Advertisements

ಅಷ್ಟು ಸುಲಭದಲ್ಲಿ ಸಾಯೋದಿಲ್ಲ… ಚುನಾವಣೆ ಹೊಸ್ತಿಲಲ್ಲಿ ಸಾವಿನ ಬಗ್ಗೆ ಮಾತನಾಡಿದ ಕುಮಾರಸ್ವಾಮಿ

ರಾಜ್ಯದ ಜನತೆ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದ್ಯಾವ ಚುನಾವಣೆಯೇ ಬರಲಿ ಕುಮಾರಸ್ವಾಮಿ ತಮ್ಮ ಆರೋಗ್ಯ, ಹೃದಯದ ಆಪರೇಷನ್, ಸಾವಿನ ಬಗ್ಗೆ ಮಾತನಾಡುತ್ತಾರೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಸ್ರೇಲ್ ನಲ್ಲಿ ತನ್ನ ಆರೋಗ್ಯಕ್ಕೆ ಏನಾಗಿತ್ತು ಅನ್ನುವುದನ್ನು ಹೇಳಿದ್ದರು.

ಈ ಬಾರಿ ಲೋಕ ಸಮರದಲ್ಲಿ ಮಗನ ಪರವಾಗಿ ಪ್ರಚಾರ ಮಾಡುವಾಗ ಮತ್ತೆ ಆರೋಗ್ಯದ ವಿಷಯವನ್ನೇ ಪ್ರಸ್ತಾಪಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅದ್ಯಾಕೆ ಕುಮಾರಸ್ವಾಮಿ ಆರೋಗ್ಯ ವಿಚಾರವನ್ನು ಜನತೆ ಮುಂದಿಡುತ್ತಾರೋ ಗೊತ್ತಿಲ್ಲ.

ಬುಧವಾರ ಭದ್ರಾವತಿ ತಾಲೂಕಿನ ಆನವೇರಿ ಸಮೀಪದ ಮಲ್ಲಾಪುರ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಮತ್ತೆ ಸಾವಿನ ವಿಚಾರ ಪ್ರಸ್ತಾಪಿಸಿದ್ದಾರೆ.

ನಾನು ಅಷ್ಟು ಸುಲಭವಾಗಿ ಸಾಯಲ್ಲ. ದೇವರು ಮತ್ತು ಜನರ ಆಶೀರ್ವಾದ ನನ್ನ ಮೇಲಿದೆ. ಸರಕಾರ ಪತನ ಆಗುತ್ತೆ ಅನ್ನುವವರು ಕನಸು ಕಾಣುತ್ತಲೇ ಇರಬೇಕು ಅಂದಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ಸರಕಾರ ಬೀಳೋದಾಗಿ ಬಿಎಸ್‌ವೈ ಹೇಳಿದ್ದರು. ದೇವರ ಅಶೀರ್ವಾದ ನನ್ನ ಮೇಲಿದೆ‌. ಸರಕಾರ ಸುಭದ್ರವಾಗಿರಲಿದೆ‌ ಎಂದು ಇದೇ ವೇಳೆ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

Advertisements

Leave a Reply

%d bloggers like this: