ಸಿನಿಮಾದವರ ತಾಕತ್ತು ಮಂಡ್ಯ ಚುನಾವಣೆಯಲ್ಲಿ ಗೊತ್ತಾಗಿದೆ : ಸಚಿವರಿಗೆ ತಿವಿದ ಕೊಡಗಿನ ಕುವರಿ

ಕೊಡಗಿನ ಕುವರಿಯ ಎದುರು ಕುಮಾರಸ್ವಾಮಿ ಸಂಪುಟದ ಸಚಿವ ಸಾರಾ ಮಹೇಶ್ ತೀರಾ ಸಣ್ಣವರಾಗಿ ಹೋಗಿದ್ದಾರೆ. ಕೊಡಗಿನ ಜನರ ಬಗ್ಗೆ ಕಾಳಜಿಯನ್ನು ತೋರಿದ ಹರ್ಷಿಕಾ ಪೂಣಚ್ಚ ಅವರಿಗೆ ಟಾಂಗ್ ಕೊಡಲು ಹೋದ ಸಚಿವರಿಗೆ ಇದೀಗ ತೀರಾ ಮುಖಭಂಗವಾಗಿದೆ.

ಸಚಿವ ಸಾರಾ ಮಹೇಶ್ ಎತ್ತಿದ ಪ್ರಶ್ನೆಗೆ ವಿಡಿಯೋ ಮೂಲಕ ಉತ್ತರಿಸಿರುವ ಹರ್ಷಿಕಾ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.

ನಾನು ಇಂಜಿನಿಯರ್ ಬಿ.ಇ ಪದವಿ ಪಡೆದಿದ್ದೇನೆ. ನಾನು ಕೊಡಗಿನ ಮಗಳು, ಭಾರತದ ಪ್ರಜೆ ನನಗೆ ಈ ಬಗ್ಗೆ ಕೇಳುವ ಎಲ್ಲಾ ಹಕ್ಕಿದೆ. ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಸಿನಿಮಾದವರು. ತಮಿಳುನಾಡಿನ ಸಾಕಷ್ಟು ಮಂತ್ರಿಗಳು ಸಿನಿಮಾದವರು. ಅಷ್ಟೇ ಅಲ್ಲದೆ ಸಿನಿಮಾದವರು ಏನು ಮಾಡಬಹುದು ಅನ್ನೋದು ಇತ್ತೀಚಿಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಿದೆ. ದಯವಿಟ್ಟು ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಸಚಿವ ಸಾರಾ ಮಹೇಶ್ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ.

ಪಾಪ ಮಂಡ್ಯದ ವಿಷಯವನ್ನು ಪ್ರಸ್ತಾಪಿಸಿ ಕೊಟ್ಟ ಉತ್ತರವಿದೆಯಲ್ಲ, ಇನ್ಮುಂದೆ ಸಾರಾ ಮಹೇಶ್ ಸಿನಿಮಾ ಮಂದಿಯ ಸುದ್ದಿಗೆ ಹೋಗಲ್ಲ.

ಅದ್ಯಾಕೋ ದಳಪತಿಗಳು ಸಿನಿಮಾದವರ ಕೈಯಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮಂಡ್ಯ ಚುನಾವಣೆಯಲ್ಲಿ  ಸಿನಿಮಾ ಮಂದಿಯನ್ನು ಕಳ್ಳೆತ್ತು ಅಂದು ಸರಿಯಾಗಿ ಪಾಠ ಕಲಿತರು. ಈಗ ಸಾರಾ ಮಹೇಶ್ ಸರದಿ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾರಾ ಮಹೇಶ್ ಅವರ ಕಿಂಡಿ ಹಿಂಡದಿದ್ದರೆ ಇವರು ಇನ್ನು ಏನೇನೋ ಮಾತನಾಡೋದು ಗ್ಯಾರಂಟಿ.

Widget apcmwh

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: