Advertisements

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ ಪ್ರಾಣಿ ಪತ್ತೆ

ಮೈಮೇಲೆ ಬಿಳಿ ಬಣ್ಣದ ಚುಕ್ಕಿಯುಳ್ಳ ಜಿಂಕೆ ಒಂದು ವಾರದಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಫಾರಿಗೆ ಬರುತ್ತಿರುವ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

2017ರ ಮೇನಲ್ಲಿ ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲ್ಲೂಕು ಅಂತರಸಂತೆ, ಕಬಿನಿ ಹಿನ್ನೀರಿನಲ್ಲಿ ದೊಡ್ಡ ಗುಂಪಿನಲ್ಲಿ ಬಿಳಿ ಬಣ್ಣದ ಜಿಂಕೆ ಕಂಡು ಬಂದಿತ್ತು.

ನಾಗರಹೊಳೆ ಅರಣ್ಯವು ಕೊಡಗು ಹಾಗೂ ಮೈಸೂರು ಜಿಲ್ಲೆಗಳ ನಡುವೆ ವಿಸ್ತರಿಸಿದ್ದು, ಮತ್ತೊಂದು ಬಿಳಿ ಜಿಂಕೆ ಮರಿ ಪತ್ತೆಯಾಗಿರುವುದು ವನ್ಯಜೀವಿ ಪ್ರಿಯರ ಕುತೂಹಲವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಹಿಂದೊಮ್ಮೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲೂ ಬಿಳಿ ಜಿಂಕೆ ಕಾಣಿಸಿಕೊಂಡಿತ್ತು.

ಕಳೆದ ವಾರ ವಿರಾಜಪೇಟೆ ವನ್ಯಜೀವಿ ಛಾಯಾಗ್ರಾಹಕ ವಿಷು ನಾಣಯ್ಯ ಅವರು, ನಾಗರಹೊಳೆಗೆ ಕೊಡಗು ಭಾಗದ ಕಡೆಯಿಂದ ಸಫಾರಿಗೆ ತೆರಳಿದ್ದರು. ಆಗ ಸಾಮಾನ್ಯ ಜಿಂಕೆಯೊಂದಿಗೆ ಅಪರೂಪದ ಜಿಂಕೆಯೂ ಪತ್ತೆಯಾಗಿದೆ.

ಮೆಲನಿನ್‌ (ವರ್ಣದ್ರವ್ಯ) ದೇಹದಲ್ಲಿ ಹೆಚ್ಚಾದರೆ ಪ್ರಾಣಿಗಳು ಬಿಳಿ ಬಣ್ಣದಲ್ಲಿ ಜನಿಸುತ್ತವೆ. ಅದು ಕಡಿಮೆಯಿದ್ದರೆ ಕಪ್ಪು ಬಣ್ಣದಲ್ಲಿ ಹುಟ್ಟುತ್ತವೆ. ಇದು ಜನಿಸುವ ಪ್ರಕ್ರಿಯೆ. ಇತ್ತೀಚೆಗೆ ಜಿಂಕೆ, ಕಾಡೆಮ್ಮೆ, ಚಿರತೆ ಸೇರಿ ಹಲವು ಪ್ರಾಣಿಗಳು ಬಣ್ಣ ಬದಲಿಸಿ ಹುಟ್ಟಿರುವ ನಿದರ್ಶನವಿದೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ.

Advertisements

Leave a Reply

%d bloggers like this: