Advertisements

ಚುನಾವಣಾ ಖರ್ಚಿಗೆಂದು ಕುಮಾರಸ್ವಾಮಿಗೆ ಕಾಸು ಕೊಟ್ಟ ಭಾರತಿನಗರದ ನಿವಾಸಿಗಳು

ಮಂಡ್ಯ ಕೆ ಎಂ ದೊಡ್ಡಿಯ ಭಾರತಿನಗರ ಗ್ರಾಮದ ರೈತರೆಲ್ಲಾ ಸೇರಿ ಹಣ ಸಂಗ್ರಹಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ. ಮಂಡ್ಯ ಜೆಡಿಎಸ್​ ಅಭ್ಯರ್ಥಿ ನಿಖಿಲ್​​ ಕುಮಾರಸ್ವಾಮಿ ಪರ ಶನಿವಾರ ಮತ ಪ್ರಚಾರ ಮಾಡುವ ವೇಳೆ ರೈತರು ಹಣ ನೀಡಿ, ಚುನಾವಣೆ ಖರ್ಚಿಗೆ ಬಳಸಿಕೊಳ್ಳುವಂತೆ ದೇಣಿಗೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ ನಿಖಿಲ್​​​ ಚುನಾಚಣೆಗೆ ನಿಂತಿದ್ದು ನಿಮ್ಮ ಸೇವೆ ಮಾಡಲು. ಸದ್ಯ ನನಗೆ ಆರೋಗ್ಯದ ಸಮಸ್ಯೆಯಿದೆ. ಹಾಗಾಗಿ ಮುಂದಿ ಹೋರಾಟಕ್ಕೆ ಹಾಗೂ ರೈತರ ಕೂಗಿಗೆ ನಿಖಿಲ್​​​​​​​​​​​ ಧನಿ ಕೊಡಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಮಂಡ್ಯದ 7 ಜನ ಶಾಸಕರ ಒತ್ತಾಯದ ಮೇರೆಗೆ ನಿಂತಿದ್ದಾರೆ. ನೀವು ಯಾರದ್ದೋ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ನಿಮ್ಮ ಕಷ್ಟ, ಸುಖ ಮತ್ತು ಹಾಗು-ಹೋಗುಗಳಿಗೆ ಬರುವುದು ನಾವು ಮಾತ್ರ ಎಂದು ಗ್ರಾಮಸ್ಥರಿಗೆ ವಿಶ್ವಾಸ ತುಂಬಿದರು.

Advertisements

Leave a Reply

%d bloggers like this: