Advertisements

ಬಿಟಿವಿಯವರೇ ದರ್ಶನ್ ಮನೆಗೆ ದಾಳಿ ಮಾಡಿದ್ದು…ಐಟಿಯವರಲ್ಲ.. ಚುನಾವಣಾಧಿಕಾರಿಗಳು

ಕರ್ನಾಟಕದ ಮಾನ ಮರ್ಯಾದೆಯನ್ನು ಹರಾಜು ಹಾಕಲೇ ಬೇಕು ಎಂದು ಬಿಟಿವಿ ಪಟ್ಟು ಹಿಡಿದಂತಿದೆ. ಮಂಡ್ಯದಲ್ಲಿ ನಿಖಿಲ್ ಪರ ಕುಮಾರಸ್ವಾಮಿಗಿಂತಲೂ ಒಂದು ಹೆಜ್ಜೆ ಮುಂದೆ ನಿಂತು ಪ್ರಚಾರ ನಡೆಸುತ್ತಿದೆ.

ಬಿಟಿವಿಯ ಸುದ್ದಿವಾಚಕರನ್ನು ನೋಡಿದ್ರೆ ಸ್ವಾಭಿಮಾನ ಅನ್ನುವುದನ್ನು ಬದಿಗಿಟ್ಟು ಸುದ್ದಿ ಓದುವ ದುಸ್ಥಿತಿ ಕನ್ನಡ ಸುದ್ದಿವಾಚಕರಿಗೆ ಬಂತಲ್ಲ ಎಂದು ಬೇಸರವಾಗುತ್ತಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಸ್ವಾಭಿಮಾನ ಬಿಟ್ಟು ಸುದ್ದಿ ಓದುವ ಪರಿಸ್ಥಿತಿ ಬಂದಿದ್ದರೆ ರಾಜೀನಾಮೆ ಎಸೆದು ಬಂದಾಗುತ್ತಿತ್ತು.

ಈ ನಡುವೆ ಬಿಟಿವಿ ಚಿಕ್ಕದೊಂದು ಸುದ್ದಿಯನ್ನು ದೊಡ್ಡ ಬ್ರೇಕಿಂಗ್ ಅನ್ನುವಂತೆ ತೋರಿಸಿದೆ. ಅದು ಇಂದು ಮುಂಜಾನೆ 10.30 ರಿಂದ 11 ಗಂಟೆಗೆ ನಡೆದ ಘಟನೆ.

ಮೈಸೂರಿನಿಂದ ಟೀ.ನರಸೀಪುರಕ್ಕೆ ಹೋಗುವ ದಾರಿಯಲ್ಲಿ ದರ್ಶನ್ ಅವರ ಫಾರಂ ಹೌಸ್ ಒಂದಿದೆ. ಅಲ್ಲಿ ದುಡ್ಡು ಹಂಚಲಾಗುತ್ತಿದೆ ಅನ್ನುವ ಮಾಹಿತಿ ಹಿನ್ನಲೆಯಲ್ಲಿ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದರು.

ನಾಲ್ಕೈದು ಅಧಿಕಾರಿಗಳು, ಒಬ್ಬ ಪೊಲೀಸ್ ಪೇದೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಬಂದ ಮಾಹಿತಿ ಸುಳ್ಳು ಎಂದು ಹಿಂತಿರುಗಿದ್ದಾರೆ.

ಆದರೆ 2 ಗಂಟೆಗೆ ಇದೇ ಬಿಟಿವಿ ದರ್ಶನ್ ಫಾರಂ ಹೌಸ್ ಗೆ ಐಟಿ ದಾಳಿ, ಮಹತ್ವದ ದಾಖಲೆ ವಶ ಎಂದು ಆರ್ಭಟಿಸತೊಡಗಿತು. ಈಗ ನಾವು ಹೇಳ್ತಾ ಇದ್ದೀವಿ ಅದು ಐಟಿ ದಾಳಿಯಲ್ಲ, ಅದು ಚುನಾವಣಾ ಅಧಿಕಾರಿಗಳ ದಾಳಿ. ದಯವಿಟ್ಟು ಸುಳ್ಳು ಸುದ್ದಿ ಕೊಡಬೇಡಿ.

ಇದಕ್ಕೂ ಮುಂಚೆ ಸುಮಲತಾ ಅನ್ನುವ ಹೆಣ್ಣು ಮಗಳು ಕಣ್ಣೀರು ಹಾಕಿದ್ರೆ, ನಾಟಕ ಎಂದು ಜರೆದಿತ್ತು. ಈ ಬಿಟಿವಿಗೆ ದೇವೇಗೌಡರ ಕುಟುಂಬದ ಕಣ್ಣೀರು ಮಾತ್ರ ನಾಟಕ ಅನ್ನಿಸೋದಿಲ್ಲ.

Advertisements

Leave a Reply

%d bloggers like this: