Advertisements

ತೇಜಸ್ವಿನಿಗೆ ತಪ್ಪಿದ ಟಿಕೆಟ್ ತೇಜಸ್ವಿ ಕೈ ಸೇರಿದ್ದು ಹೀಗೆ…. ಇಲ್ಲಿದೆ ಮಹಾ ರಹಸ್ಯ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದ್ದರ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಸ್ತಕ್ಷೇಪವಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಜೀನ್ಸ್, ಡಿಎನ್‍ಎ ನೋಡಿ ಟಿಕೆಟ್ ಕೊಡ್ತಾ ಹೋದ್ರೆ ಪಾರ್ಟಿ ಮೆಂಬರ್ ಸ್ಲಿಪ್‍ಗೆ ಬೆಲೆ ಬೇಕಲ್ಲ ಎಂದು ಪರೋಕ್ಷವಾಗಿ ಹೇಳುವ ಮೂಲಕ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ತಪ್ಪಿದೆ ಎಂದು ಬಿ.ಎಲ್. ಸಂತೋಷ್ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿರುವ ಅವರು ಅನಂತ ಕುಮಾರ್ ಅವರಿಗೆ ಏನು ಗೌರವ ಕೊಡಬೇಕೋ ಅದನ್ನು ಪಕ್ಷ ಇಂದಲ್ಲ, ಇನ್ನು 50 ವರ್ಷಗಳ ನಂತರವೂ ಕೊಡಲಿದೆ. ಕರ್ನಾಟಕದಲ್ಲಿ ಪಕ್ಷವನ್ನು ಬೆಳೆಸಿದವರು ಯಾರು ಅಂದ್ರೆ ಇಬ್ಬರಲ್ಲಿ ಅವರೊಬ್ಬರು ಅನ್ನುವುದನ್ನು ಬಿಜೆಪಿ ಖಂಡಿತಾ ಹೇಳುತ್ತದೆ.ಹಾಗಂತ ಪತಿ ಪಕ್ಷ ಕಟ್ಟಿದ್ದಾರೆ ಅನ್ನುವುದನ್ನು ಅವರ ಪತ್ನಿ ಕ್ಯಾಚ್ ಮಾಡಿಕೊಳ್ಳಬೇಕು ಅಂದ್ರೆ ಹೇಗಾಗುತ್ತದೆ ಅಂದಿದ್ದಾರೆ.

ಪಕ್ಷ ಮುಂದುವರಿಯಬೇಕು, ಮುಂದುವರಿಯಬೇಕಾದರೆ ಒಬ್ಬ ಯುವಕನಿಗೆ ಅವಕಾಶ ಕೊಡಬೇಕು, 20 ರಿಂದ 30 ವರ್ಷಗಳ ಕಾಲ ರಾಜಕೀಯ ಮಾಡಬಲ್ಲ ವ್ಯಕ್ತಿಯೊಬ್ಬ ಪಾರ್ಟಿ ಅಗತ್ಯ. ಪಕ್ಷದಲ್ಲಿ ತಲೆಮಾರುಗಳು ಬದಲಾಗಬೇಕು  ಅನ್ನುವ ಕಾರಣದಿಂದ ಯುವಕನಿಗೆ ಅವಕಾಶ ಕೊಡಲಾಗಿದೆ. ಹಾಗಂತ ಇದು ತೇಜಸ್ವಿನಿ ಬಗ್ಗೆ ಅಗೌರವವಿಲ್ಲ ಅಂದಿದ್ದಾರೆ.

ಡಿಎನ್ಎ, ಜೀನ್ಸ್ ಆಧರಿಸಿ ಟಿಕೆಟ್ ಕೊಡ್ತಾ ಹೋದ್ರೆ ನಾಳೆ ಕಾರ್ಯಕರ್ತರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತೇಜಸ್ವಿನಿ ಅನಂತ ಕುಮಾರ್ ಬಗ್ಗೆ ಅಪಾರ ಗೌರವವಿದೆ. ಟಿಕೆಟ್ ಕೊಟ್ಟಿಲ್ಲ ಅಂದ ತಕ್ಷಣ ಗೌರವ ಇಲ್ಲ ಎಂದು ಅರ್ಥವಲ್ಲ.

ಸದ್ಯ ತೇಜಸ್ವಿನಿ ಅವರ ಗೌರವ ಮತ್ತು ಸಾಮರ್ಥ್ಯವನ್ನು ಲೆಕ್ಕ ಹಾಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನೀಡಿರುವ ಅವಕಾಶ ಬಳಸಿಕೊಂಡು ತಮ್ಮನ್ನು ತಾವು ಪಕ್ಷದಲ್ಲಿ ಗುರುತಿಸಿಕೊಳ್ಳಬಹುದು. ಟಿಕೆಟ್ ನೀಡಿದ್ರೆ ಗೌರವ, ನೀಡಲ್ಲ ಅಂದ್ರೆ ಅಗೌರವ ಎಂದು ಹೇಳೋದು ತಪ್ಪಾಗುತ್ತದೆ. ಈ ರೀತಿ ಟಿಕೆಟ್ ನೀಡುವುದು ಪಕ್ಷಕ್ಕೆ ತುಂಬಾನೇ ಅಪಾಯಕಾರಿ. ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ಪಕ್ಷದಲ್ಲಿ ಅವರು ಬೆಳೆಯಬಹುದು ಎಂದು ಹೇಳುವ ಮೂಲಕ ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡಿದ್ದನ್ನು ಬಿ.ಎಲ್.ಸಂತೋಷ್ ಸಮರ್ಥಿಸಿಕೊಂಡಿದ್ದಾರೆ.

Advertisements

Leave a Reply

%d bloggers like this: