Advertisements

ಬಿಜೆಪಿ ನಾಯಕರು ಆತುರಗೆಟ್ಟ ಆಂಜನೇಯನಂತೆ ಯಾಕಾಡ್ತಾರೆ…?

ಯಾಕೋ ಬಿಜೆಪಿ ನಾಯಕರಿಗೆ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಆತುರ. ಜನರ ಭಾವನೆಗಳು ಅವರಿಗೆ ಅರ್ಥವಾಗುವಂತೆ ಕಾಣಿಸುತ್ತಿಲ್ಲ.

ಅದಕ್ಕೊಂದು ಉದಾಹರಣೆ ಮಲ್ಪೆಯಲ್ಲಿ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಕೊಟ್ಟ ಭಾಷಣ.

ಮಲ್ಪೆಯಿಂದ ನಾಪತ್ತೆಯಾಗಿರುವ ಮೀನುಗಾರರಿಗೆ ಇಡೀ ಕರಾವಳಿ ಕಾಯುತ್ತಿದೆ. ಮನೆಯವರು ದೈವ ದೇವರು ಎಂದು ಮೊರೆ ಹೋಗಿದ್ದಾರೆ. ಪೊಲೀಸರು, ಕರಾವಳಿ ಕಾವಲು ಪಡೆ, ನೌಕಾ ದಳ, ನಾಪತ್ತೆಯಾದ ಮೀನುಗಾರರಿಗೆ ಹುಡುಕಾಟ ಮುಂದುವರಿಸಿದೆ.

ಈ ನಡುವೆ ಭಾನುವಾರ ಮಲ್ಪೆಯ ಕಡಲ ತೀರದಲ್ಲಿ ನಮೋ ಭಾರತ್ ಹಮ್ಮಿಕೊಂಡಿದ್ದ ಪಾಂಚಜನ್ಯ ಸಮಾವೇಶದಲ್ಲಿ ಮಾತನಾಡಿದ ಮೀನಾಕ್ಷಿ ಲೇಖಿ, ಭಾರತದ ಕೆಲವು ಮೀನುಗಾರರು ದುಬೈಯಲ್ಲಿ ಪತ್ತೆಯಾಗಿದ್ದು, ಅವರನ್ನು ಕರೆ ತರುವ ಪ್ರಯತ್ನ ನಡೆಯುತ್ತಿದೆ ಅಂದಿದ್ದಾರೆ.

ಪ್ರೇಕ್ಷಕರ ಕಡೆಯಿಂದ ಬಂದ ಚೀಟಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕ್ರಮ ಮುಗಿದ ಮೇಲೆ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದ್ರೆ, ಭಾರತದ ಕೆಲ ಮೀನುಗಾರರು ದುಬೈನಲ್ಲಿ ಪತ್ತೆಯಾಗಿದ್ದಾರೆ ಅನ್ನುವ ಮಾಹಿತಿ ಲಭಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಅಂದಿದ್ದಾರೆ. ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ ಇಬ್ಬರು ಮೀನುಗಾರರು ದುಬೈನಲ್ಲಿ ಪತ್ತೆಯಾಗಿದ್ದಾರೆ ಅನ್ನುವ ಮಾಹಿತಿ ನಿಜ. ಆದರೆ ಅವರು ಮಲ್ಪೆ ಮೀನುಗಾರರೇ ಅನ್ನುವುದು ಪಕ್ಕಾ ಆಗಿಲ್ಲ ಅಂದಿದ್ದಾರೆ.

ಮಲ್ಪೆ ಪ್ರದೇಶಕ್ಕೆ ಬಂದು, ನಾಪತ್ತೆಯಾಗುವ ಮೀನುಗಾರರ ಬಗ್ಗೆ ಮಾತನಾಡುವಾಗ ಮೀನಾಕ್ಷಿ ಲೇಖಿ ಎಚ್ಚರವಾಗಿರಬೇಕಿತ್ತು. ದುಬೈ ನಲ್ಲಿ ಪತ್ತೆಯಾದ ಮೀನುಗಾರರು ಭಾರತದ ಯಾವ ಭಾಗದವರು ಅನ್ನುವುದೇ  ಗೊತ್ತಿಲ್ಲ. ಅಂದ ಮೇಲೆ ನೋವು ತುಂಬಿದ ಮನಸ್ಸಿಗೆ ಹೊಸ ಕನಸು ಬಿತ್ತುವ ಕೆಲಸ ಬೇಕಾಗಿತ್ತ..?

ಒಂದು ವೇಳೆ ನಾಪತ್ತೆಯಾದ ಮಲ್ಪೆ ಮೀನುಗಾರರು ದುಬೈನಲ್ಲಿ ಇರುವುದು ಖಚಿತವಾದರೆ, ಮೊದಲಿಗೆ ಸಿಹಿ ಕೊಟ್ಟ ನಿಮ್ಮನ್ನು ಖಂಡಿತಾ ಅಭಿನಂದಿಸುತ್ತೇವೆ.

ಇನ್ನು ಇದಕ್ಕೂ ಮುನ್ನ ಮಂಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕೊಟ್ಟಿರುವ 22 ಸೀಟುಗಳ ಹೇಳಿಕೆ, ಅದು ಅವರ ವೈಯುಕ್ತಿಕ ಹೇಳಿಕೆ. ಪಕ್ಷದ ಹೇಳಿಕೆಯಲ್ಲ ಅಂದಿದ್ದಾರೆ.

ಹಾಗಾದರೆ ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿ ಇದು ನನ್ನ ವೈಯುಕ್ತಿಕ ಹೇಳಿಕೆ ಎಂದು ಏನು ಬೇಕಾದರೂ ಹೇಳಬಹುದೇ..?

Advertisements

Leave a Reply

%d bloggers like this: