Advertisements

ಕರ್ನಾಟಕವೇನು…ದೇವೇಗೌಡರ ಅಪ್ಪನ ಮನೆ ಆಸ್ತೀನಾ..?ಪ್ರೀತಂಗೌಡರ ಪ್ರಶ್ನೆ ಉತ್ತರವೆಲ್ಲಿದೆ…

ರಾಮನಗರ ಗಂಡನಿಗೆ, ಚನ್ನಪಟ್ಟಣ ಹೆಂಡತಿಗೆ, ಮಂಡ್ಯ ಮಗನಿಗೆ, ಪಕ್ಕದ ಜಿಲ್ಲೆ ಹಾಸನ ಅಣ್ಣನ ಮಗನಿಗೆ. ಕರ್ನಾಟಕ ದೇವೇಗೌಡರ ಅಪ್ಪನ ಮನೆ ಆಸ್ತೀನಾ..? ಎಂದು ಹಾಸನ ಶಾಸಕ ಪ್ರೀತಂಗೌಡ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೌಡರೇನೂ ದೇವೇಗೌಡರ ಕುಟುಂಬಕ್ಕೆ ಜಿಪಿಎ ಮಾಡಿಕೊಟ್ಟಿಲ್ಲ. ನಾವು ಯಾರೂಹ ಬಾಂಡೆಡ್ ಲೇಬರ್ಸ್ ಅಲ್ಲ ಎಂದು ದೇವೇಗೌಡ ಹಾಗೂ ಅವರ ಕುಟುಂಬದ ತೀವ್ರ ವಾಗ್ದಾಳಿ ನಡೆಸಿದರು.

https://www.youtube.com/watch?v=0l9XVR5c4xs

ಮೊದಲು ಮನೆಯ ಕುಟುಂಬಸ್ಥರು ಆಸ್ತಿ ಭಾಗ ಮಾಡುವಾಗ ಮೇಲಿನ ಗದ್ದೆ ನಿನಗೆ, ಕೆಳಗಿನ ತೋಟ ತಮ್ಮನಿಗೆ, ನಡುವಿನದ್ದು ಮತ್ತೊಬ್ಬನಿಗೆ ಎಂದು ಹಂತಿಕೆ ಮಾಡುತ್ತಿದ್ದರು. ಹೀಗೆ ದೇವೇಗೌಡರು ಕರ್ನಾಟಕದ ಕ್ಷೇತ್ರಗಳನ್ನು ಮಕ್ಕಳು, ಮೊಮ್ಮಕಳಿಗೆ ಹಂಚುತ್ತಾ ಬರುತ್ತಿದ್ದಾರೆ. ದೇವೇಗೌಡ್ರ ಕುಟುಂಬಕ್ಕೆ ಮತ ಹಾಕಿದ್ರೆ ಅದು ಪ್ರೈವೇಟ್ ಪ್ರಾಪರ್ಟಿ ಇದ್ದ ಹಾಗೆ. ಬಿಜೆಪಿಗೆ ಮತ ಹಾಕಿದ್ರೆ ಅದು ದೇಶದ ಅಭಿವೃದ್ಧಿಗೆ. ಗೌಡರು ಎಂದ್ರೆ, ದೇವೇಗೌಡ್ರ ಕುಟುಂಬ ಮಾತ್ರ ಅಲ್ಲ. ಪ್ರತಾಪ್ ಸಿಂಹ, ನಾಗೇಂದ್ರ ಅವರು ಅಫಘಾನಿಸ್ತಾನದಿಂದ ಬಂದಿಲ್ಲ ಎಂದರು.

ಒಟ್ಟಿನಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಗಟ್ಟಿ ದನಿಯಲ್ಲಿ ಮಾತನಾಡಬಲ್ಲ ಮತ್ತೊಬ್ಬ ಒಕ್ಕಲಿಗ ಬಂದನಲ್ಲ ಅದುವೇ ಸಮಾಧಾನ.

Advertisements

Leave a Reply

%d bloggers like this: