Advertisements

ಇಟಲಿಯಲ್ಲಿ 7.52 ಕೋಟಿ ಮೊತ್ತದ ಆಸ್ತಿ : ರಾಹುಲ್ ಗೆ 5 ಲಕ್ಷ ಸಾಲ ಬಾಕಿ

ಉತ್ತರ ಪ್ರದೇಶದ ರಾಯ್‌ ಬರೇಲಿ ಕ್ಷೇತ್ರದಿಂದ ಐದನೇ ಬಾರಿ ಆಯ್ಕೆ ಬಯಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪುತ್ರ ರಾಹುಲ್ ಗಾಂಧಿ 5 ಲಕ್ಷ ಸಾಲ ಕೊಟ್ಟಿದ್ದಾರಂತೆ.

ಸೋನಿಯಾ ಗಾಂಧಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ ಪ್ರಕಾರ, ಇಟಲಿಯಲ್ಲಿ 7.52 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ, ಹೊಸದಿಲ್ಲಿಯ ದೇರಾಮಂಡಿ ಗ್ರಾಮದಲ್ಲಿ 7.29 ಕೋಟಿ ರೂ. ಮೌಲ್ಯದ ಕೃಷಿ ಜಮೀನು, 60 ಸಾವಿರ ರೂ. ನಗದು ಹಣ ಹೊಂದಿದ್ದಾರಂತೆ.

ರಿಲಾಯನ್ಸ್‌ ಹೈಬ್ರಿಡ್‌ ಬಾಂಡ್‌ ಜಿ ಮತ್ತು ನಾನಾ ಕಂಪನಿಯ ಷೇರುಗಳಲ್ಲಿ ಒಟ್ಟು 2.44 ಕೋಟಿ ರೂ. ಹಣವನ್ನು ಸೋನಿಯಾ ಹೂಡಿಕೆ ಮಾಡಿದ್ದು, 16.59 ಲಕ್ಷ ರೂ. ಫಿಕ್ಸೆಡ್ ಡಿಪಾಸಿಟ್, ಅಂಚೆ ಕಚೇರಿ/ವಿಮೆ/ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ 72.25 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಅಲ್ಲದೆ

 59.97 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕೂಡ ರಾಹುಲ್ ತಾಯಿ ಬಳಿ ಇದೆಯಂತೆ.

Advertisements

One Comment on “ಇಟಲಿಯಲ್ಲಿ 7.52 ಕೋಟಿ ಮೊತ್ತದ ಆಸ್ತಿ : ರಾಹುಲ್ ಗೆ 5 ಲಕ್ಷ ಸಾಲ ಬಾಕಿ

  1. Pingback: ಸುಮಲತಾ ಭದ್ರತೆ ರಾಜ್ಯ ಸರ್ಕಾರ ಜವಾಬ್ದಾರಿ : ಚುನಾವಣಾ ಆಯೋಗ ಸೂಚನೆ – torrentspree

Leave a Reply

%d bloggers like this: