ್ಚ, ಪ್ರಬಲ ರಾಹು ಬಲವಾಗಿ ಕಾಡುತ್ತಾನೆ. ವಿದ್ಯುನ್ಮಾನ ಮಾಧ್ಯಮಗಳು ವಿರೋಧಿಗಳಾಗುತ್ತಾರೆ!. ಗುಪ್ತ ಶತ್ರುಗಳ ನೀಚ ಕಾರ್ಯತಂತ್ರಗಳಿಂದ, ವಾಮಾಚಾರ ದೋಷಗಳಿಂದ ತೊಂದರೆಯಾಗುತ್ತದೆ.

ಪವರ್ ಬ್ಯಾಂಕ್ ಗಳ ಮೇಲೆ ಭಾರೀ ದರ ಕಡಿತ

ಕೆಲವು ವಿರೋಧಿಗಳು ಮಿತ್ರರಾಗಿ ಭಾಗ್ಯವೃದ್ಧಿಯಾಗುತ್ತದೆ, ಕಷ್ಟವೂ ಆಗುತ್ತದೆ- ಶುಭ ನಾದರೂ ಶುಕ್ರ ಇದಕ್ಕೆ ಕಾರಣ- ಮಿಶ್ರಫಲ ಬುಧ,ಶುಕ್ರ ಮತ್ತು ಕುಜ ಅಸ್ತರು-combust ಸಂಪೂರ್ಣ ಬಲಹೀನರು.ಪೂರ್ಣಾವಧಿ ಮುಖ್ಯಮಂತ್ರಿಯಾಗುವುದು ತುಂಬಾ ಕಷ್ಟ. ಭಾಜಪ ಸರ್ಕಾರ ಉಳಿಯಬಹುದು.

ನಾನಾ ರೀತಿಯ ಸಂಕಷ್ಟ, ಪ್ರತಿನಿತ್ಯ ಶತ್ರುಗಳ ಕಾಟ, ದೈವಾನುಗ್ರಹವಿಲ್ಲದ ಪರಿಸ್ಥಿತಿ, ಪ್ರತಿಕೂಲ ಸನ್ನಿವೇಶಗಳೊಂದಿಗೆ ಹುಟ್ಟು ಹೋರಾಟಗಾರ ಯಡಿಯೂರಪ್ಪನವರು ಛಲದಿಂದ ಹೋರಾಡಿ ಯಶಸ್ವಿಯಾಗಲಿ ಎಂದು ಶುಭಹಾರೈಸುತ್ತೇನೆ” . ಅಂದಿದ್ದಾರೆ.

ಹಾಗಂತ ಜ್ಯೋತಿಷಿಗಳು ಹೇಳಿದ ತಕ್ಷಣ ಎಲ್ಲವೂ ಸತ್ಯವಲ್ಲ. ಅತೃಪ್ತರನ್ನು ಕಟ್ಟಿಕೊಂಡು ಹೊರಟಿರುವ ಯಡಿಯೂರಪ್ಪ ಅವರ ಮುಂದಿರುವುದು ಮುಳ್ಳಿನ ಹಾದಿ. ಹೈಕಮಾಂಡ್ ಹಲವು ಕಂಡೀಷನ್ ಗಳನ್ನು ಹಾಕಿ ಸರ್ಕಾರ ರಚನೆಗೆ ಅನುಮತಿ ನೀಡಿದೆ. ಹೀಗಿರುವ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಮುಂದೆ ಕಾದಿದೆ ಸಂಕಷ್ಟ ಎಂದು ಜ್ಯೋತಿಷ್ಯವೇ ಹೇಳಬೇಕಾಗಿಲ್ಲ. ರಾಜಕೀಯದ ಒಳ ಮರ್ಮಗಳ ಅರಿವು ಇರುವ ಸಾಮಾನ್ಯ ಕೂಡಾ ಇದೇ ಮಾತನ್ನು ಹೇಳುತ್ತಾನೆ.

Advertisements

Leave a Reply

%d bloggers like this: