2020 ಹೊತ್ತಿಗೆ ಫ್ಲಿಪ್‌ ಕಾರ್ಟ್ ಡೆಲಿವರಿಗೆ ಎಲೆಕ್ಟ್ರಿಕ್ ವಾಹನ…!

ಕೇಂದ್ರ ಸರ್ಕಾರ 2020ರ ವೇಳೆ ರಸ್ತೆಯಲ್ಲಿ ಎಲೆಕ್ಟ್ರಿಕ್ ವಾಹನ ದರ್ಬಾರ್ ಶುರುವಾಗಬೇಕು ಎಂದು ವಾಹನ ಉತ್ಪಾದಕರಿಗೆ ಸೂಚಿಸಿದೆ.

ಹೀಗಾಗಿ ಪ್ರಖ್ಯಾತ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನ ತಯಾರಿಕೆಯತ್ತ ಗಮನ ಹರಿಸಿದ್ದಾರೆ. ಜೊತೆಗೆ ಸಾಧಕ ಬಾಧಕಗಳ ಬಗ್ಗೆಯೂ ಇವರು ತಲೆ ಕೆಡಿಸಿಕೊಂಡಿದ್ದಾರೆ.

ಈ ನಡುವೆ ಪ್ಲಿಪ್ ಕಾರ್ಟ್ ಸಂಸ್ಥೆ ತನ್ನ ಉತ್ಫನ್ನಗಳ ಡೆಲಿವರಿಗಾಗಿ 2020ರ ವೇಳೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದಾಗಿ ಘೋಷಿಸಿದೆ.

Flipkart ​ ನಲ್ಲಿ Whirlpool Washing Machine ದರ ಕೇವಲ 8499

ಆರಂಭದಲ್ಲಿ ಅಂದರೆ 2019ರ ಕೊನೆಯ ವೇಳೆಗೆ ದೇಶದ ನಗರಗಳಲ್ಲಿ ಸುಮಾರು 160 ವಿದ್ಯುತ್ ಚಾಲಿತ ವಾಹನಗಳನ್ನು ನಿಯೋಜಿಸಲು ಫ್ಲಿಪ್‌ ಕಾರ್ಟ್ ನಿರ್ಧರಿಸಿದೆ.

ಫ್ಲಿಪ್‍ಕಾರ್ಟ್ ಈಗಾಗಲೇ ಹೈದರಾಬಾದ್‍ನಲ್ಲಿ 8 ವಿದ್ಯುತ್ ಚಾಲಿತ ವಾಹನ, ನವದೆಹಲಿಯಲ್ಲಿ 10 ಹಾಗೂ ಬೆಂಗಳೂರಿನಲ್ಲಿ 30 ಇ-ಬೈಕ್‍ಗಳನ್ನು ನಿಯೋಜಿಸಿದೆ.

ನೀವು ಮಹಿಳಾ ಓದುಗರಾಗಿದ್ರೆ ಮಾತ್ರ ಕ್ಲಿಕ್ ಮಾಡಿ

ಕಳೆದ 6 ತಿಂಗಳಲ್ಲಿ, ಫ್ಲಿಪ್‍ಕಾರ್ಟ್ ತನ್ನ ಡೆಲಿವರಿ ಸರಪಳಿಯಲ್ಲಿ ಎಲೆಕ್ಟ್ರಿಕ್ ವಾಹನ ಬಳಸವು ಸಲುವಾಗಿ ಹಲವು ಪ್ರಯೋಗಗಳನ್ನು ನಡೆಸಿದೆ. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಹೀಗಾಗಿ ಸಂಸ್ಥೆಯು ದೊಡ್ಡ ಮಟ್ಟದಲ್ಲಿ ವಿದ್ಯುತ್‍ಚಾಲಿತ ವಾಹನಗಳನ್ನು ಬಳಸಲು ತೀರ್ಮಾನಿಸಿದೆ.

ಈಗಿರುವ ವಾಹನಗಳಿಗೆ ಬಂಕ್ ಗಳಲ್ಲಿ ಇಂಧನ ತುಂಬಿಸಬಹುದು. ವಿದ್ಯುತ್‍ಚಾಲಿತ ವಾಹನಗಳು ಜಾರ್ಜ್ ಮುಗಿದು ರಸ್ತೆಯಲ್ಲೇ ನಿಂತ್ರೆ, ಅದಕ್ಕೂ ಪರಿಹಾರ ಕಂಡುಕೊಂಡಿರುವ ಸಂಸ್ಥೆ ತನ್ನ ಹಬ್‍ಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸಿದ್ಧಪಡಿಸುತ್ತಿದೆ.

ಇದು ಗಂಡಸರಿಗಾಗಿ ಮಾತ್ರ…! ಕಾಸಿದ್ರೆ ಕ್ಲಿಕ್ ಮಾಡಿ

ಈ ಕಾರ್ಯದಿಂದಾಗಿ ಇಂಗಾಲದ ಹೊರಸೂಸುವಿಕೆ ಪ್ರಮಾಣವು ಸುಮಾರು ಶೇ.50ರಷ್ಟು ತಗ್ಗಲಿವೆ ಅನ್ನುವ ಆಶಯ ಸಂಸ್ಥೆಯದ್ದು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆಯ ಮುಖ್ಯಸ್ಥರೊಬ್ಬರು, ಮುಂಬರುವ ವರ್ಷಗಳಲ್ಲಿ ಡೆಲಿವರಿಯ ಕೊನೆಯ ಲಿಂಕ್ ತನಕವೂ ವಿದ್ಯುತ್‍ಚಾಲಿತ ವಾಹನಗಳನ್ನು ಬಳಸುವುದು ಗುರಿಯಾಗಿದೆ. ಈ ಸಲುವಾಗಿ ನಮ್ಮ ತಂಡವು ಸ್ಥಳೀಯ ಇಕೋಸಿಸ್ಟಂ ಪಾಲುದಾರರೊಂದಿಗೆ ಕೈಜೋಡಿಸಿದ್ದು, ಬೆಳೆಯುತ್ತಿರುವ ಇ-ಕಾಮರ್ಸ್ ಕ್ಷೇತ್ರಕ್ಕೆ ಸೂಕ್ತವಾಗಿ ಹೊಂದುವಂಥ ವಿದ್ಯುತ್‍ಚಾಲಿತ ವಾಹನಗಳ ವಿನ್ಯಾಸವನ್ನು ಅಭಿವೃದ್ಧಿಪಡಿಸುವಲ್ಲಿ ನೆರವಾಗುತ್ತಿದೆ.
ಈ ದಿಕ್ಕಿನಲ್ಲಿ ನಾವು ಇಟ್ಟಿರುವ ಹೆಜ್ಜೆ ಸಣ್ಣದು, ಆದರೆ ಅರ್ಥಪೂರ್ಣವಾಗಿದ್ದು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಪ್ರೇರಣೆಯಾಗಲಿದೆ ಅಂದಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: