Advertisements

ಧಮ್ ಇದ್ದರೆ ಸಿದ್ದರಾಮಯ್ಯರನ್ನ ಕಾವೇರಿ ನಿವಾಸದಿಂದ ಹೊರಹಾಕಿ : HDK ಗೆ ಶೆಟ್ಟರ್ ಸವಾಲ್

ಕುಮಾರಸ್ವಾಮಿಗೆ ಧಮ್​ ಇದ್ದರೆ ಸಿದ್ದರಾಮಯ್ಯನವರನ್ನು ಕಾವೇರಿ ಬಂಗಲೆಯಿಂದ ಹೊರಗೆ ಹಾಕಲಿ ಎಂದು ಮಾಜಿ ಸಿಎಂ ಜಗದೀಶ್​​ ಶೆಟ್ಟರ್​ ಸವಾಲು ಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರದಿದ್ದರೂ ಕಾವೇರಿ ನಿವಾಸದಲ್ಲಿ ವಾಸವಿರುವುದಕ್ಕೆ ಕಿಡಿಕಾರಿದರು. ಕೆ.ಜೆ.ಜಾರ್ಜ್​ ಅವರ ಹೆಸರಿನಲ್ಲಿ ಸಿದ್ದರಾಮಯ್ಯ ಪುಕ್ಕಟೆಯಾಗಿ, ಅನಧಿಕೃತವಾಗಿ ಕಾವೇರಿ ನಿವಾಸದಲ್ಲಿ ವಾಸವಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲೇ ಸಿದ್ದರಾಮಯ್ಯ ಇದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ಯಾವುದೇ ಸಿಎಂ ಅಧಿಕಾರ ಹೋದ ಮೇಲೆ ಎರಡು ತಿಂಗಳಲ್ಲಿ ಮನೆ ಖಾಲಿ ಮಾಡಬೇಕು.

ಆದರೆ ಒಂದು ವರ್ಷ ಆದರೂ ಕಾವೇರಿ ನಿವಾಸ ಖಾಲಿ ಮಾಡಿಲ್ಲ. ಸಿದ್ದರಾಮಯ್ಯ ಏನಾದರೂ ಬಾಡಿಗೆ ಕೊಟ್ಟಿದ್ದಾರಾ? ಅನಧಿಕೃತವಾಗಿ ಕಾವೇರಿ ಬಂಗಲೆಯಲ್ಲಿ ವಾಸವಾಗಿದ್ದಾರೆ.

ಕೆ.ಜೆ. ಜಾರ್ಜ್ ಹೆಸರಿನಲ್ಲಿ ಮನೆ ಪಡೆದುಕೊಂಡು ಸಿದ್ದರಾಮಯ್ಯ ಆ ಮನೆಯಲ್ಲಿ ಇದ್ದಾರೆ. ಕಾವೇರಿ ನಿವಾಸದಲ್ಲಿ ಯಾವ ಆಧಾರದ ಮೇಲೆ ಇದ್ದಾರೆ ಎನ್ನುವುದರ ಬಗ್ಗೆ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಆಗ್ರಹಿಸಿದ್ದರು.

Advertisements

Leave a Reply

%d bloggers like this: