ಗೌರಮ್ಮ ಏನಿದು ಕಥೆ… ರಮ್ಯ ಕಡೆಯಿಂದ ರಾಹುಲ್ ಗಾಂಧಿಗೆ 8 ಕೋಟಿ ರೂಪಾಯಿ ದೋಖಾ

ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಎಲ್ಲಿ ಎಡವುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರಿಗೆ ಕೇಳಿ ನೋಡಿ, ಎಲ್ಲಾ ಹಿತ್ತಾಳೆ ಕಿವಿ ಪ್ರಭಾವ ಸರ್ ಅಂತಾರೆ.

ತಳಮಟ್ಟದಲ್ಲಿ ಕಾರ್ಯಕರ್ತರನ್ನು ಕಟ್ಟುವ ಮನಸ್ಸು ಅದ್ಯಾವ ನಾಯಕರಿಗೆ ಇದೆ. ಎಲ್ಲಾ ಬಣ್ಣ ಬಣ್ಣದ ಮಾತುಗಳೇ ಮುಖ್ಯ. ಇಂದ್ರ ಚಂದ್ರರನ್ನು ಲ್ಯಾಪ್ ಟಾಪ್ ನಲ್ಲಿ ತೋರಿಸಿದ್ರೆ ಸಾಕು ಎಲ್ಲಾ ಕೆಲಸ ಆಗುತ್ತದೆ ಅನ್ನುವುದು ಕಾಂಗ್ರೆಸ್ ನಾಯಕರ ಮಾತು.

ಅದು ಹೌದು ಕೂಡಾ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಳ್ಳಿಯ ಮೂಲೆ ಮೂಲೆಯಲ್ಲೂ ಕಾರ್ಯಕರ್ತರಿದ್ದರು. ಕಾರ್ಯಕರ್ತರ ನೋವು ಕೇಳುವ, ಸಂತೋಷದಲ್ಲಿ ಪಾಲ್ಗೊಳ್ಳುವ ನಾಯಕರಿದ್ದರು. ಈಗ ನಾಯಕರ ಮನೆ ಬಾಗಿಲಿಗೆ ಕಾರ್ಯಕರ್ತ ಅಲೆಯುವ ಪರಿಸ್ಥಿತಿ. ಹೀಗಾಗಿ ಕಾಂಗ್ರೆಸ್ ತಳ ಮಟ್ಟದಲ್ಲಿ ಕಳೆಗುಂದುತ್ತಿದೆ. ಬದಲಾಗಿ ಕೇಸರಿ ಮಿಂಚಲಾರಂಭಿಸಿದೆ.

ಇದು ತಳಮಟ್ಟದ ಕಥೆಯಾದರೆ, ದೆಹಲಿಯಲ್ಲೂ ನಡೆಯುತ್ತಿರುವುದೇ ಇದೇ. ತಳಮಟ್ಟದಲ್ಲಿ ದುಡಿದು ಅಭ್ಯಾಸವಿರದ ನಾಯಕರ ಕೈಗೆ ಪಕ್ಷದ ಚುಕ್ಕಾಣಿ ಕೊಟ್ಟ ಕರ್ಮಕ್ಕೆ ಕಾಂಗ್ರೆಸ್ ತಕ್ಕ ಪಾಠವನ್ನೇ ಕಲಿತಿದೆ.
ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಸಂಡೇ ಗಾರ್ಡಿಯನ್ ಪ್ರಕಟಿಸಿದ ವರದಿ. ಸಂಡೇ ಗಾರ್ಡಿಯನ್ ವರದಿ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಆಪ್ತರಾಗಿದ್ದುಕೊಂಡೇ ರಮ್ಯಾ ಮಂಕು ಬೂದಿ ಎರಚಿದ್ದಾರಂತೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆ ಹೆಸರಲ್ಲಿ 8 ಕೋಟಿ ರೂಪಾಯಿ ಮೊತ್ತವನ್ನು ರಮ್ಯ ವಂಚಿಸಿದ್ದಾರೆ ಎಂದು ವರದಿ ಹೇಳಿದೆ.

Rahul’s own team fed his PM hopes right up to poll defeat

ಸಮೀಕ್ಷೆ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಏನಿಲ್ಲವೆಂದರೂ, 164ರಿಂದ 184 ಸ್ಥಾನಗಳನ್ನುಗೆಲ್ಲುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರಕ್ಕೆ ಬರುವುದು ಪಕ್ಕಾ. ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಗ್ಯಾರಂಟಿ ಎಂದು ವರದಿ ಕೊಡಲಾಗಿತ್ತು. ( ಅಂದ್ರೆ ಇದು ಇಂದ್ರ ಚಂದ್ರ ಕಥೆ ) ಆದರೆ, ಫಲಿತಾಂಶ ಬಂದಾಗ ಎಲ್ಲಾ ಉಲ್ಟಾಪಲ್ಟಾ ಅಗಿತ್ತು. ರಾಹುಲ್ ಗಾಂಧಿಯೇ ಅಮೇಥಿಯಲ್ಲಿ ಹೀನಾಯವಾಗಿ ಸೋತಿದ್ದರು.

ಕೇವಲ ರಮ್ಯ ಮಾತ್ರವಲ್ಲ ಸಂಡೇ ಗಾರ್ಡಿಯನ್ ಪತ್ರಿಕೆ ವರದಿ ಪ್ರಕಾರ ಪ್ರವೀಣ್ ಚಕ್ರವರ್ತಿ ಅನ್ನುವ ವ್ಯಕ್ತಿ 24 ಕೋಟಿ ಹಣವನ್ನು ಸಮೀಕ್ಷೆ ಹೆಸರಿನಲ್ಲಿ ನುಂಗಿ ಹಾಕಿದ್ದಾರಂತೆ.

ಪ್ರವೀಣ್ ಚಕ್ರವರ್ತಿ ಸಮೀಕ್ಷೆಗಳ ಉಸ್ತುವಾರಿ ವಹಿಸಿಕೊಂಡಿದ್ರೆ, ರಮ್ಯಾ ಸೋಷಿಯಲ್ ಮೀಡಿಯಾ ಜವಾಬ್ದಾರಿ ವಹಿಸಿಕೊಂಡಿದ್ರು. ಇವರಿಬ್ಬರು ಸೇರಿ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ದಿಕ್ಕುತಪ್ಪಿಸಿದ್ದರು ಎಂದು ಸಂಡೇ ಗಾರ್ಡಿಯನ್ ವರದಿ ಮಾಡಿದೆ.

ಪ್ರವೀಣ್‌ ಚಕ್ರವರ್ತಿ ಹಲವಾರು ಸಮೀಕ್ಷೆಗಳನ್ನು ನಡೆಸಿರುವುದಾಗಿ ಹೇಳಿ ರಾಹುಲ್‌ ಅವರಿಂದ 24 ಕೋಟಿ ಹಣವನ್ನು ಶುಲ್ಕದ ರೂಪದಲ್ಲಿ ಪಡೆದ್ರೆ. ರಮ್ಯಾ ಹಲವು ಸರ್ವೇಗಳ ಹೆಸರಲ್ಲಿ 8 ಕೋಟಿ ರೂ. ಬಿಲ್ ಕ್ಲಿಯರ್ ಮಾಡಿಸಿಕೊಂಡಿದ್ದಾರಂತೆ. ಆದರೆ, ಯಾರಿಗೆ ಸಮೀಕ್ಷೆ ಒಪ್ಪಿಸಲಾಗಿತ್ತು ? ಅದಕ್ಕೆ ಎಷ್ಟು ಖರ್ಚಾಯ್ತು ಇದ್ಯಾವ ಲೆಕ್ಕವೂ ಕಾಂಗ್ರೆಸ್ ಪಕ್ಷದ ಹಣಕಾಸು ವಿಭಾಗಕ್ಕೆ ಸಿಕ್ತಿಲ್ಲ ಎಂದು ಎಂದು ದಿ ಸಂಡೇ ಗಾರ್ಡಿಯನ್ ವರದಿ ಮಾಡಿದೆ.

ಇದಕ್ಕೆ ಪೂರಕ ಅನ್ನುವಂತೆ ಕಾಂಗ್ರೆಸ್ ಹೀನಾಯವಾಗಿ ಸೋತ ನಂತ್ರ ರಮ್ಯ ಟ್ವೀಟರ್ ಖಾತೆ ಡಿಲೀಟ್ ಮಾಡಿ ಸೈಲೆಂಟ್ ಆಗಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: