Advertisements

ಉಮೇಶ್ ಕತ್ತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ…?

ಲೋಕಸಭಾ ಚುನಾವಣೆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರು ಬರುವ ಸಾಧ್ಯತೆಗಳಿದೆ ಎನ್ನಲಾಗಿದೆ.

ಈಗಿನ ಲೆಕ್ಕಚಾರದ ಪ್ರಕಾರ, ಲೋಕಸಭೆ ಚುನಾವಣೆ ಮುಗಿಸಿ, ಕೇಂದ್ರದಲ್ಲಿ ಮೋದಿ ಮತ್ತೆ ಪ್ರಧಾನಿಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಉರುಳಿಸುವ ಕಾರ್ಯಾಚರಣೆ ಮತ್ತೆ ಪ್ರಾರಂಭಗೊಳ್ಳಲಿದೆ.

ನಿಂತು ಹೋಗಿರುವ ಆಪರೇಷನ್ ಕಮಲಕ್ಕೆ ಮತ್ತೆ ಚಾಲನೆ ಕೊಡುವುದು ಈಗಿನ ಲೆಕ್ಕಚಾರ. ಅಂದುಕೊಂಡಂತೆ ನಡೆದರೆ, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಒಬ್ಬರಿಗೆ ಒಂದೇ ಹುದ್ದೆ ಅನ್ನುವಂತೆ, ಬಿ.ಎಸ್​ ಯಡಿಯೂರಪ್ಪ ರಾಜ್ಯಾಧ್ಯಕ್ಷ ಹುದ್ದೆ ತ್ಯಜಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಪಕ್ಷದ ನೂತನ ಸಾರಥ್ಯಕ್ಕೆ ನಂಬಿಕಸ್ಥ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆಯಂತೆ. ಈಗಿನ ಲೆಕ್ಕಚಾರ ಪ್ರಕಾರ ಹುಕ್ಕೇರಿ‌ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ್ ಕತ್ತಿ ರಾಜ್ಯಾಧ್ಯಕ್ಷರಾಗುವ ಸಾಧ್ಯತೆಗಳಿದೆ.

ಉಮೇಶ್ ಕತ್ತಿಗೆ ಪಟ್ಟ ಕಟ್ಟಿದ್ರೆ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಿಜೆಪಿಯನ್ನು ಮತ್ತಷ್ಟು ಬೆಳೆಸಬಹುದು. ಅನ್ನೋದು ಬಿಎಸ್​ವೈ ಲೆಕ್ಕಾಚಾರ.

ಆದರೆ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷ ಹುದ್ದೆಯನ್ನು ಒಂದೇ ಸಮುದಾಯಕ್ಕೆ ಕೊಟ್ಟರೆ ತಪ್ಪು ಸಂದೇಶ ರವಾನೆಯಾಗುತ್ತದೆ ಅನ್ನುವ ಲೆಕ್ಕಚಾರವೂ ನಡೆಯುತ್ತಿದೆ. ಹೀಗಾಗಿ ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕರೂ ಅಚ್ಚರಿ ಇಲ್ಲ.

Advertisements

Leave a Reply

%d bloggers like this: