ಹಾಸನ ಬಿಟ್ರೆ ಮತ್ತೆಲ್ಲೂ ಜೆಡಿಎಸ್ ಗೆಲ್ಲೋದಿಲ್ಲ : ದಳಪತಿಗಳಿಗೆ ಶಾಕ್ ಕೊಟ್ಟ ಸಿದ್ದರಾಮಯ್ಯ

ಲೋಕಸಭೆ ಚುನಾವಣೆ ಸಜ್ಜಾಗಿರುವ ಜೆಡಿಎಸ್, ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲೇ ಪಕ್ಷದ ಬಲ ವೃದ್ಧಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಲೋಕಸಮರದಲ್ಲಿ ನಮಗೆ 12 ಸ್ಥಾನ ಬೇಕು ಎಂದು ಕಾಂಗ್ರೆಸ್ ಮುಂದೆ ಪಟ್ಟು ಹಿಡಿದು ಕೂತಿದೆ.

ಸೋಮವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ.ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳು ಬೇಕೇ ಬೇಕು ಎಂದು ದಳಪತಿಗಳು ಹಠ ಹಿಡಿದಿದ್ದಾರೆ.

ಆದರೆ 12 ಎಲ್ಲಾ ಆಗೋದಿಲ್ಲ, ಬೇಕಿದ್ದರೆ 6 ಕೊಡ್ತೀವಿ ಎಂದು ಕಡ್ಡಿ ಮುರಿದಂತೆ ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕೂ ಅವರ ಕಾರಣಗಳನ್ನು ಕೂಡಾ ದಳಪತಿಗಳಿಗೆ ವಿವರಿಸಿದ್ದಾರೆ ಎಂದು ಸುದ್ದಿ ವಾಹಿನಿಯೊಂದರ ವರದಿ ತಿಳಿಸಿದೆ.

ಜೆಡಿಎಸ್ ನ ತಾಕತ್ತೇನು ಅನ್ನುವುದನ್ನು ವಿವರಿಸುವ ಸಲುವಾಗಿಯೇ ಸಮನ್ವಯ ಸಮಿತಿ ಸಭೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕರೆಸಿಕೊಂಡಿದ್ದ ಸಿದ್ದರಾಮಯ್ಯ, ಕೆಪಿಸಿಸಿ ನಡೆಸಿದ ಸಮೀಕ್ಷೆ ವರದಿಯನ್ನು ಮಂಡಿಸಿದ್ದಾರೆ.

ರಾಜ್ಯದ 28 ಕ್ಷೇತ್ರಗಳ ಸಮೀಕ್ಷಾ ವರದಿ ಪ್ರಕಾರ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ ಕಾಂಗ್ರೆಸ್ 15 ಮತ್ತು ಜೆಡಿಎಸ್ 5 ಸ್ಥಾನಗಳನ್ನು ಗೆಲ್ಲಲಿದೆ. ಒಂದು ವೇಳೆ ಉಭಯ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ, ಹಾಸನದಲ್ಲಿ ಮಾತ್ರ ಜೆಡಿಎಸ್ ಗೆಲ್ಲಲಿದೆಯಂತೆ.

ಜೊತೆಗೆ ರಾಜ್ಯದಲ್ಲಿ ಜೆಡಿಎಸ್ ಪರ ಅಲೆ ಇಲ್ಲ ಅನ್ನುವ ಮಾತನ್ನು ಸಿದ್ದರಾಮಯ್ಯ ದಳಪತಿಗಳಿಗೆ ತಿಳಿ ಹೇಳಿದ್ದಾರೆ.

ಆದರೆ ಈ ಸಮೀಕ್ಷಾ ವರದಿಯನ್ನು ಒಪ್ಪಲು ಸಿದ್ದರಿಲ್ಲದ ದಳಪತಿಗಳು ರಾಹುಲ್ ಗಾಂಧಿ ಅಂಗಳದಲ್ಲೇ ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡೋಣ ಅಂದಿದ್ದಾರಂತೆ. ಜೊತೆಗೆ ಈಗ ಪರಿಸ್ಥಿತಿ ಬದಲಾಗಿದೆ. ಜೆಡಿಎಸ್ ಪರ ಅಲೆ ಇಲ್ಲ ಅನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಮತ್ತೊಂದು ಸಮೀಕ್ಷೆ ನಡೆಸಿ ಎಂದು ಕೋರಿದ್ದಾರೆ.

ಹಾಗಾದರೆ ಸಿದ್ದರಾಮಯ್ಯ ಹೇಳುವಂತೆ ರಾಜ್ಯದಲ್ಲಿ ಜೆಡಿಎಸ್ ಪರ ಅಲೆ ಇಲ್ಲವೇ… ಸಿದ್ದರಾಮಯ್ಯ ಹೇಳುವ ಮಾತಿನಲ್ಲಿ ಸತ್ಯಾಂಶವಿದೆ. ರಾಜ್ಯದಲ್ಲಿ ಜೆಡಿಎಸ್ ಪ್ರಭಾವ ಕುಗ್ಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿತ್ತು. ಹೀಗಾಗಿ ಜನ ಜೆಡಿಎಸ್ ಅನ್ನು ಬೆಂಬಲಿಸಿದ್ದರು. ಯಾವಾಗ ಕಾಂಗ್ರೆಸ್ ಜೊತೆ ಜೆಡಿಎಸ್ ಕೈ ಜೋಡಿಸಿತೋ, ಜೆಡಿಎಸ್ ಪರ ಮತ ಚಲಾಯಿಸಿದ ಬಹುತೇಕ ಮತದಾರರು ನೊಂದುಕೊಂಡಿದ್ದಾರೆ.

ಹೀಗಾಗಿ ಕುಮಾರಸ್ವಾಮಿ ಮೇಲೆ ಮತದಾರರಿಗೆ ಒಲವಿದೆ ಹೊರತು ಪಕ್ಷದ ಮೇಲಿಲ್ಲ.

Advertisements

One Comment on “ಹಾಸನ ಬಿಟ್ರೆ ಮತ್ತೆಲ್ಲೂ ಜೆಡಿಎಸ್ ಗೆಲ್ಲೋದಿಲ್ಲ : ದಳಪತಿಗಳಿಗೆ ಶಾಕ್ ಕೊಟ್ಟ ಸಿದ್ದರಾಮಯ್ಯ

  1. Pingback: ಕರ್ನಾಟಕವೇನು…ದೇವೇಗೌಡರ ಅಪ್ಪನ ಮನೆ ಆಸ್ತೀನಾ..?ಪ್ರೀತಂಗೌಡರ ಪ್ರಶ್ನೆ ಉತ್ತರವೆಲ್ಲಿದೆ… – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: