ಮತ್ತೆ ‘ಕೃಷ್ಣ’ ಜಪ ಆರಂಭಿಸಿದ ಅಜೇಯ ರಾವ್….!

ಕೆಲವರಿಗೆ ಕೆಲವು ಟೈಟಲ್ ಗಳು ಅದೃಷ್ಟ ತರುತ್ತದೆಯಂತೆ. ಮತ್ತೆ ಕೆಲವರು ಗೊತ್ತಿಲ್ಲದಂತೆ ಟೈಟಲ್ ಹಿಂದೆ ಬಿದ್ದಿರುತ್ತಾರೆ.

ಸೀರಿಯಲ್ ಲೋಕದ ಮಾಂತ್ರಿಕ ನಿರ್ದೇಶಕ ಟಿಎನ್ ಸೀತರಾಮ್ ‘ಮ’  ಅಕ್ಷರದ ಹಿಂದೆ ಬಿದ್ದಿಲ್ವ, ಧೃವ ಸರ್ಜಾ ‘ಬ’ ಅನ್ನುವ ಅಕ್ಷರದ ಬಾಲ ಹಿಡಿಯಲಿಲ್ವ. ಹೀಗೆ ಹೇಳ್ತಾ ಹೋದ್ರೆ ಸಾವಿರ ಉದಾಹರಣೆಗಳು.

ಅದೇ ರೀತಿಯಲ್ಲಿ ಕೃಷ್ಣ ಟೈಟಲ್ ಹಿಂದೆ ಬಿದ್ದವರು ಅಜೇಯ ರಾವ್. ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲಾ, ಕೃಷ್ಣ ರುಕ್ಕು, ಕೃಷ್ಣ ಸನ್ ಆಫ್ ಸಿಎಂ ಹೀಗೆ ಸಾಲು ಸಾಲು ಕೃಷ್ಣ ಟೈಟಲ್ ಗಳಲ್ಲಿ ಮಿಂಚಿದ್ದರು.

ಇದಾದ ನಂತ್ರ  Action ಹೀರೋ ಆಗಬೇಕು ಅನ್ನುವ ಕನಸಿನೊಂದಿಗೆ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ನಟಿಸಿದ್ದರು. ಚಿತ್ರ ಚೆನ್ನಾಗಿಯೇ ಬಂದಿತ್ತು, ಆದರೆ ಅದ್ಯಾಕೋ ಚಿತ್ರ ಪ್ರೇಮಿಗಳು ಕೈ ಹಿಡಿಯಲಿಲ್ಲ. ಹೀಗಾಗಿ  Action ಹೀರೋ ಕನಸು ನನಸಾಗಲಿಲ್ಲ.

ಇದರ ಬೆನ್ನಲ್ಲೇ ಮತ್ತೆ ಲವ್ವರ್ ಬಾಯ್ ಕಡೆಗೆ ಮರಳಿರುವ ಅಜೇಯ ರಾವ್ ಸದ್ದಿಲ್ಲದೆ ಕೃಷ್ಣ ಟೈಟಲ್ ಬೆನ್ನು ಹತ್ತಿದ್ದಾರೆ. ಕೃಷ್ಣ ಸೀರಿಸ್ ನ ಮುಂದುವರಿದ ಭಾಗ ಅನ್ನುವಂತೆ ಕೃಷ್ಣ ಟಾಕೀಸ್ ಸಿನಿಮಾಗೆ ಸಹಿ ಮಾಡಿರುವ ರಾವ್ ಮತ್ತೆ ಲವರ್ ಬಾಯ್ ಜೊತೆ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳಲು ಸಿದ್ದತೆ ನಡೆಸಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: