ಚರ್ಮದ ಚಪ್ಪಲಿ ನೀರಿಗಿಳಿದರೆ ಹಾಳಾಗಬಹುದು… ಕರ್ನಾಟಕದ ಕಾಂಗ್ರೆಸ್ ಶಾಸಕರಿಗೆ ಚಿಂತೆ

ನಾವೇ ಆಯ್ಕೆ ಮಾಡಿದ ಜನಪ್ರತಿನಿಧಿಗಳು ಅದು ಎಲ್ಲಿಯ ತನಕ VVIP ಸಂಪ್ರದಾಯದಿಂದ ಹೊರಬರುವುದಿಲ್ಲವೋ, ಅಲ್ಲಿಯ ತನಕ ಮತದಾರರ ಉದ್ಧಾರ ಕನಸಿನ ಮಾತು.

Buy Smartphone Infinix Smart 2 (2GB+16GB) Only Rs.4499

ನಾವೇ ಕಟ್ಟಿದ ತೆರಿಗೆ ದುಡ್ಡಿನಲ್ಲಿ ಜನಪ್ರತಿನಿಧಿಗಳ ಬಳಿ ದುಡಿದು ಸಂಬಳ ಪಡೆಯುವ ಸರ್ಕಾರಿ ಸಿಬ್ಬಂದಿ ( ಪೊಲೀಸ್ ಗನ್ ಮ್ಯಾನ್ ಸೇರಿದಂತೆ) ಯನ್ನು ಜೀತದಾಳುಗಳಂತೆ ನಡೆಸಿಕೊಳ್ಳುವುದನ್ನು ನಿಲ್ಲಿಸದ ಹೊರತು ಸಮಾಜ ಅಭಿವೃದ್ಧಿ ಖಂಡಿತಾ ಸಾಧ್ಯವಿಲ್ಲ.

Buy Bestselling Refrigerators starting from Rs.10990

ಈಗಾಗಲೇ ಜನಪ್ರತಿನಿಧಿಗಳ ಝೀರೋ ಟ್ರಾಫಿಕ್ ಅನ್ನುವ ವ್ಯವಸ್ಥೆಯಿಂದ ಜನ ರೋಸಿ ಹೋಗಿದ್ದಾರೆ.
ಈ ನಡುವೆ ಗನ್ ಮ್ಯಾನ್ ಕೈಯಲ್ಲಿ ಚಪ್ಪಲಿ ಹೊರಿಸುವ ಜನಪ್ರತಿನಿಧಿಗಳ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಸಿಬ್ಬಂದಿ ಕೈಯಲ್ಲಿ ಚಪ್ಪಲಿ ಹಿಡಿಸಿದರೆ ಶಾಸಕ, ಸಂಸದ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಅನ್ನುವ ಕಾನೂನು ತಾರದ ಹೊರತು ಇಂತಹ ದುರ್ವತನೆಗಳಿಗೆ ಖಂಡಿತಾ ಬ್ರೇಕ್ ಬೀಳಲು ಸಾಧ್ಯವಿಲ್ಲ.

ಮಕ್ಕಳಿಗಾಗಿ ಬಂದಿದೆ ವಿಶೇಷ ಪಾದರಕ್ಷೆಗಳು

ಈಗ ಇದೇ ವಿಷಯಕ್ಕೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಚಪ್ಪಲಿ ವಿಷಯಕ್ಕೆ ಸುದ್ದಿಯಾಗಿದ್ದಾರೆ.
ನಿನ್ನೆ ಹುಬ್ಬಳ್ಳಿಯಲ್ಲಿ ಮಳೆಯ ಸ್ಥಿತಿಗತಿಯನ್ನು ಅರಿಯಲು ಸಂಚಾರ ನಡೆಸುತ್ತಿದ್ದ ವೇಳೆ ನೀರು ತುಂಬಿದ ರಸ್ತೆಯಲ್ಲಿ ತಮ್ಮ ಹೊಸ ಚರ್ಮದ ಶೂ ಮೇಲೆ ಕಾಳಜಿ ವಹಿಸಿದ ಶಾಸಕ ಪ್ರಸಾದ್ ಅಬ್ಬಯ್ಯ ಇಳಿಯಲು ನಿರಾಕರಿಸಿದರು.

ಆಗ ಅವರ ಬೆಂಬಲಿಗರು ಬೇರೊಂದು ಚಪ್ಪಲಿಯನ್ನು ತಂದು ಕೊಟ್ಟಾಗ ಅದನ್ನು ಧರಿಸಿಕೊಂಡು ನೀರು ತುಂಬಿದ ರಸ್ತೆಯಲ್ಲಿಯೇ ಇಳಿದು ಪ್ರದೇಶದ ಪರಿಸ್ಥಿತಿ ಅವಲೋಕಿಸಿದರು.

ಈ ಘಟನೆ ನಿನ್ನೆ ಹುಬ್ಬಳ್ಳಿಯ ಮಂಟೂರು ರಸ್ತೆಯ ಅರಳಿಕಟ್ಟೆ ಓಣಿಯಲ್ಲಿ ನಡೆದಿದ್ದು, ಸುಮಾರು 3 ಗಂಟೆಗಳ ಕಾಲ ಮಳೆ ಸುರಿದು ನಗರದಾದ್ಯಂತ ರಸ್ತೆ ತುಂಬಾ ನೀರು ತುಂಬಿತ್ತು. ಮಳೆಗೆ ಎಲ್ಲಿಲ್ಲಿ ಏನೇನು ಸಮಸ್ಯೆ ಆಗಿದೆ ಎಂದು ನೋಡಲು ಸ್ಥಳೀಯ ಕಾರ್ಪೊರೇಟರ್ ಮತ್ತು ಇತರ ನಾಯಕರೊಂದಿಗೆ ಭೇಟಿ ಮಾಡಲು ನಿರ್ಧರಿಸಿದರು.

Red Tape Shoe ಗಳ ಮೇಲೆ 70% ರಿಯಾಯತಿ

ರಸ್ತೆಗೆ ಬಂದಾಗ ಅಬ್ಬಯ್ಯ ಅವರಿಗೆ ನೀರು ತುಂಬಿದ ರಸ್ತೆಯಲ್ಲಿ ಚರ್ಮದ ಚಪ್ಪಲಿ ಹಾಕಿಕೊಂಡು ಇಳಿಯಲು ಸಾಧ್ಯವಿಲ್ಲ ಎಂದು ಗೊತ್ತಾಯಿತು. ಆಗ ಅವರ ಗನ್ ಮ್ಯಾನ್ ಬೇರೆ ಚಪ್ಪಲಿಯನ್ನು ಶಾಸಕರು ಕುಳಿತಿದ್ದ ಕಾರಿನ ಬಳಿ ತಂದು ಕೊಟ್ಟರು. ಅದನ್ನು ಹಾಕಿಕೊಂಡು ರಸ್ತೆಗಿಳಿದು ಪರಿಸ್ಥಿತಿ ಅವಲೋಕಿಸಿದರು.

Buy Mens T-shirts starting from Rs.299

ಈ ಬಗ್ಗೆ ಶಾಸಕ ಅಬ್ಬಯ್ಯ ಹೇಳುವುದೇ ಬೇರೆ, ನಾನು ಯಾರಿಗೂ ನನ್ನ ಶೂ ತೆಗೆದು ಚಪ್ಪಲಿ ತನ್ನಿ ಎಂದು ಕೇಳಿರಲಿಲ್ಲ. ನನ್ನ ಚರ್ಮದ ಚಪ್ಪಲಿ ನೀರಿಗಿಳಿದರೆ ಹಾಳಾಗಬಹುದು ಎಂದಾಗ ನನ್ನ ಜೊತೆ ಇದ್ದವರು ಬೇರೆ ಚಪ್ಪಲಿ ತಂದುಕೊಟ್ಟರು. ನನ್ನ ಗನ್ ಮ್ಯಾನ್ ಗೆ ನನ್ನ ಶೂ ಮುಟ್ಟಲು ನಾನು ಹೇಳಿರಲಿಲ್ಲ. ಅವರೇ ಸಂತೋಷದಿಂದ ಆ ಕೆಲಸ ಮಾಡಿದ್ದು. ನನಗೆ ನನ್ನ ಶೂಗಿಂತ ಅಲ್ಲಿನ ಜನರ ಪರಿಸ್ಥಿತಿ, ಅಲ್ಲಿನ ಸಮಸ್ಯೆ ಮುಖ್ಯವಾಗಿತ್ತು ಎಂದಿದ್ದಾರೆ.

ಶಾಸಕರೊಬ್ಬರಿಗೆ ಒಂದು ಜೊತೆ ಚರ್ಮದ ಚಪ್ಪಲಿ ಖರೀದಿಸೋದು ಅದ್ಯಾವ ಲೆಕ್ಕವೋ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: