ಗಿಡ ನೆಡಲು ಬಂದ ಅರಣ್ಯ ಇಲಾಖೆ ಮಹಿಳಾ ಅಧಿಕಾರಿಯನ್ನೇ ಥಳಿಸಿದ ಗ್ರಾಮಸ್ಥರು

ಅರಣ್ಯ ಬೆಳೆಸುವ ಅಭಿಯಾನದ ಭಾಗವಾಗಿ ಗಿಡ ನೆಡಲು ಬಂದ ಮಹಿಳಾ ಅಧಿಕಾರಿಯೊಬ್ಬರನ್ನು ಗ್ರಾಮಸ್ಥರು ಮನಸೋ ಇಚ್ಛೆ ಥಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ರಾಜ್ಯದ ಕೋಟ ಸರ್ಸಾಲ ಗ್ರಾಮದಲ್ಲಿ ಗಿಡ ನೆಡಲು ಬಂದ ಅಧಿಕಾರಿಯನ್ನು ಆಡಳಿತಾರೂಢ ಟಿ.ಆರ್.ಎಸ್ ನ ಸ್ಥಳೀಯ ನಾಯಕ ಕೊನೇರು ಕೃಷ್ಣ ನೇತೃತ್ವದಲ್ಲಿ ಜಮಾಯಿಸಿದ ಜನರು ಥಳಿಸಿದ್ದಾರೆ.

ಸ್ಕರ್ಟ್ ಪ್ರಿಯ ಹುಡುಗಿಯರಿಗೆ ಶುಭ ಸುದ್ದಿ

ದುರಂತ ಅಂದ್ರೆ ಕೊನೇರು ಕೃಷ್ಣ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷನಾಗಿದ್ದು, TRS MLA ಕೊನೇರು ಕೋನಪ್ಪ ಅವರ ಸಹೋದರನಾಗಿದ್ದಾನೆ.

ಘಟನೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಅನಿತಾ ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರನ್ನು ಸಮಾಧಾನಪಡಿಸಲು ಅಧಿಕಾರಿ ಯತ್ನಿಸುತ್ತಿದ್ದರೂ ಆಕೆಯ ಮೇಲೆ ಬಿದಿರಿನ ದೊಣ್ಣೆಯಿಂದ ನಿರಂತರವಾಗಿ ಹಲ್ಲೆ ನಡೆಸಲಾಗಿದೆ. ಜೊತೆಗೆ ಆಕೆಯೊಂದಿಗೆ ಇದ್ದ ಇತರ ಅಧಿಕಾರಿಗಳನ್ನೂ ಸಹ ಥಳಿಸಿದ್ದಾರೆ.

ಗಾಯಗೊಂಡ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಕನಸಿನ ಕೂಸಾಗಿರುವ ಕಳೇಶ್ವರಂ ನೀರಾವರಿ ಯೋಜನೆಯ ಭಾಗವಾಗಿ ಸರ್ಸಾಲ ಗ್ರಾಮದಲ್ಲಿ ಗಿಡ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು.

Buy 3 Lingerie at Rs.1111

ಕಳೇಶ್ವರಂ ನೀರಾವರಿ ಯೋಜನೆಯನ್ನು ಗೋದಾವರಿಯ ಪ್ರವಾಹದ ನೀರನ್ನು ಸದುಪಯೋಗಪಡಿಸಿಕೊಳ್ಳಲು ಪ್ರಾರಂಭಿಸಲಾಗಿದೆ.

ಈ ಯೋಜನೆಗಾಗಿ 80 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ತೆಂಲಗಾಣವನ್ನು ಬರ ಮುಕ್ತವಾಗಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವಗಾಗಿದೆ.

ಹೀಗಾಗಿ ಇದಕ್ಕೆ ಹೊಂದಿಕೊಂಡಿರುವ ಅರಣ್ಯ ಇಲಾಖೆಗೆ ಸೇರಿದ ಪ್ರದೇಶಗಳಲ್ಲಿ ಕಾಡು ಬೆಳೆಸಲಾಗುತ್ತಿದೆ. ಇಲ್ಲಿದ್ದ ಕಾಡುಗಳು ಈಗಾಗಲೇ ನಾಶವಾಗಿದ್ದು, ಮತ್ತೆ 20ಕ್ಕೂ ಹೆಚ್ಚು ಹೆಕ್ಟೆರ್ ಪ್ರದೇಶದಲ್ಲಿ ಕಾಡು ಬೆಳೆಸಲು ಯೋಜನೆ ರೂಪಿಸಲಾಗಿದೆ.

ಇಲ್ಲಿ ಪ್ರತಿರೋಧ ಇದೆ ಅನ್ನುವ ಮುನ್ಸೂಚನೆ ಇದ್ದ ಕಾರಣದಿಂದ 40 ಅರಣ್ಯ ಇಲಾಖೆ ಸಿಬ್ಬಂದಿ ಮತ್ತು 30 ಪೊಲೀಸ್ ಅಧಿಕಾರಿಗಳು ಇಲ್ಲಿ ಗೆ ಹೋಗಿದ್ದರು.ಹೋಗುವ ಮುನ್ನ ಶಾಸಕ ಕೊನೇರು ಕೋನಪ್ಪ ಅವರಿಗೆ ತಿಳಿಸಲಾಗಿತ್ತು.

Buy SHORTS FOR MEN starting from Rs.849

ಈಗಾಗಲೇ ಈ ಪ್ರದೇಶವನ್ನು ರಾಜಕೀಯ ಶಕ್ತಿಗಳು ಅತಿಕ್ರಿಮಿಸಿದ್ದಾರೆ. ಸ್ಥಳೀಯರು ಇಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದು, ರಾಜಕೀಯ ಪುಂಡರ ಬೆಂಗಾವಲು ಇದಕ್ಕಿದೆ ಎನ್ನಲಾಗಿದೆ. ಈ ಕಾರಣದಿಂದ ಮತ್ತೆ ಅತಿಕ್ರಮಿಸಿದ ಭೂಮಿ ಅರಣ್ಯ ಇಲಾಖೆಗೆ ಸೇರುತ್ತದೋ ಎಂದು ದಾಳಿ ನಡೆಸಲಾಗಿದೆ.

ದುರಂತ ಅಂದ್ರೆ ಅರಣ್ಯ ಉಳಿಸಲು ಪಣ ತೊಟ್ಟ ಸರ್ಕಾರದ ಶಾಸಕನ ಸಹೋದರನೇ ಈ ದಾಳಿ ನೇತೃತ್ವದ ವಹಿಸಿರುವುದು.

1590 ರೂಪಾಯಿ ಖರೀದಿಗೆ 500 ರೂಪಾಯಿ ಡಿಸ್ಕೌಂಟ್

ಇದೀಗ ಘಟನೆ ಕುರಿತಂತೆ ಕೊನೇರು ಕೃಷ್ಣ ಸೇರಿ 16 ಮಂದಿಯನ್ನು ಪೊಲೀಸರು ಬಂಧಿಸಿದ್ದು. FIR ದಾಖಲಿಸಿದ್ದಾರೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಳಿಯಾಗುತ್ತಿದ್ದರು ಪೊಲೀಸರು ಕನಿಷ್ಟ ಪಕ್ಷ ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಬಹುದಿತ್ತು ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: