ಮಾನ್ಯ ಕೇಂದ್ರ ಸಚಿವರೇ ನೀವು ಕೊಟ್ಟ ಹೇಳಿಕೆಗೂ…ಸ್ಪಷ್ಟನೆಗೂ ಸಂಬಂಧವೇ ಇಲ್ವಲ್ಲ….!

ನನ್ನ ಹೆಸರಿನೊಂದಿಗೆ ಗೌಡ ಎಂದು ಸೇರಿಸಿಕೊಂಡಿದ್ದಕ್ಕೆ ನಾನು ರಾಜ್ಯದ ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವನಾಗಿದ್ದೇನೆ. ಅದನ್ನು ಹೇಳಲು ನನಗೆ ಹಿಂಜರಿಕೆ, ನಾಚಿಕೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದರು.

RBL Bank ನಿಂದ ಬೆಸ್ಟ್ ಆಫರ್ ನೊಂದಿಗೆ ಕಾರ್ಡ್ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ

ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ ಹಾಗೂ ಕೃಷಿಕ ಸಾಹಿತ್ಯಪರಿಷತ್ತು ಬೆಂಗಳೂರಿನ ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿ’ ಹಾಗೂ ‘ಕೆಂಪೇಗೌಡರ ಯಲಹಂಕ ಸಂಸ್ಥಾನದ ಇತಿಹಾಸ ಮತ್ತು ಐತಿಹ್ಯದ ಬಗ್ಗೆ ವಿಚಾರ ಸಂಕಿರಣ’ ಸಮಾರಂಭ ಉದ್ಘಾಟಿಸಿ ಮಾತನಾಡಿದ್ದ ಅವರು ‘ಗೌಡ’ಎಂಬ ಹೆಸರು ಇದ್ದಿದ್ದಕ್ಕೆ ನನಗೆ ಮುಖ್ಯಮಂತ್ರಿ ಪದವಿ ಹಾಗೂ ಕೇಂದ್ರ ಮಂತ್ರಿ ಸ್ಥಾನ ಸಿಕ್ಕಿತ್ತು ಎಂದು ಹೇಳಿದ್ದರು.

ನಾನೊಬ್ಬ ಗೌಡ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಡಿ.ವಿ.ಸದಾನಂದ ಎಂದಿತ್ತು. ಆಗ ಸೋತಿದ್ದೆ. ಬಳಿಕ ಹೆಸರಿನ ಜತೆಗೆ ‘ಗೌಡ’ ಎಂದು ಸೇರಿಕೊಳ್ಳಲು ಕೆಲವರು ಸಲಹೆ ನೀಡಿದಾಗ ಡಿ.ವಿ.ಸದಾನಂದ ಗೌಡ ಎಂದು ಬದಲಾಯಿತು. ಆ ನಂತರದ ಚುನಾವಣೆಯಲ್ಲಿ ಗೆಲವು ಸಾಧಿಸಿದೆ. ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಸಮುದಾಯದ ಹೆಸರು ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಒಂದು ನಿಟ್ಟಿನಲ್ಲಿ ಈ ಹೇಳಿಕೆ ನಿಜವಾಗಿರಬಹುದು. ಆದರೆ ಸದಾನಂದಗೌಡರು ಪ್ರತೀ ಸಲ ಗೆದ್ದದ್ದು ಬಿಜೆಪಿ ಅಲೆಯಲ್ಲಿ ಹೊರತು ಅವರ ಸಾಧನೆಗಳಿದ್ದ ಅಲ್ಲ ಅನ್ನುವುದು ಸ್ಪಷ್ಟ. ಹಾಗೇ ಅವರು ಗೆಲ್ಲಬಹುದಾಗಿದ್ದರೆ ಕರಾವಳಿಯನ್ನು ತೊರೆಯುವ ಅಗತ್ಯವೇ ಬರುತ್ತಿರಲಿಲ್ಲ.

ಹೀಗಾಗಿ ಸದಾನಂದಗೌಡರ ಹೇಳಿಕೆಗೆ ತೀವ್ರ ವಿರೋಧ ದಾಖಲಾಯ್ತು. ಈ ಬಾರಿಯಂತು ಸದಾನಂದಗೌಡರು ಬೆಂಗಳೂರು ಉತ್ತರದಲ್ಲಿ ಸೋಲುವುದು ಖಚಿತ ಎಂದಾಗಿತ್ತು. ಕಾಂಗ್ರೆಸ್ ನಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕೃಷ್ಣ ಭೈರೇಗೌಡ ಗೆಲುವು ಗ್ಯಾರಂಟಿ ಎಂದಾಗಿತ್ತು. ಆದರೆ ಬೀಸಿದ ಮೋದಿ ಅಲೆಯಿಂದಾಗಿ ಸದಾನಂದಗೌಡರು ಗೆಲುವು ಖಂಡಿದ್ದರು.

https://clnk.in/iZo6

ಈ ನಡುವೆ ಸದಾನಂದಗೌಡರು ಕೊಟ್ಟ ಜಾತಿ ಹೇಳಿಕೆ ಬಿಜೆಪಿ ಕಾರ್ಯಕರ್ತರಲ್ಲೇ ತೀವ್ರ ಅಸಮಾಧಾನಕ್ಕೆ ಕಾರಣವಾಯ್ತು. ಕಮಲ ಪಾಳಯದೊಂದಿಗೆ ಗುರುತಿಸಿಕೊಂಡಿರುವ ಗೌಡ ಸಮುದಾಯದ ಕಾರ್ಯಕರ್ತರೇ ಸದಾನಂದಗೌಡರ ವಿರುದ್ಧ ತಿರುಗಿ ಬಿದ್ದರು.

https://clnk.in/iZpb

ಯಾವಾಗ ತಾನು ಕೊಟ್ಟ ಹೇಳಿಕೆ ಮೋದಿ, ಅಮಿತ್ ಶಾ ಕಿವಿಗೆ ತಲುಪುವುದು ಖಚಿತವಾಯ್ತೋ, ಕಳೆದ ಬಾರಿಯಂತೆ ಈ ಬಾರಿಯೂ ಸಿಕ್ಕ ಒಳ್ಳೆಯ ಖಾತೆಯೊಂದು ಕೈ ತಪ್ಪುವುದು ಖಚಿತ ಅನ್ನುವುದು ಗೊತ್ತಾಗುತ್ತಿದ್ದಂತೆ ಟ್ವೀಟ್ ಮಾಡಿ ತಾವು ಕೊಟ್ಟ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಆದರೆ ಅವರು ಕೊಟ್ಟಿರುವ ಸ್ಪಷ್ಟನೆಗೂ, ಈ ಹಿಂದೆ ಕೊಟ್ಟ ಜಾತಿ ಹೇಳಿಕೆಗೂ ಸಂಬಂಧವೇ ಇಲ್ಲ. ತಾವು ಕೊಟ್ಟ ಹೇಳಿಕೆಗೆ ಬದ್ಧರಾಗಿರಬೇಕಾಗಿದ್ದ ಸದಾನಂದಗೌಡರು ಕನಿಷ್ಟ ಪಕ್ಷ ವಿಷಾಧವನ್ನಾದರೂ ವ್ಯಕ್ತಪಡಿಸಬೇಕಿತ್ತು.

‘ಗೌಡ’ ಅನ್ನುವ ಪದದಿಂದ ಗೆಲುವು ಕಾಣಬೇಕಾದರೆ, ಅನೇಕ ಕಾಂಗ್ರೆಸ್ ನಾಯಕರು ಕೂಡಾ ಗೆಲ್ಲಬೇಕಿತ್ತು ತಾನೇ. ಹೋಗ್ಲಿ ಸದಾನಂದಗೌಡರ ಗೆಲುವಿಗೆ ಅದೊಂದು ಪದ ಕಾರಣವಾಗಿದ್ದರೆ ಸದಾನಂದಗೌಡರ ಪರವಾಗಿ ಬೇರೆ ಜಾತಿಯ ಕಾರ್ಯಕರ್ತರು ದುಡಿಯುವ ಅಗತ್ಯವಿಲ್ಲ ತಾನೇ.

PayTM Mall ಆಫರ್ ಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಹೀಗೆಲ್ಲಾ ಎಡವಟ್ಟು ಹೇಳಿಕೆ ಕೊಡುವ ಸದಾನಂದಗೌಡರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಪಕ್ಷ ಸಂಘಟನೆ ಕಾರ್ಯಕ್ಕೆ ಮೋದಿ ಹಾಗೂ ಅಮಿತ್ ಶಾ ಬಳಸಿಕೊಳ್ಳುವುದು ಒಳಿತು.

ಇಲ್ಲವಾದರೆ ಬೀಸುತ್ತಿರುವ ಮೋದಿ ಅಲೆಗೆ ಇವರೇ ತಡೆಗೋಡೆಯಾದರೆ ಅಚ್ಚರಿ ಇಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: