Advertisements

ಸಂಸತ್ತಿಗೆ ಹೋಗಲು ನಿಖಿಲ್ – ಪ್ರಜ್ವಲ್ ದೇವೇಗೌಡರಿಗೆ ಊರುಗೋಲು….!

ಹಿಂದೆ ಚೆಲುವರಾಯಸ್ವಾಮಿ ಮತ್ತು ಸಿಎಸ್ ಪುಟ್ಟರಾಜು ದೇವೇಗೌಡರನ್ನು ಕೈ ಹಿಡಿದುಕೊಂಡು ಸಂಸತ್ತಿಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಅವರು ಜೊತೆಗಿಲ್ಲ. ಹೀಗಾಗಿ ಪ್ರಜ್ವಲ್ ಮತ್ತು ನಿಖಿಲ್ ನನ್ನು ಊರುಗೋಲು ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.

ಮೈಸೂರಿನ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವೇಗೌಡರು ಚುನಾವಣೆಗೂ ಮುನ್ನ ಸ್ಪರ್ಧಿಸುವುದಿಲ್ಲ ಅನ್ನುತ್ತಾರೆ. ಚುನಾವಣೆ ಘೋಷಣೆಯಾದ ಬಳಿಕ ಸ್ಪರ್ಧಿಸುತ್ತಾರೆ. ದೇವೇಗೌಡರಿಗೆ ಈಗ 86 ವರ್ಷವಾಗಿದೆ, ಮುಂದಿನ ಎಲೆಕ್ಷನ್ ಟೈಮ್ ನಲ್ಲಿ 91 ಆಗಿರುತ್ತದೆ. 100 ವರ್ಷ ಪೂರ್ಣಗೊಂಡ ಬಳಿಕವೇ ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬಹುದು ಎಂದರು.

ಮಂಡ್ಯದಲ್ಲಿ ಅನೇಕ ಸಮಸ್ಯೆಗಳಿವೆ, ಸಂಸತ್ತಿನಲ್ಲಿ ಈ ಕುರಿತು ಯಾರು ಮಾತನಾಡುವುದಿಲ್ಲ. ಇಷ್ಟು ವರ್ಷ ಕಳೆದರೂ ದೇವೇಗೌಡರಿಗೆ ಓರ್ವ ಸಮರ್ಥ ನಾಯಕನನ್ನು ಕೊಡಲು ಆಗಲಿಲ್ಲ. ಇದೀಗ ಮಂಡ್ಯಕ್ಕೆ ನಿಖಿಲ್ ಅಂತೆ, ಹಾಸನಕ್ಕೆ ಪ್ರಜ್ವಲ್ ಅಂತೆ ನಾಚಿಕೆ ಆಗಲ್ವಾ ನಿಮಗೆ ಎಂದು ಶ್ರೀನಿವಾಸ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರು ಮಾಜಿ ಪ್ರಧಾನಿಗಳು, ಅವರ ಬಗ್ಗೆ ಗೌರವ ಇದೆಯೇ ಹೊರತು ನಂಬಿಕೆ ಇಲ್ಲ ಎಂದು ವೇಳೆ ಶ್ರೀನಿವಾಸ್ ಪ್ರಸಾದ್ ಟೀಕಿಸಿದರು.

Advertisements

Leave a Reply

%d bloggers like this: