Advertisements

ಚುನಾವಣೆ ಮುಗಿದ ಬೆನ್ನಲ್ಲೇ ಸೆಟ್ಟೇರಲಿದೆ ಅಂಬಿ ಪುತ್ರನ ಮತ್ತೊಂದು ಸಿನಿಮಾ

ರೆಬಲ್ ಸ್ಟಾರ್ ಅಂಬರೀಷ್ ಮಗ, ನಟ ಅಭಿಷೇಕ್ ಅಂಬರೀಶ್, ಚಿತ್ರರಂಗದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಮೀರಿಸುವ ಲಕ್ಷಣ ಗೋಚರಿಸುತ್ತಿದೆ. ನಿಖಿಲ್ ಮಾಡಿರುವುದು ಎರಡೇ ಸಿನಿಮಾ, ಮುಂದೆ ಅವರ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ. ಮಂಡ್ಯ ಫಲಿತಾಂಶದ ಮೇಲೆ ಅವರ ಚಂದನವನದ ಭವಿಷ್ಯ ನಿರ್ಧಾರವಾಗಲಿದೆ.

ಆದರೆ ಅಭಿಷೇಕ್ ಅವರ ಚೊಚ್ಚಲ ಚಿತ್ರ ‘ಅಮರ್’ ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಅವರು ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ.

ನಿರ್ದೇಶಕ ಮಹೇಶ್ ರಾವ್ ಅಭಿಷೇಕ್ ಅವರ ಎರಡನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರಂತೆ. ಈ ಹಿಂದೆ ಮಹೇಶ್ ರಾವ್ ಅವರು ಯಶ್ ನಟನೆಯ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಈ ಮೊದಲು ‘ಅಂಬಿ’ ಸಿನಿಮಾ ಮಾಡಿ ಚಂದನವನದ ಗಮನ ಸೆಳೆದಿದ್ದ ನಿರ್ದೇಶಕ ಗುರುದತ್ ಗಾಣಿಗ, ಅಭಿ ಜೊತೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡುತ್ತಿತ್ತು.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸದ್ಯಕ್ಕೆ ಈ ಸಿನಿಮಾ ಇನ್ನೂ ಅನೌನ್ಸ್ ಆಗಿಲ್ಲವಂತೆ. ಚುನಾವಣೆ ನಂತ್ರ ಈ ಸಿನಿಮಾದ ಕೆಲಸ ಶುರುವಾಗಲಿದೆ.

Advertisements

One Comment on “ಚುನಾವಣೆ ಮುಗಿದ ಬೆನ್ನಲ್ಲೇ ಸೆಟ್ಟೇರಲಿದೆ ಅಂಬಿ ಪುತ್ರನ ಮತ್ತೊಂದು ಸಿನಿಮಾ

  1. Pingback: ಅಭಿಷೇಕ್ ಜೊತೆ ಮತ್ತೆ ಸ್ನೇಹಕ್ಕೆ ಹಸ್ತ ಚಾಚಿದ ನಿಖಿಲ್ ಕುಮಾರಸ್ವಾಮಿ – torrentspree

Leave a Reply

%d bloggers like this: