ಪಿವಿಎನ್…ಮನಮೋಹನ್ ಸಿಂಗ್ ಅವರನ್ನೇ ಮರೆತ್ರಲ್ಲ….ಕಾಂಗ್ರೆಸ್ ಗೆ ತಿವಿದ ಮೋದಿ

ಈ ಹಿಂದಿನ ಸರ್ಕಾರಗಳು ಯಾವ ಕೆಲಸವನ್ನೂ ಮಾಡಲಿಲ್ಲ ಅನ್ನುವುದನ್ನು ನಾವು ಒಪ್ಪುವುದಿಲ್ಲ, ಎಲ್ಲಾ ಸರ್ಕಾರದ ಅವಧಿಯಲ್ಲೂ ಕೆಲಸಗಳಾಗಿವೆ. ಹೀಗಾಗಿ ಇನ್ನು ಮುಂದೆ ಪದೇ ಪದೇ ಕಾಂಗ್ರೆಸ್‌ ಅವಧಿಯ ಸಾಧನೆಗಳನ್ನು ಸಂಸತ್‌ನಲ್ಲಿ ಹೇಳಬೇಡಿ ಎಂದು ಕಾಂಗ್ರೆಸ್ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಇಂದು ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ, ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಯುಪಿಎ ಆಡಳಿತದ ಹತ್ತು ವರ್ಷದಲ್ಲಿ ಒಮ್ಮೆಯೂ ಹೇಳಿಲ್ಲ, ಪಿ.ನರಸಿಂಹರಾವ್ ಅವರ ಹೆಸರು ಹೇಳಿಲ್ಲ, ಕನಿಷ್ಟ ಮನಮೋಹನ್ ಸಿಂಗ್ ಅವರ ಹೆಸರನ್ನೂ ನೀವು ಹೇಳಿಲ್ಲ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ನಿನ್ನೆ ಕಾಂಗ್ರೆಸ್‌ನ ಸಂಸದರು ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ಇಂದಿರಾ ಗಾಂಧಿ ಅವರ ಅವಧಿಯ ಸಾಧನೆಗಳನ್ನು ಪ್ರಸ್ತಾಪಿಸಿದ್ದರು. ಜವಾಹಾರ್ ಲಾಲ್, ಇಂದಿರಾ ಗಾಂಧಿ ಅವರುಗಳು ದೇಶಕ್ಕಾಗಿ ಜೀವನ ಸವೆಸಿದ್ದಾರೆ ಆದರೆ ಅವರ ಹೆಸರು ಸದನದಲ್ಲಿ ಕೇಳುವುದಿಲ್ಲ ಎಂದು ಟೀಕಿಸಿದ್ದರು. ಇದಕ್ಕೆ ಪ್ರಧಾನಿ ಈ ರೀತಿ ಟಾಂಗ್ ಕೊಟ್ಟಿದ್ದಾರೆ.

2,499 ರೂಪಾಯಿ ಮೊತ್ತದ ಮಿಕ್ಸಿಗೆ 1,139

ಕಾಂಗ್ರೆಸ್‌ ಪಕ್ಷದ ನೆಹರೂ ಕುಟುಂಬದ ಹೊರಗಿನವರಿಗೆ ಭಾರತ ರತ್ನ ಸಿಗಲೇ ಇಲ್ಲ, ಆದರೆ ನಾವು ಹಾಗೆ ಮಾಡಲಿಲ್ಲ, ಪ್ರಣವ್ ಮುಖರ್ಜಿ ಅವರು ಜೀವನಪರ್ಯಂತ ಒಂದು ಪಕ್ಷವಾಗಿಯೇ ಇದ್ದರು, ಆದರೆ ನಾವು ಅವರ ಸೇವೆಯನ್ನು ಮಾತ್ರವೇ ಪರಿಗಣಿಸಿ ನಾವು ಅವರಿಗೆ ಭಾರತ ರತ್ನ ನೀಡಿದೆವು, ಇದು ನಮ್ಮ ಯೋಚನೆಯ ರೀತಿ ಎಂದ ಮೋದಿ, ನೆಹರೂ ಅವರನ್ನು ಹೊಗಳಿದರು. 1951 ರಲ್ಲಿ ನೆಹರು ಅವರು ಕಂಡಿದ್ದ ಕನಸನ್ನು ನಾವು ನನಸು ಮಾಡಬೇಕಿದೆ. ನೆಹರು ಅವರು ಬರೆದ ‘ಎಲ್ಲರೂ ಒಟ್ಟಾಗಿ ಭಾರತದ ನಿರ್ಮಾಣ ಮಾಡೋಣ’ ಎಂಬ ವಾಕ್ಯವನ್ನು ಓದಿ ಬನ್ನಿ ಎಲ್ಲರೂ ಸೇರಿ ದೇಶವನ್ನು ಬದಲಾಯಿಸೋಣ ಎಂದು ಕರೆ ಕೊಟ್ಟರು.

ಇದೇ ವೇಳೆ ಹಗರಣಗಳ ಆರೋಪ ಎದುರಿಸುತ್ತಿರುವವರನ್ನು ಇನ್ನೂ ಯಾಕೆ ಜೈಲಿಗೆ ಕಳಿಸಿಲ್ಲ ಎಂದು ಕೆಲವರು ನಮ್ಮನ್ನು ಟೀಕಿಸುತ್ತಿದ್ದಾರೆ, ಇದು ಯಾರನ್ನು ಬೇಕಾದರೂ ಏಕಾ ಏಕಿ ಜೈಲಿಗೆ ತಳ್ಳಲು ತುರ್ತು ಪರಿಸ್ಥಿತಿಯಲ್ಲ ಎಂದು ಮೋದಿ ಕಾಂಗ್ರೆಸ್ ನಾಯಕರ ವಿರುದ್ಧ ಸಂಸತ್ ನಲ್ಲಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದರು.

ನಾವು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತೇವೆ, ಯಾರನ್ನು ಬೇಕಾದರೂ ಜೈಲಿಗೆ ತಳ್ಳುವುದಕ್ಕೆ ಇದು ತುರ್ತುಪರಿಸ್ಥಿತಿಯಲ್ಲ ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿದೆ, ಜಾಮೀನು ಪಡೆದವರು ಖುಷಿಯಾಗಿರಲಿ.
ಇದೇ ವೇಳೆ ತಮ್ಮ ಸರ್ಕಾರದ ‘ನವ ಭಾರತ’ ದೃಷ್ಟಿಕೋನವನ್ನು ಎತ್ತಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಜನ ಸುರಕ್ಷಿತ, ಸುಭದ್ರ ಮತ್ತು ಅಂತರ್ಗತ ಭಾರತವನ್ನು ಬಯಸಿದ್ದಾರೆ.

ಈ ನಡುವೆ ನೀರಾವರಿ ಕುರಿತಂತೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿರುವ ಪ್ರಧಾನಿ ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ಅವಕಾಶ ಸಿಗಲಿದೆ ಅನ್ನುವ ಮುನ್ಸೂಚನೆ ನೀಡಿದರು.

ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ನಾವು ಮುಂದಾಗಿದ್ದೇವೆ. ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕಳೆದ ಏಳು ದಶಕಗಳಲ್ಲಿ ಆಗಿರುವ ಸಮಸ್ಯೆಗಳನ್ನು ಕೇವಲ ಐದು ವರ್ಷದಲ್ಲಿ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ. ಆದರೆ ಈ ನಿಟ್ಟಿನಲ್ಲಿ ನಮ್ಮ ದಿಟ್ಟ ಹೆಜ್ಜೆ ಸರಿಯಾಗಿ ಇಟ್ಟಿದ್ದೇವೆ. ಇದೇ ಕಾರಣಕ್ಕಾಗಿ ಜನರು ನಮಗೆ ಸಾಥ್‌ ನೀಡಿದ್ದಾರೆ. ಅತಿ ಹೆಚ್ಚು ಬೆಂಬಲ ನೀಡಿದ್ದಾರೆ ಎಂದರು.

Get upto 50% off on Fitness and Sports Accessories 

2014ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದಾಗ ನೀಡಿದ ವಾಗ್ದಾನದಂತೆ ಬಡವರ ಪರವಾಗಿಯೇ ನಾನು ಹಾಗೂ ನಮ್ಮ ಸರಕಾರ ಕೆಲಸ ಮಾಡಿದ್ದೇವೆ. ಯಂಗ್ ಇಂಡಿಯಾ ನಿರ್ಮಾಣವೇ ನಮ್ಮ ಗುರಿಯಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರ ಕೈ ಜೋಡಿಸಿದರೆ ಮಾತ್ರ ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಸಾಧ್ಯ. ಇದನ್ನು ಹೊಸದಿಲ್ಲಿಯ ಕೆಂಪುಕೋಟೆಯ ಮೇಲೆ ಎರಡು ಬಾರಿ, ಸದನದಲ್ಲಿಯೇ ಹಲವು ಬಾರಿ ತಿಳಿಸಿದ್ದೇನೆ.

ಜೂನ್‌ 25ರ ಮಧ್ಯರಾತ್ರಿ ನಮ್ಮ ಸಂವಿಧಾನದ ಆತ್ಮವನ್ನು ಹಿಡಿದಿಟ್ಟುಕೊಳ್ಳಲಾಗಿತ್ತು. ಮಾಧ್ಯಮದ ಕತ್ತು ಹಿಸುಕಲಾಗಿತ್ತು. ಇಡೀ ದೇಶವೇ ಜೈಲು ಎಂಬಂತಾಗಿತ್ತು. ಅದೊಂದು ಕರಾಳ ಅಧ್ಯಾಯ. ಇದಕ್ಕೆ ಕಾರಣರಾದವರ ಹೆಸರು ಇಂದಿಗೂ ಅಳಿಸಲು ಸಾಧ್ಯವಾಗಲಿಲ್ಲ ಎಂದರು.

ತುರ್ತು ಪರಿಸ್ಥಿತಿ ನಂತರ ಜನರು ಜಾತಿ, ಧರ್ಮವನ್ನು ಮೀರಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಲು ಮತ ಚಲಾಯಿಸಿದರು ಎಂದು ಮೋದಿ ಸ್ಮರಿಸಿದರು.

ಕಾಂಗ್ರೆಸ್‌ ಕೇವಲ ಗಾಂಧಿ ಕುಟುಂಬದ ಗುಣಗಾನ ಮಾಡಿತು. ಇತರೆ ಪ್ರಬುದ್ಧ ನಾಯಕರನ್ನು ಮರೆಯಿತು. ಇದು ನಿಜಕ್ಕೂ ದುರದೃಷ್ಟಕರ ಎಂದು ಮೋದಿ ತಿಳಿಸಿದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: