ಅಕ್ರಮ ಗೋ ಸಾಗಾಟ ತಡೆಗೆ ಮುಂದಾದ ಮುಸ್ಲಿಂ ಲೀಗ್…!

ಪರಶುರಾಮ ಸೃಷ್ಟಿಯ ತುಳುನಾಡು ಎಂದೇ ಕರೆಯಲ್ಪಟ್ಟಿರುವ ಕರಾವಳಿ ಶಾಂತಿ ಸೌಹಾರ್ದತೆಗೆ ಪ್ರಸಿದ್ಧವಾದ ನೆಲವಾಗಿತ್ತು. ಆದರೆ ಕೆಲ ವರ್ಷಗಳ ಹಿಂದೆ ಕರಾವಳಿ ಅಂದರೆ ಅದು ಕೋಮು ದಳ್ಳುರಿಯ ನೆಲ ಅನ್ನುವ ಪಟ್ಟ ಕಟ್ಟಿಕೊಂಡಿತು.

ನಿಮಗೆ ಈಜುವ ಅಭ್ಯಾಸವಿದ್ರೆ..ಇಲ್ಲಿ ಕ್ಲಿಕ್ ಮಾಡಿ

ಕ್ಷುಲಕ ಕಾರಣಗಳಿಗೆ ಪ್ರಾರಂಭವಾದ ಜಗಳ ಎಲ್ಲಿಗೋ ತಲುಪಿತು. ಹಾಗೇ ನೋಡಿದ್ರೆ ಒಂದಿಷ್ಟು ವರ್ಷಗಳಲ್ಲಿ ಮತ್ತೆ ಶಾಂತಿ ನೆಲೆಸಿತ್ತು. ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಧರ್ಮದ ಮುಖಂಡರ ಶ್ರಮದಿಂದ ಕರಾವಳಿ ಶಾಂತವಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ದನ ಕಳ್ಳರ ಕಾಟ ಶುರುವಾಗಿದೆ. ಹಟ್ಟಿಗೆ ನುಗ್ಗುವ ಕಳ್ಳರು ಬಡವರ ಹೊಟ್ಟೆಗೆ ಹೊಡೆಯಲಾರಂಭಿಸಿದ್ದಾರೆ. ಒಂದು ಹಸುವನ್ನು ನಂಬಿ ಜೀವನ ನಡೆಸುವ ಮಂದಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವಂತಾಗಿದೆ.

ನೀವು ಹೆಣ್ಣುಮಕ್ಕಳ ಪೋಷಕರೇ…. ಕ್ಲಿಕ್ ಮಾಡಿ

ಮಾತ್ರವಲ್ಲದೆ ಅಕ್ರಮ ಗೋ ಕಳ್ಳ ಸಾಗಾಣಿಕೆ ಕಾರಣದಿಂದ ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆಗೂ ಧಕ್ಕೆ ಬರಲಾರಂಭಿಸಿದೆ.ಅದಕ್ಕೆ ಸಾಕ್ಷಿ ಅನ್ನುವಂತೆ ಇತ್ತೀಚಿನ ದಿನಗಳಲ್ಲಿ ಹಲವು ಘಟನೆಗಳು ನಡೆದಿದೆ.

ಈ ನಡುವೆ ರಾಜ್ಯ ಮುಸ್ಲಿಂ ಯೂತ್ ಲೀಗ್ ವತಿಯಿಂದ ‘ಅಕ್ರಮ ಗೋ ಸಾಗಾಟ ಸಂರಕ್ಷಣಾ ಸಮಿತಿ’ ರಚಿಸಲು ನಿರ್ಧರಿಸಲಾಗಿದೆ. ಈವರೆಗೆ ಹಿಂದೂ ಸಂಘಟನೆಗಳು ಮಾತ್ರ ಗೋ ಸಂರಕ್ಷಣೆಯ ಕೆಲಸ ಮಾಡುತ್ತಿತ್ತು. ಆದರೆ ಇದೀಗ ಮುಸ್ಲಿಂ ಸಮುದಾಯದ ಸಂಘಟನೆಯೊಂದು ಗೋ ಸಂರಕ್ಷಣೆಗೆ ಮುಂದಾಗಿದೆ.

Get upto 60% off on Mens Sports Shoes

ಸಂಘಟನೆ ಮುಖ್ಯಸ್ಥ ಸಿದ್ದಿಕ್ ತಲಪಾಡಿ ಇಂತಹುದೊಂದು ಕೆಲಸಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ಸಮಿತಿ ಕಟ್ಟುವುದಾಗಿ ಹೇಳಿದ್ದಾರೆ.

ನಿಮ್ಮ ಮನೆಯಲ್ಲಿ ಈ ವಸ್ತುಗಳಿವೆಯೇ…?

ಕರಾವಳಿಯಲ್ಲಿ ಗೋವುಗಳ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕೋದು ಸಮಿತಿ ಮೊದಲ ಆದ್ಯತೆಯಾಗಿದ್ದು, ಧಾರ್ಮಿಕ ಗುರುಗಳ ಮೂಲಕ ಮಸೀದಿ, ಮದರಸಾಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಿದೆಯಂತೆ.

ಒಟ್ಟಿನಲ್ಲಿ ಇದೊಂದು ಉತ್ತಮ ಹೆಜ್ಜೆ ಅನ್ನುವುದರಲ್ಲಿ ಸಂಶಯವಿಲ್ಲ. ಆದರೆ ರಾಜ್ಯದಲ್ಲಿ ಅನಧಿಕೃತ ಕಸಾಯಿಖಾನೆಗಳಿದೆ ಅನ್ನುವ ಆರೋಪವಿದೆ. ಇಂತಹ ಕಸಾಯಿಖಾನೆಗಳಿಗೆ ಬೀಗ ಬಿದ್ದರೆ ಅಕ್ರಮ ಗೋ ಸಾಗಾಣಿಕೆ ಕೂಡಾ ನಿಲ್ಲುವುದರಲ್ಲಿ ಸಂಶಯವಿಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: