Advertisements

ನಾನೂ ಸಿದ್ದರಾಮಯ್ಯ ಜೊತೆಯಾಗಿರುವುದನ್ನು ಸಾರ್ಥಕ ಮಾಡಿ : ದೇವೇಗೌಡ ಮನವಿ

ನಾನು ಮತ್ತು ಸಿದ್ದರಾಮಯ್ಯ ಒಟ್ಟಾಗಿದ್ದೇವೆ, ಈ ಸನ್ನಿವೇಶ ಮತ್ತೆ ಬರೋದಿಲ್ಲ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಪಕ್ಷ ಕನಿಷ್ಠ 20 ಸೀಟನ್ನಾದರೂ ಗೆಲ್ಲುವಂತೆ ಮಾಡಿ, ನಿಮ್ಮಲ್ಲಿ ಕೈ ಜೋಡಿಸಿ ಕೇಳಿಕೊಳ್ಳುತ್ತಿದ್ದೇನೆ, ಎಂದು ಮಾಜಿ ಪ್ರಧಾನಿ ದೇವೇಗೌಡ  ಹೇಳಿದ್ದಾರೆ.

ಮೈಸೂರಿನ ಕೆ.ಆರ್.ನಗರದಲ್ಲಿ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು ಇದೊಂದು ಅಗ್ನಿಪರೀಕ್ಷೆ, ಈಗ ರಾಜಕೀಯ ಸನ್ನಿವೇಶ ಬದಲಾಗಿದೆ. ನಾನು, ಸಿದ್ದರಾಮಯ್ಯ ಸ್ಪಲ್ಪಕಾಲ ಬೇರೆ ಇದ್ದೆವು. ಈಗ ಒಟ್ಟಿಗೆ ಸೇರಿದ್ದೇವೆ. ಒಟ್ಟಿಗೆ ಪ್ರಚಾರ ಮಾಡುತ್ತಿದ್ದೇವೆ.

ಈ ಬಾರಿ ಚುನಾವಣೆಯಲ್ಲಿ ಕನಿಷ್ಠ 20 ಸೀಟು ಗೆಲ್ಲಬೇಕು. ಆಗ ಮಾತ್ರ ನಾನು ಮತ್ತು ಸಿದ್ದರಾಮಯ್ಯ ಜೊತೆಯಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Advertisements

One Comment on “ನಾನೂ ಸಿದ್ದರಾಮಯ್ಯ ಜೊತೆಯಾಗಿರುವುದನ್ನು ಸಾರ್ಥಕ ಮಾಡಿ : ದೇವೇಗೌಡ ಮನವಿ

  1. Pingback: ಸುಮಲತಾ ಭದ್ರತೆ ರಾಜ್ಯ ಸರ್ಕಾರ ಜವಾಬ್ದಾರಿ : ಚುನಾವಣಾ ಆಯೋಗ ಸೂಚನೆ – torrentspree

Leave a Reply

%d bloggers like this: