Advertisements

ಮೋದಿ ಹೆಲಿಕಾಫ್ಟರ್ ನಿಂದ ತರಾತುರಿಯಲ್ಲಿ ಇಳಿಸಿದ ಬಾಕ್ಸ್ ನಲ್ಲಿ ಏನಿತ್ತು…?

ಪ್ರಧಾನಿ ನರೇಂದ್ರ ಮೋದಿಯವರು ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಹೆಲಿಕಾಪ್ಟರ್ ನಿಂದ ಟ್ರಂಕ್ ಒಂದನ್ನು ಇಳಿಸಿ ಕಾರಿನಲ್ಲಿ ಸಾಗಿಸಿದ್ದು ಯಕ್ಷ ಪ್ರಶ್ನೆಯಾಗಿದೆ..

ಯಾವುದೇ ಭದ್ರತಾ ಪರಿಶೀಲನೆ ನಡೆಸದೆ ಟ್ರಂಕನ್ನು ಮೋದಿ ಹೆಲಿಕಾಪ್ಟರ್ ನಿಂದ ಇಳಿಸಿ ಕಾರಿನಲ್ಲಿ ಇರಿಸುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನಗಳ ಸಾಲಿನಲ್ಲಿ ಇಲ್ಲದ ಕಾರಿಗೆ ಈ ಬಾಕ್ಸ್ ಶಿಫ್ಟ್ ಆಗಿದ್ದು ಯಾಕೆ? ಬಾಕ್ಸನ್ನು ತೆಗೆದುಕೊಂಡು ಹೋಗಿದ್ದು ಯಾರು? ಆ ಕಾರು ಯಾರಿಗೆ ಸೇರಿದ್ದು? ಎಲ್ಲಿಗೆ ಬಾಕ್ಸ್ ಹೋಯ್ತು ಅನ್ನುವ ಕುರಿತಂತೆ ಕಾಂಗ್ರೆಸ್ ಹಲವಾರು ಪ್ರಶ್ನೆಗಳನ್ನು ಎತ್ತಿದೆ.

ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಲ್ಲಿ ಸತ್ಯಾಂಶವಿದೆ. ಚುನಾವಣೆ ಸಂದರ್ಭದಲ್ಲಿ ಸಣ್ಣದೊಂದು ಚೀಲ ಕಂಡರೂ ಅನುಮಾನ ಬರುತ್ತದೆ. ಮುಖ್ಯಮಂತ್ರಿಗಳ ಕಾರನ್ನು ಪದೇ ಪದೇ ತಡಕಾಡಲಾಗುತ್ತದೆ. ಹೀಗಿರುವ ಸಂದರ್ಭದಲ್ಲಿ ವಿಡಿಯೋ ನೋಡಿದ್ರೆ ಅದೇನೋ ತರಾತುರಿಯಲ್ಲಿ ಪೆಟ್ಟಿಗೆ ಸಾಗಿಸುವುದನ್ನು ನೋಡಿದ್ರೆ ಅನುಮಾನ ಬರುವುದು ಸಹಜ.

ಕರ್ನಾಟಕದಲ್ಲಿ ರಾಜಕೀಯ ನಾಯಕರು ಆಡಿದ ಪ್ರತಿಯೊಂದು ಮೋದಿಗೂ ಪ್ರತಿಕ್ರಿಯೆ ಕೊಡುವ ಮೋದಿ, ಇದಕ್ಕೂ ಪ್ರತಿಕ್ರಿಯೆ ಕೊಡಲೇಬೇಕು. ಇಲ್ಲವಾದರೆ ಅವರವರ ಭಾವಕ್ಕೆ ಅನ್ನುವಂತೆ ಅನುಮಾನಕ್ಕೆ ಉತ್ತರ ಕಂಡುಕೊಳ್ಳುತ್ತಾರೆ ಜನ.

Advertisements

One Comment on “ಮೋದಿ ಹೆಲಿಕಾಫ್ಟರ್ ನಿಂದ ತರಾತುರಿಯಲ್ಲಿ ಇಳಿಸಿದ ಬಾಕ್ಸ್ ನಲ್ಲಿ ಏನಿತ್ತು…?

  1. Pingback: ನಿಮ್ಮವರ ಭ್ರಷ್ಟಚಾರದ ದಾಖಲೆ ನಾನು ಕಳುಹಿಸಿಕೊಡುತ್ತೇನೆ : ಮೋದಿಗೆ ತಿರುಗೇಟು ನೀಡಿದ HDK – torrentspree

Leave a Reply

%d bloggers like this: