ನಿಖಿಲ್ ಬಿಟ್ರೆ ಬೇರೆ ಯಾವ ಗೌಡ್ರು ನಿಮಗೆ ಸಿಕ್ಕಿಲ್ವ…? ದಳಪತಿಗೆ ಅಭಿಮಾನಿಗಳ ಪ್ರಶ್ನೆ

ಮಂಡ್ಯಕ್ಕೆ ನಿಖಿಲ್ ಜನರ ಆಯ್ಕೆ, ಮಂಡ್ಯ ಮತದಾರರ ಒತ್ತಡ ಅನ್ನುವುದು ದಳಪತಿಗಳ ಮಾತು. ಆದರೆ ಮಂಡ್ಯದ ಪರಿಸ್ಥಿತಿ ನೋಡಿದರೆ ಇದು ಪಕ್ಕಾ Family plan ಅನ್ನುವುದು ಸ್ಪಷ್ಟವಾಗುತ್ತಿದೆ.

ಚಿತ್ರರಂಗದಲ್ಲಿ ನಿಖಿಲ್ ನೆಲೆಯೂರುವುದು ಕಷ್ಟ ಅನ್ನುವುದು ಅರಿವಾಗುತ್ತಿದ್ದಂತೆ ರಾಜಕೀಯಕ್ಕೆ ಎಳೆದು ತರಲಾಗಿದೆ ಅನ್ನುವುದರಲ್ಲಿ ಸಂಶಯವೇ ಇಲ್ಲ.

ಕಯಾಕೆಂದರೆ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಟ, ಮಾಜಿ ಸಚಿವ ದಿ. ಅಂಬರೀಷ್‌ ಅವರ ಪತ್ನಿ ಸುಮಲತಾ ಅಂಬರೀಷ್‌ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆ, ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದಿರುವ ಅನೇಕರು ವಾಗ್ದಾಳಿ ಪ್ರಾರಂಭಿಸಿದ್ದಾರೆ.

ಜೆಡಿಎಸ್ ಬೆಂಬಲಿಗರ, ಅಭಿಮಾನಿಗಳ ಫೇಸ್ ಬುಕ್ ಪೇಜ್ ಗಳಲ್ಲಿ ನಡೆಸುತ್ತಿರುವ ಪೋಲ್ ಗಳಲ್ಲೇ ಸುಮಲತಾ ಹೆಚ್ಚು ಲೈಕ್ ಪಡೆಯುತ್ತಿದ್ದಾರೆ.

ಈ ನಡುವೆ ನಿಖಿಲ್ ವಿರುದ್ಧ  ವಾಗ್ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿಖಿಲ್ ಬಿಟ್ಟು ಮತ್ಯಾರು ಟಿಕೆಟ್ ಆಕಾಂಕ್ಷಿಗಳು ಇರಲಿಲ್ಲವೇ? ಜೆಡಿಎಸ್ ಕಾರ್ಯಕರ್ತರು ಇರಲಿಲ್ಲವೇ? ಅಂತವರಿಗೆ ಟಿಕೆಟ್ ಕೊಡಬಹುದಿತ್ತು. ಕೊಲೆಯಾದ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಪತ್ನಿಗೆ ಕೊಡಬಹುದಿತ್ತು. ಮಾಜಿ ಸಚಿವ ದಿವಂಗತ ಎಸ್.ಟಿ.ಜಯರಾಂ ಅವರ ಪುತ್ರ ಅಶೋಕ್ ಜಯರಾಂಗೆ ಟಿಕೆಟ್ ನೀಡಬಹುದಿತ್ತು. ಹೀಗಿದ್ದರೂ ಯಾಕೆ ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ದೇವೇಗೌಡರು ಯಾವ ಗಳಿಗೆಯಲ್ಲಿ ಕೈಹಿಟ್ರೋ ಸ್ವಾಮಿ ಮುಂಚೂಣಿ ಮುಖಂಡನಾಗಿದ್ದ ಅಶೋಕ್ ಜಯರಾಂ ಸಾಮಾನ್ಯ ಕಾರ್ಯಕರ್ತರಾದರು. ಕಾರ್ಯಕರ್ತರೇ ಅಲ್ಲದ ನಿಖಿಲ್ ಎಂಪಿ ಟಿಕೆಟ್ ತಂದರು. ಇದು ನಿಮ್ಮ ಪಕ್ಷದ ಸಿದ್ಧಾಂತವೇ? ನಿಮ್ಮ ತಂದೆ(ಎಚ್.ಡಿ.ದೇವೇಗೌಡ)ಗೆ ಬಚ್ಚೇಗೌಡ್ರು ಆಧುನಿಕ ಭಸ್ಮಾಸುರ ಎಂದು ಬಿರುದು ಕೊಟ್ಟಿದ್ದರು. ಅದನ್ನು ನಿಜಾ ಮಾಡಿಬಿಟ್ಟಿದ್ದೀರಿ ಎಂದಿದ್ದಾರೆ.

ಜೆಡಿಎಸ್‌ ಅನ್ನು ಗೌಡರ ಪಕ್ಷ ಎಂದು ಬಿಂಬಿಸಿಕೊಂಡು ಬಂದಿದ್ದೀರಿ. ಆದರೆ ಮಂಡ್ಯದಲ್ಲಿ ಯಾರೂ ಗೌಡರೇ ಇರಲಿಲ್ಲವೇ? ಸುಮಲತಾ ಅಕ್ಕ ಅವರ ಕೊಡುಗೆ ಏನು ಅಂತ ಕೇಳುತ್ತೀರಿ. ಹಾಗಾದ್ರೆ ನಿಮ್ಮ ಹೆಂಡತಿ ಕೊಡುಗೆ ಏನು? ನಿಮ್ಮ ತಾಯಿ ಚನ್ನಮ್ಮ ಅವರಿಗೆ ನಿಜಕ್ಕೂ ಅನ್ಯಾಯವಾಗಿದೆ. ಇಳಿ ವಯಸ್ಸಿನಲ್ಲಿ ಅವರನ್ನು ಎಂಎಲ್‌ಸಿ ಮಾಡಿ ಸಚಿವರನ್ನಾಗಿ ಮಾಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅದ್ಯಾಕೋ ನಿಖಿಲ್ ಕೈ ಇಟ್ಟ ಕೆಲಸವೆಲ್ಲಾ ಪ್ಲಾಪ್ ಆಗುತ್ತಿದೆ. ಕಸ್ತೂರಿ ವಾಹಿನಿಯನ್ನು ಮುನ್ನಡೆಸಲಾಗಲಿಲ್ಲ. ಕೈ ಹಾಕಿದ ವ್ಯವಹಾರ ಕೈ ಹಿಡಿಯಲಿಲ್ಲ, ಚಂದನವನವೂ ಅಪ್ಪಿಕೊಳ್ಳಲಿಲ್ಲ. ಕೊನೆಯ ಆಯ್ಕೆ ಮಂಡ್ಯ.

ಮತದಾರರ ಹಣೆ ಬರಹ ಬರೆಯುವುದೊಂದು ಬಾಕಿ.

Advertisements

One Comment on “ನಿಖಿಲ್ ಬಿಟ್ರೆ ಬೇರೆ ಯಾವ ಗೌಡ್ರು ನಿಮಗೆ ಸಿಕ್ಕಿಲ್ವ…? ದಳಪತಿಗೆ ಅಭಿಮಾನಿಗಳ ಪ್ರಶ್ನೆ

  1. Pingback: ಕರ್ನಾಟಕವೇನು…ದೇವೇಗೌಡರ ಅಪ್ಪನ ಮನೆ ಆಸ್ತೀನಾ..?ಪ್ರೀತಂಗೌಡರ ಪ್ರಶ್ನೆ ಉತ್ತರವೆಲ್ಲಿದೆ… – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: